ಮಧುಗಿರಿ ಮಾದರ ಮಹಾಸಭೆಗೆ ನೂತನ ಅಧ್ಯಕ್ಷ ಗೋಪಾಲಯ್ಯ.
ತುಮಕೂರು: ಮಧುಗಿರಿ ತಾಲೂಕು ಮಾದರ ಮಹಾಸಭಾ ನೂತನ ಅಧ್ಯಕ್ಷರಾಗಿ ಸರ್ಕಾರದ ನಿವೃತ್ತ ಅಪರ ಕಾರ್ಯದರ್ಶಿ ಗೋಪಾಲಯ್ಯ ನವವರನ್ನು ಆಯ್ಕೆಮಾಡಿದ್ದು ಉಪಾಧ್ಯಕ್ಷರಾಗಿ ಹೋರಾಟಗಾರ ದೊಡ್ಡೇರಿ ಕಣಿಮಯ್ಯ ನವರನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಖಜಾಂಚಿಯಾಗಿ ಜಿ .ಆರ್. ರಮೇಶ್, ಆಯ್ಕೆಯಾಗಿದ್ದು ಕಾರ್ಯದರ್ಶಿಯಾಗಿ ವಕೀಲ ಬಾಣದ ರಂಗಯ್ಯ, ಸಹ ಕಾರ್ಯದರ್ಶಿಯಾಗಿ ವಕೀಲ ಐ.ಡಿ.ಹಳ್ಳಿ ನರಸಿಂಹಮೂರ್ತಿ ಆಯ್ಕೆಯಾಗಿದ್ದಾರೆ. ಆಯ್ಕೆಯ ಸಂದರ್ಭದಲ್ಲಿ ತೊಂಡೋಟಿ ರಾಮಂಜಿ, ಮಾದರ ಮಹಾಸಭಾ ಜಿಲ್ಲಾಧ್ಯಕ್ಷ Y.H. ಹುಚ್ಚಯ್ಯ, ಮುಖಂಡ ಕೊಟ್ಟ ಶಂಕರ, ಬಡವನಹಳ್ಳಿ ಮುದ್ದರಾಜು, ಜೀವಿಕ ಅಂಜಿನಪ್ಪ, ಕರುನಾಡ ರೈತರ ವೇದಿಕೆ ಜಿಲ್ಲಾಧ್ಯಕ್ಷ ಸುನಿಲ್, ಬೇಡತ್ತೂರು ತಿಪ್ಪೇಸ್ವಾಮಿ, ಕವಣದಾಲ ಗ್ರಾಮದ ಭೀಮರಾಜು, ತಿಪ್ಪೇಸ್ವಾಮಿ, ದೊಡ್ಡೇರಿ ಮಾಲಿಂಗಯ್ಯ, ಪಾಂಡುರಂಗಯ್ಯ, ಮಧುಗಿರಿ ಸಿದ್ದಾಪುರ ರಾಮಣ್ಣ, ಗಂಗರಾಜು, ದೊಡ್ಡಹೊಸಳ್ಳಿ ನರಸಿಂಹಮೂರ್ತಿ, ಸಣ್ಣ ರಾಮಣ್ಣ ಹಾಗೂ ನಿವೃತ್ತ ಕೃಷಿ ಅಧಿಕಾರಿ ಹನುಮಂತ ರಾಯಪ್ಪ ಉಪಸ್ಥಿತರಿದ್ದು ಆಯ್ಕೆಗೆ ಸರ್ವಾನು ಮತದಿಂದ ಒಪ್ಪಿಗೆ ಸೂಚಿಸಿದರು.
ಮುಂದಿನ ದಿನಗಳಲ್ಲಿ ಮಾದರ ಮಹಾಸಭಾ ತುಂಬಾ ದೊಡ್ಡ ಶಕ್ತಿಯಾಗಿ ಬೆಳೆಯಲೆಂದು ಜಿಲ್ಲಾಧ್ಯಕ್ಷ ಹುಚ್ಚಯ್ಯನವರು ಆಶಿಸಿದರು.
For More Updates Join our WhatsApp Group :




