ನೆಲ್ಲಿಕಾಯಿ ಬೀಜ: ತ್ಯಾಜ್ಯವಲ್ಲ, ಆಯುರ್ವೇದೀಯ ಪವರ್‌ಹೌಸ್.

ನೆಲ್ಲಿಕಾಯಿ ಬೀಜ: ತ್ಯಾಜ್ಯವಲ್ಲ, ಆಯುರ್ವೇದೀಯ ಪವರ್‌ಹೌಸ್.

ಪತಂಜಲಿ ಸಂಶೋಧನೆಯಿಂದ ಬೆಂಬಲಿತ ಆರೋಗ್ಯ ಲಾಭ.

ಅತಿ ಪ್ರಬಲ ಹೀಲಿಂಗ್ ಗುಣ ಇರುವ ಹಣ್ಣುಗಳಲ್ಲಿ ಆಮ್ಲವೂ ಒಂದು. ರೋಗನಿರೋಧಕ ಶಕ್ತಿಯಿಂದ ಜೀರ್ಣಕ್ರಿಯೆಯವರೆಗೆ ಅನೇಕ ಪ್ರಯೋಜನಗಳನ್ನು ಇದು ಹೊಂದಿದೆ. ಆದರೆ ಈ ನೆಲ್ಲಿಕಾಯಿಯ ಒಂದು ಭಾಗವನ್ನು ಹೆಚ್ಚಿನ ಜನರು ನಿರ್ಲಕ್ಷಿಸುತ್ತಾರೆ. ಆ ಭಾಗವೇ ಬೀಜ. ನೆಲ್ಲಿಯ ಬೀಜವನ್ನು ನಿಷ್ಕ್ರಪಯೋಜಕವೆಂದು ಭಾವಿಸಿ ಎಸೆಯುವುಂಟು. ಆಶ್ಚರ್ಯ ಎಂದರೆ ಪತಂಜಲಿ ಸಂಶೋಧನೆಯು ಈ ಆಮ್ಲದ ಬೀಜದ ಬಗ್ಗೆ ಹೊಸ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದೆ. ಆಚಾರ್ಯ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪತಂಜಲಿ ಸಂಶೋಧನಾ ಸಂಸ್ಥೆಯ ವಿಜ್ಞಾನಿಗಳು ಆಧುನಿಕ ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ಆಮ್ಲಾ ಬೀಜಗಳನ್ನು ಅಧ್ಯಯನ ಮಾಡಿದ್ದಾರೆ.

ಈ ಅಧ್ಯಯನವು ನೆಲ್ಲಿಕಾಯಿ ಬೀಜಗಳು ಉಪಯುಕ್ತ ಮಾತ್ರವಲ್ಲ, ಅವು ಕಾಯಿಯ ತಿರುಳಿಗಿಂತಲೂ ಹೆಚ್ಚು ಪೋಷಕಾಂಶಗಳಿಂದ ಕೂಡಿವೆ ಎಂದು ಕಂಡುಹಿಡಿದಿದೆ. ಈ ಸಣ್ಣ ಬೀಜಗಳು ಆ್ಯಂಟಿ ಆಕ್ಸಿಡೆಂಟ್ಸ್, ಒಮೆಗಾ ಫ್ಯಾಟಿ ಆ್ಯಸಿಡ್ಸ್, ಲಿನೋಲಿಕ್ ಆ್ಯಸಿಡ್, ಕ್ವೆರ್ಸೆಟಿನ್, ಕ್ಯಾಟೆಚಿನ್‌ಗಳು, ಗ್ಯಾಲಿಕ್ ಆ್ಯಸಿಡ್, ಫ್ಲೇವನಾಯ್ಡ್ಸ್ ಮತ್ತು ಸಪೋನಿನ್‌ಗಳಿಂದ ಸಮೃದ್ಧವಾಗಿವೆ ಎಂದು ಅಧ್ಯಯನಗಳು ತೋರಿಸುತ್ತವೆ. ಸರಳವಾಗಿ ಹೇಳುವುದಾದರೆ, ಈ ಬೀಜವು ಹೃದಯ, ಚರ್ಮ, ಕೂದಲು, ಇಮ್ಯೂನಿಟಿ ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸುವ ಅಂಶಗಳನ್ನು ಒಳಗೊಂಡಿದೆ.

ಹಲವು ಆಯುರ್ವೇದ ಉತ್ಪನ್ನಗಳು

ಈ ಸಂಶೋಧನೆಗಳನ್ನು ಬಳಸಿಕೊಂಡು, ಪತಂಜಲಿ ಸಂಸ್ಥೆ ಹಲವಾರು ಹೊಸ ಆಯುರ್ವೇದ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಇವುಗಳಲ್ಲಿ ಹೃದಯದ ಆರೋಗ್ಯವನ್ನು ಬೆಂಬಲಿಸುವ ಕ್ಯಾಪ್ಸುಲ್‌ಗಳು, ಚರ್ಮ ಮತ್ತು ಕೂದಲಿನ ಆರೈಕೆಗಾಗಿ ಫೈಟೊನ್ಯೂಟ್ರಿಯೆಂಟ್ ಆಯಿಲ್, ಸ್ಟ್ರೆಸ್ ಮತ್ತು ಇನ್ಫ್ಲೆಮೇಶನ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುವ ಹರ್ಬಲ್ ಟ್ಯಾಬ್ಲೆಟ್ಸ್, ಮತ್ತು ಮಧುಮೇಹ ನಿರ್ವಹಣೆಗೆ ವಿಶೇಷ ಸಪ್ಲಿಮೆಂಟ್ಸ್ ಸೇರಿವೆ. ಈ ಯಶಸ್ಸು ಗಮನಕ್ಕೆ ಬಾರದೇ ಉಳಿದಿಲ್ಲ. ಆಯುಷ್ ಸಚಿವಾಲಯ, ಸಿಎಸ್‌ಐಆರ್ ಮತ್ತು ಹಲವಾರು ಅಂತರರಾಷ್ಟ್ರೀಯ ವೈಜ್ಞಾನಿಕ ಸಂಸ್ಥೆಗಳು ಈ ಸಂಶೋಧನೆಯನ್ನು ಆಧುನಿಕ ಆಯುರ್ವೇದಕ್ಕೆ ನೀಡಿದ ಕೊಡುಗೆಗಾಗಿ ಗುರುತಿಸಿವೆ. ಈ ಆವಿಷ್ಕಾರವು ನೈಸರ್ಗಿಕ ಔಷಧದಲ್ಲಿ ಜಾಗತಿಕ ನಾಯಕನಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಅಧ್ಯಯನದ ಪ್ರಭಾವವು ಪ್ರಯೋಗಾಲಯಗಳನ್ನು ಮೀರಿ ಗೋಚರಿಸುತ್ತದೆ. ಇದು ಮೂರು ಪ್ರಮುಖ ಹಂತಗಳಲ್ಲಿ ವಿಷಯಗಳನ್ನು ಪರಿವರ್ತಿಸಿದೆ.

70 ಸಾವಿರ ರೈತರಿಗೆ ಲಾಭ

ಹಿಂದೆ ಬಿಸಾಡಲಾಗುತ್ತಿದ್ದ ಆಮ್ಲಾ ಬೀಜಗಳನ್ನು ಈಗ ಪತಂಜಲಿ ಖರೀದಿಸುತ್ತಿದೆ. 70,000 ಕ್ಕೂ ಹೆಚ್ಚು ರೈತರು ಹೊಸ ಆದಾಯದ ಮೂಲವನ್ನು ಕಂಡುಕೊಂಡಿದ್ದಾರೆ. ಇದು ಗ್ರಾಮೀಣ ಸಮುದಾಯಗಳನ್ನು ಗಮನಾರ್ಹವಾಗಿ ಉತ್ತೇಜಿಸುತ್ತದೆ. ಬೀಜಗಳ ಬಳಕೆಯು ಶೂನ್ಯ-ತ್ಯಾಜ್ಯ ಹರ್ಬಲ್ ಕೃಷಿಯನ್ನು ಉತ್ತೇಜಿಸಿದೆ. ಈಗ, ಆಮ್ಲಾ ಹಣ್ಣಿನಿಂದ ಏನೂ ವ್ಯರ್ಥವಾಗುವುದಿಲ್ಲ. ಇಡೀ ಪ್ರಕ್ರಿಯೆಯನ್ನು ಹೆಚ್ಚು ಪರಿಸರ ಸ್ನೇಹಿಯನ್ನಾಗಿ ಮಾಡುತ್ತದೆ. ಆಮ್ಲಾ ಬೀಜಗಳಿಂದ ತಯಾರಿಸಿದ ಉತ್ಪನ್ನಗಳನ್ನು ಈಗ ಯುಎಸ್, ಯುರೋಪ್ ಮತ್ತು ಆಗ್ನೇಯ ಏಷ್ಯಾಕ್ಕೆ ರಫ್ತು ಮಾಡಲಾಗುತ್ತಿದ್ದು, ಭಾರತಕ್ಕೆ ಹೊಸ ವ್ಯಾಪಾರ ಅವಕಾಶಗಳು ತೆರೆದುಕೊಂಡಿವೆ.

ರಾಷ್ಟ್ರೀಯ ಗುರಿಗೆ ಪೂರಕವಾಗಿದೆ ಈ ಸಂಶೋಧನೆ

ಪತಂಜಲಿಯ ಆಮ್ಲಾ ಬೀಜ ಸಂಶೋಧನೆಯು ಮೂರು ಪ್ರಮುಖ ರಾಷ್ಟ್ರೀಯ ಗುರಿಗಳಾದ ಆರ್ಥಿಕ ಸುಧಾರಣೆ, ಪರಿಸರ ಸುಸ್ಥಿರತೆ ಮತ್ತು ವೈಜ್ಞಾನಿಕ ನಾವೀನ್ಯತೆಗೆ ಪೂರಕವಾಗಿದೆ.

ಗ್ರಾಮೀಣ ಆರ್ಥಿಕ ಪರಿಣಾಮ: ರೈತರು ಸಾಮಾನ್ಯವಾಗಿ ಆಮ್ಲಾ ಬೀಜಗಳನ್ನು ಕೃಷಿ ತ್ಯಾಜ್ಯವೆಂದು ಪರಿಗಣಿಸಿ ಬಿಸುಡುತ್ತಿದ್ದರು. ಆದಾಗ್ಯೂ, ಪತಂಜಲಿಯ ಬೀಜ ಖರೀದಿ ಕಾರ್ಯಕ್ರಮವು ಈಗ ಈ ಬೀಜಗಳನ್ನು ರೈತರಿಂದ ಖರೀದಿಸುತ್ತದೆ. ಈ ಬೀಜಗಳು ರೈತರಿಗೆ ಹೆಚ್ಚುವರಿ ಆದಾಯ ಮೂಲವೆನಿಸಿದೆ. ಪತಂಜಲಿಯು ಸುಯೋಜಿತವಾದ ಸಪ್ಲೈ ಚೈನ್ ಅನ್ನು ನಿರ್ಮಿಸಿದೆ. ಈ ಹಿಂದೆ ತ್ಯಾಜ್ಯವೆಂದು ಪರಿಗಣಿಸಿ ಆಮ್ಲಾ ಬೀಜಗಳನ್ನು ನಿರ್ಲಸುತ್ತಿದ್ದವರು ಈಗ ಹೆಚ್ಚುವರಿ ಫಲ ಪಡೆಯಲಾರಂಭಿಸಿದ್ದಾರೆ. ಪತಂಜಲಿಯ ಈ ಕಾರ್ಯವು ಹಲವಾರು ರಾಜ್ಯಗಳಲ್ಲಿ 75,000 ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಅನುಕೂಲ ತಂದಿದೆ.

ಪರಿಸರ ಸುಸ್ಥಿರತೆ: ಹರ್ಬಲ್ ಫಾರ್ಮುಲಾ ರಚಿಸಲು ಆಮ್ಲಾ ಬೀಜಗಳನ್ನು ಬಳಸುವ ಮೂಲಕ, ಆಮ್ಲಾ ಹಣ್ಣಿನ ಪ್ರತಿಯೊಂದು ಭಾಗವನ್ನು ಬಳಸುವ ಸರ್ಕುಲಾರ್ ಎಕನಾಮಿ ಮಾದರಿಯನ್ನು ಉತ್ತೇಜಿಸಿದೆ. ಇದರಿಂದಾಗಿ ಸಾವಯವ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಸುಸ್ಥಿರ ಹರ್ಬಲ್ ಮೂಲವನ್ನು ಖಚಿತಪಡಿಸುತ್ತದೆ.

ವೈಜ್ಞಾನಿಕ ಆವಿಷ್ಕಾರ: ಆಮ್ಲಾ ಬೀಜಗಳು ಪ್ರೋಟೀನ್-ಭರಿತ ಆಯಿಲ್, ವಿಶೇಷವಾಗಿ ಲಿನೋಲಿಕ್ ಆಸಿಡ್ ಮತ್ತು ಒಮೆಗಾ ಫ್ಯಾಟಿ ಆ್ಯಸಿಡ್​ಗಳನ್ನು ಒಳಗೊಂಡಿರುತ್ತವೆ ಎಂದು ಪತಂಜಲಿ ಸಂಶೋಧನೆಯು ತೋರಿಸಿದೆ. ಇದು ಹೃದಯದ ಆರೋಗ್ಯ, ಚರ್ಮದ ಪೋಷಣೆ ಮತ್ತು ಹಾರ್ಮೋನುಗಳ ನಿಯಂತ್ರಣಕ್ಕೆ ಸೂಕ್ತವಾಗಿದೆ. ಇದು ಫಂಕ್ಷನಲ್ ಫುಡ್ಸ್, ಆಯುರ್ವೇದ ಆಧಾರಿತ ಕಾಸ್ಮೆಟಿಕ್ಸ್ ಮತ್ತು ಥೆರಪ್ಯೂಟಿಕ್ ಸಪ್ಲಿಮೆಂಟ್ಸ್​ಗೆ ಹೊಸ ಕ್ಷೇತ್ರಗಳನ್ನು ತೆರೆದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *