ಬೆಂಗಳೂರು: KSRTCಯು ಪ್ರಯಾಣಿಕರಿಗೆ ಅನುಕೂಲ ಆಗುವಂತೆ ವಿವಿಧ ಮಾರ್ಗಗಳಲ್ಲಿ ಬಸ್ಗಳನ್ನು ವ್ಯವಸ್ಥೆಯನ್ನು ಕಲ್ಪಿಸುತ್ತಲೇ ಇರುತ್ತದೆ. ಇದೀಗ ಮೈಸೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ ಸಂಚಾರ ಮಾಡುವ ಐಟಿ ವಲಯದ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ.
ಹಾಗಾದರೆ ಸಂಪೂರ್ಣ ಮಾಹಿತಿ ಏನೆಂದು ಇಲ್ಲಿ ನೀಡಲಾಗಿದೆ ಗಮನಿಸಿ.
ಪ್ರತಿವಾರ ಮೈಸೂರಿನಿಂದ ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವ ಟೆಕ್ಕಿಗಳು ಬೆಂಗಳೂರಿನ ಟ್ರಾಫಿಕ್ನಲ್ಲಿ ಸಮಯವನ್ನು ವ್ಯರ್ಥ ಮಾಡಿಕೊಳ್ಳದೇ ಸಾಗುವಂತಹ ಅನುಕೂಲವನ್ನು ಕಲ್ಪಿಸಲು ಕೆಎಸ್ಆರ್ಟಿಸಿ ನಿರ್ಧರಿಸಿದೆ. ಸಮಯಗಳ ವುವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಮೈಸೂರಿನಿಂದ ಬೆಂಗಳೂರಿಗೆ ಪ್ರತಿ ಸೋಮವಾರ ಬೆಳಗ್ಗೆ ಹೊರಡುವ ಕೆಎಸ್ಆರ್ಟಿಸಿ ವೋಲ್ವೋ ಮಾದರಿಯ ಬಸ್ಸುಗಳು, ಬೆಂಗಳೂರಿಗೆ ಹತ್ತಿರ ಆಗಮಿಸುತ್ತಲೇ ನೈಸ್ ರಸ್ತೆಯತ್ತ ತಿರುಗಿ ನೇರವಾಗಿ ಬೆಂಗಳೂರಿನ ಐಟಿ ಕಾರಿಡಾರ್ಗೆ ಹೋಗಲಿವೆ. ಹಾಗೆಯೇ ಪ್ರತಿ ಶುಕ್ರವಾರ ಸಂಜೆ ಐಟಿ ಕಾರಿಡಾರ್ನಿಂದ ಹೊರಡಲಿರುವ ಈ ಬಸ್ಸುಗಳು ನೈಸ್ ರಸ್ತೆಯ ಮೂಲಕ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ತಲುಪಿ ಅಲ್ಲಿಂದ ಮೈಸೂರಿಗೆ ಪ್ರಯಾಣ ಬೆಳೆಸಲಿವೆ.
ಅಂದರೆ, ಈ ಟೆಕ್ಕಿಗಳು ಬೆಂಗಳೂರು ನಗರವನ್ನು ಪ್ರವೇಶಿಸದೆಯೇ ಮೈಸೂರು-ಬೆಂಗಳೂರು ನಡುವೆ ಸಂಚಾರ ಮಾಡಬಹುದಾಗಿದ್ದು, ಇದರಿಂದ 45 ನಿಮಿಷದಷ್ಟು ಸಮಯ ಉಳಿತಾಯ ಆದಂತಾಗಲಿದೆ.
ನಮಗೆ ಈ ಮಾರ್ಗದಲ್ಲಿ ನೇರ ಬಸ್ಗಳ ಸೌಲಭ್ಯವಿಲ್ಲದೆ, ತುಂಬಾ ತೊಂದರೆ ಅನುಭವಿಸುತ್ತಿದ್ದವು. ಆದ್ದರಿಂದ ಈ ಸೌಲಭ್ಯವನ್ನು ಕೊಡಿ ಎಂದು ಟೆಕ್ಕಿಗಳೇ ಕೆಎಸ್ಆರ್ಟಿಸಿಗೆ ಮೊದಲಿಗೆ ಒತ್ತಾಯ ಮಾಡಿದ್ದರು. ಮೈಸೂರಿನಿಂದ ಬೆಂಗಳೂರಿಗೆ ಬಂದು, ಬೆಂಗಳೂರು ಪ್ರವೇಶಿಸುತ್ತಲೇ ಸಿಗುವ ಸ್ಯಾಟಲೈಟ್ ಬಸ್ ಸ್ಟ್ಯಾಂಡ್ನಲ್ಲಿ ಇಳಿದು ಅಲ್ಲಿಂದ ಐಟಿ ಕಾರಿಡಾರ್ಗೆ ತೆರಳುವ ಬಸ್ಸುಗಳನ್ನು ಹತ್ತಿಕೊಂಡು, ನೈಸ್ ರಸ್ತೆಯ ಮೂಲಕ ತಮ್ಮ ಕಂಪನಿಗಳತ್ತ ಪ್ರಯಾಣ ಮಾಡಬೇಕಿತ್ತು. ಆ ಬಸ್ಸುಗಳಲ್ಲಿ ಸೀಟು ಕೂಡ ಸಿಗುತ್ತಿರಲಿಲ್ಲ.
ಆದ್ದರಿಂಸ ಕೆಲವೊಮ್ಮೆ ನಿಂತುಕೊಂಡು ಹೋಗಬೇಕಿತ್ತು. ಇಲ್ಲವೇ, ಸೀಟ್ಗಾಗಿ ಬೇರೆ ಬಸ್ಗಳನ್ನು ಕಾಯ್ದು ಅದರಲ್ಲಿ ಹತ್ತಬೇಕಿತ್ತು. ಈ ಸರ್ಕಸ್ಗೆ ಏನಿಲ್ಲ ಎಂದರೂ 40ರಿಂದ 45 ನಿಮಿಷ ವ್ಯರ್ಥ ಆಗುತ್ತಿತ್ತು. ಆದ್ದರಿಂದ ಮೈಸೂರಿಂದ ಬರುವ ಟೆಕ್ಕಿಗಳು ಬೆಂಗಳೂರು ನಗರವನ್ನು ಪ್ರವೇಶಿಸದೆಯೇ, ಬೆಂಗಳೂರು ಹೊರವಲಯದಲ್ಲಿರುವ ನೈಸ್ ರಸ್ತೆಯ ಕಡೆಗೆ ತಿರುವು ಪಡೆದುಕೊಂಡು ನೈಸ್ ರಸ್ತೆಯ ಮೂಲಕ ನೇರವಾಗಿ ಐಟಿ ಕಾರಿಡಾರ್ಗೆ ಹೋಗಬೇಕು. ಆದರೆ, ಅದಕ್ಕಾಗಿ ಟೆಕ್ಕಿಗಳಿಗಾಯೇ ಎಂದು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಬೇಕೆಂದು ಇತ್ತೀಚೆಗೆ ಮನವಿ ಸಲ್ಲಿಸಿದ್ದರು.