6 ವರ್ಷಗಳ ನಂತರ ಸಂಚಾರಕ್ಕೆ ಮುಕ್ತವಾಗಲಿದೆ ಈ ರಸ್ತೆ.
ಬೆಂಗಳೂರು : ಬಿಎಂಆರ್‌ಸಿಎಲ್ ಬೆಂಗಳೂರಿನ ಈ ಭಾಗದ ಜನರಿಗೆ ಒಂದು ಸಿಹಿಸುದ್ದಿ ನೀಡಿದೆ. ಬಹಳ ವರ್ಷಗಳ ನಂತರ ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ. ಇದು ಈ ನಗರದಲ್ಲಾಗುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಲಿದೆ. ಕಬ್ಬನ್ ರಸ್ತೆ ಮತ್ತು ಎಂಜಿ ರಸ್ತೆಯ ಕಾವೇರಿ ಎಂಪೋರಿಯಂ ಜಂಕ್ಷನ್ ನಡುವಿನ ಜನನಿಬಿಡ ಸಂಪರ್ಕವಾದ ಕಾಮರಾಜ್ ರಸ್ತೆಯು ಜನವರಿ 2026 ರ ಮೊದಲ ವಾರದಲ್ಲಿ ದ್ವಿಮುಖ ಸಂಚಾರಕ್ಕಾಗಿ ಸಂಪೂರ್ಣವಾಗಿ ಮತ್ತೆ ತೆರೆಯುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ. ಈ ರಸ್ತೆಯಲ್ಲಿ ದೊಡ್ಡ ಮಟ್ಟದ ಜನ ದಟ್ಟಣೆಗಳು ಆಗುತ್ತಿತ್ತು. ವ್ಯವಹಾರಿಕ ಕೇಂದ್ರವಾಗಿರುವ ಈ ರಸ್ತೆಯಲ್ಲಿ ಇನ್ನು ಮುಂದೆ ಈ ಜನ ದಟ್ಟಣೆ ಕಡಿಮೆ ಆಗಲಿದೆ ಎಂದು ಹೇಳಲಾಗಿದೆ.
ಎಂಜಿ ರಸ್ತೆಯಲ್ಲಿ ಪರ್ಪಲ್ ಲೈನ್ ಹಾಗೂ ಇನ್ನು ಮುಂದೆ ಬರಲಿರುವ ಪಿಂಕ್ ಲೈನ್ ಮೆಟ್ರೋ ಭೂಗತ ಇಂಟರ್-ಚೇಂಜ್ ನಿಲ್ದಾಣವನ್ನು ನಿರ್ಮಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಈ ರಸ್ತೆಯಲ್ಲಿ ಕಾಮಗಾರಿಯನ್ನು 2019ರಲ್ಲಿ ಪ್ರಾರಂಭಿಸಿತ್ತು. 2023ರ ವೇಳೆ ಇದರ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ಹೇಳಿತ್ತು. ಆದರೆ ಕೊರೊನಾದಿಂದ ಈ ಕಾರ್ಯ ಮುಂದುವರಿಸಲು ಆಗಲಿಲ್ಲ. ಇದರ ಜತೆಗೆ ಸಂಕೀರ್ಣ ಸುರಂಗ ಕೊರೆಯುವ ಕಾರ್ಯಾಚರಣೆಗಳು ಮತ್ತು ಇತರ ತಾಂತ್ರಿಕ ಅಡಚಣೆಗಳಿಂದ ಹೇಳಿದ ಸಮಯಕ್ಕೆ ಪೂರ್ಣಗೊಳಿಸಲು ಆಗಿಲ್ಲ. ಇದೀಗ ಇದರ ಕಾಮಾಗಾರಿ ಪೂರ್ಣಗೊಳ್ಳುತ್ತ ಬಂದಿದೆ ಎಂದು ಹೇಳಿದೆ.
For More Updates Join our WhatsApp Group :




