ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನದ ಬೆಲೆ ಇಳಿಕೆ

ಬೆಂಗಳೂರು: ಆಭರಣ ಪ್ರಿಯರಿಗೆ ಮತ್ತೆ ಗುಡ್ನ್ಯೂಸ್ ಸಿಕ್ಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡುಬಂದಿದ್ದು, ಶನಿವಾರ (ಆಗಸ್ಟ್ 03)ದಂದು ಬಂಗಾರದ ಬೆಲೆ ಕಡಿಮೆಯಾಗಿದ್ದು, ಬೆಳ್ಳಿ ಬೆಲೆಯಲ್ಲೂ ಸಹ ಇಳಿಕೆಯಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಶನಿವಾರ (ಆ.03) ಇಳಿಕೆಯಾಗಿದೆ. ಕೇಂದ್ರ ಬಜೆಟ್ ಬಳಿಕ ಬಂಗಾರದ ಬೆಲೆ ಹೆಚ್ಚಳವಾಗಿತ್ತು. ಅಲ್ಲದೇ ಕಳೆದ ಒಂದು ವಾರದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ವ್ಯತ್ಯಾಸವಾಗಿದ್ದು, ಇದೀಗ ಚಿನ್ನದ ಬೆಲೆ ಮತ್ತಷ್ಟು ಇಳಿಕೆ ಕಂಡಿದೆ.

ದೇಶೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದಲ್ಲಿ ಮತ್ತೆ ಇಳಿಕೆ ಕಂಡುಬಂದಿದ್ದು, ಚಿನ್ನದ ಜೊತೆಗೆ ಬೆಳ್ಳಿ ಬೆಲೆ ಸಹ ತಗ್ಗಿದೆ. ದೇಶದ ರಾಜಧಾನಿ ನವ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 100 ರೂಪಾಯಿ ಇಳಿಕೆಗೊಂಡು 64,700 ರೂಪಾಯಿ ತಲುಪಿದ್ದು, ಇದೇ ವೇಳೆಯಲ್ಲಿ ಶುದ್ಧ ಚಿನ್ನದ ಬೆಲೆ ಅಥವಾ 24 ಕ್ಯಾರೆಟ್ ಚಿನ್ನ 10 ಗ್ರಾಂ 110 ರೂಪಾಯಿ ಕಡಿಮೆಯಾಗಿ 70,580 ರೂಪಾಯಿ ದಾಖಲಾಗಿದೆ. ಇನ್ನೂ, ಬೆಳ್ಳಿ ಬೆಲೆ ಕೆಜಿಗೆ 1700 ರೂಪಾಯಿ ಇಳಿಕೆಗೊಂಡಿದ್ದು, ಕೆಜಿಗೆ ಬೆಳ್ಳಿಯ ಬೆಲೆ 85,500 ರೂಪಾಯಿಯಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

  • ದೆಹಲಿಯಲ್ಲಿ ಶುದ್ಧ ಚಿನ್ನ10 ಗ್ರಾಂ ಚಿನ್ನದ ಬೆಲೆ ₹70,730
  • ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹70,580
  • ನಾಗ್ಪುರದಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ ₹70,580
  • ಮುಂಬೈನಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ ₹70,580
  • ಚೆನ್ನೈನಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ ₹70,360
  • ಕೋಲ್ಕತ್ತಾದಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ ₹70,580
  • ಪಾಟ್ನಾದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹70,630
  • ಸೂರತ್ನಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ ₹70,630
  • ಚಂಡೀಗಢದಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ ₹70,730
  • ಲಕ್ನೋದಲ್ಲಿ ಶುದ್ಧ ಚಿನ್ನ 10 ಗ್ರಾಂ ಚಿನ್ನದ ಬೆಲೆ ₹70,730

Leave a Reply

Your email address will not be published. Required fields are marked *