ಕೇಬಲ್, DTH ಚಂದಾದಾರರಿಗೆ ಗುಡ್ ನ್ಯೂಸ್ ; ಕಡಿಮೆಯಾಗಲಿದೆ ನಿಮ್ಮ ಮಾಸಿಕ ಬಿಲ್

ದಿನನಿತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಡಿಟಿಹೆಚ್ ಹಾಗೂ ಕೇಬಲ್ ಟಿವಿ ದರಗಳು ಹೆಚ್ಚಾಗುತ್ತಿದ್ದು, ಜನಸಾಮಾನ್ಯರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಮನೆಯಲ್ಲಿ ಸಮಯ ಕಳೆಯಲು, ಟೆನ್ಶನ್ ನಿಂದ ರಿಲೀಫ್ ಪಡೆಯಲು ಟಿವಿ ಮನೋರಂಜನೆ ಇರಲೇಬೇಕು. ಸದ್ಯ, ನಡುವೆ ಡಿಟಿಹೆಚ್ ಹಾಗೂ ಕೇಬಲ್ ಚಂದಾದಾರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಶೀಘ್ರವೇ ಮಾಸಿಕ ಬಿಲ್ ಇಳಿಕೆಯಾಗಲಿದೆ.

ಹೌದು. ಟ್ರಾಯ್ ಅಥವಾ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಎಸ್ಟಿಬಿ ಸೆಟ್ ಟಾಪ್ ಬಾಕ್ಸ್ಗಳನ್ನು ಪರಸ್ಪರ ಕಾರ್ಯನಿರ್ವಹಿಸುವಂತೆ ಮಾಡಲು ಶಿಫಾರಸು ಮಾಡಿದೆ. ಈ ಕ್ರಮದಿಂದ, ಗ್ರಾಹಕರು ತಮ್ಮ ಸೆಟ್ ಟಾಪ್ ಬಾಕ್ಸ್ ಗಳನ್ನು ಬದಲಾಯಿಸದೆ ಒಂದು ಆಪರೇಟರ್ ನಿಂದ ಇನ್ನೊಂದಕ್ಕೆ ಬದಲಾಯಿಸಲು ಸಾಧ್ಯವಾಗುತ್ತದೆ.

ಸೆಟ್-ಟಾಪ್ ಬಾಕ್ಸ್ಗಳನ್ನು ಬದಲಾಯಿಸದೇ ಒಂದು ಸೇವಾದಾರರಿಂದ ಮತ್ತೊಂದು ಸೇವಾದಾರರಿಗೆ ಬದಲಾಯಿಸಿಕೊಳ್ಳುವುದಕ್ಕೆ ಅವಕಾಶ ನೀಡುತ್ತಿದೆ. ಆದ್ದರಿಂದ ಸೆಟ್ಅಪ್ ಬಾಕ್ಸ್ಗೆ ಪದೇ ಪದೇ ಹಣ ಪಾವತಿಸುವುದು ಬೇಡ. . ಜತೆಗೆ ಒಟ್ಟು ಬಿಲ್ ಕೂಡ ಅಗ್ಗವಾಗಲಿದೆ.

ಸೇವಾ ಪೂರೈಕೆದಾರರು ಗ್ರಾಹಕರಿಗೆ ವಿಧಿಸುವ ಎನ್ಸಿಎಫ್ ಅಥವಾ ನೆಟ್ವರ್ಕ್ ಸಾಮರ್ಥ್ಯ ಶುಲ್ಕವನ್ನು ಟ್ರಾಯ್ ತೆಗೆದುಹಾಕಿದೆ ಎಂದು ಹೇಳಲಾಗಿದೆ. ಅಂದರೆ 200 ಚಾನೆಲ್ ಗಳಿಗೆ 130 ರೂ., 200 ಕ್ಕೂ ಹೆಚ್ಚು ಚಾನೆಲ್ ಗಳಿಗೆ 160 ರೂ. ಸೇವಾ ಪೂರೈಕೆದಾರರಿಗೆ ಸ್ಪರ್ಧಾತ್ಮಕ ಮನೋಭಾವ ಮತ್ತು ಪ್ರಾದೇಶಿಕ ಸಮಸ್ಯೆಗಳು ಇತ್ಯಾದಿಗಳ ಹೆಸರಿನಲ್ಲಿ ಕಡಿಮೆ ಶುಲ್ಕ ವಿಧಿಸುವ ಆಯ್ಕೆಯನ್ನು ನೀಡಲಾಗಿದೆ.

Leave a Reply

Your email address will not be published. Required fields are marked *