ಸಿಎಂ ಮುಂದೆ ಮೊಮ್ಮಗಳನ್ನು ನೆನೆದು ಅಜ್ಜಿ ಕಣ್ಣೀರು
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಪುತ್ರಿ ನೇಹಾಳ ಬರ್ಬರ ಹತ್ಯೆ ಬಳಿಕ ರಾಜ್ಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದು, ಅಂಜಲಿ ಅಂಬಿಗೇರ ಕೊಲೆ ಕೇಸ್. ಇದೇ ಪ್ರಕರಣ ರಾಜಕೀಯ ತಿಕ್ಕಾಟಕ್ಕೂ ಕಾರಣವಾಗಿತ್ತು. ಅಂದು ಕುಟುಂಬಕ್ಕೆ ಸಾಂತ್ವನ ಹೇಳಿದ್ದ ಸರ್ಕಾರ ಇಂದು ಮನೆ ನೀಡಿದೆ. ಸಚಿವ ಜಮೀರ್ ಅಹ್ಮದ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಕೊಲೆಯಾಗಿರುವ ಅಂಜಲಿ ಅಂಬಿಗೇರ ಪೋಷಕರಿಗೆ ಮನೆ ಹಂಚಿಕೆ ಮಾಡಲಾಗಿದ್ದು, ಈ ವೇಳೆ ಮೊಮ್ಮಗಳನ್ನು ನೆನೆದು ಅಜ್ಜಿ ಭಾವುಕರಾದರು.
ಹುಬ್ಬಳ್ಳಿಯಲ್ಲಿ ಎರಡು ವರ್ಷಗಳ ಹಿಂದೆ ಅಂಜಲಿ ಅಂಬಿಗೇರ ಕೊಲೆ ನಡೆದಿತ್ತು. ದುಷ್ಕರ್ಮಿ ಮನೆಗೆ ನುಗ್ಗಿ ಅಂಜಲಿಯನ್ನ ಕೊಲೆ ಮಾಡಿದ್ದ. ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆ ಸಂದರ್ಭದಲ್ಲಿ ಅಂಜಲಿಯ ಮನೆಗೆ ಭೇಟಿ ಮಾಡಿದ್ದ ಗೃಹ ಸಚಿವ ಜಿ ಪರಮೇಶ್ವರ್, ಅಜ್ಜಿ ಗಂಗಮ್ಮ ಮತ್ತು ಸಹೋದರಿಯರಿಗೆ ಸಾಂತ್ವನ ಹೇಳಿದ್ದರು. ಜೊತೆಗೆ ಗೌಪ್ಯವಾಗಿ ಹಲವು ಆಶ್ವಾಸನೆಗಳನ್ನೂ ನೀಡಿದ್ದರು. ಇದೀಗ ಆ ಪೈಕಿ ಕುಟುಂಬಕ್ಕೆ ಮನೆ ಹಂಚಿಕೆ ಮಾಡಲಾಗಿದೆ. ಕೊಲೆಯಾಗಿರುವ ಅಂಜಲಿ ಪೋಷಕರಿಗೆ ಸಿಎಂ ಸಿದ್ದರಾಮಯ್ಯ ಮನೆ ಹಂಚಿಕೆ ಮಾಡಿದ್ದಾರೆ. ಸಿಎಂ ಕೈಯಿಂದ ಮನೆ ಬೀಗ ಪಡೆಯುವಾಗ ಅಂಜಲಿ ಅಜ್ಜಿ ಮೊಮ್ಮಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ಏನಿದು ಪ್ರಕರಣ?
ಅಂಜಲಿ ಅಂಬಿಗೇರ ಕೊಲೆ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಎರಡು ವರ್ಷಗಳ ಹಿಂದೆ ಅಂಜಲಿ ಕೊಲೆಗೆ ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬಂದಿದ್ದ ಅಂಜಲಿ ಸ್ನೇಹಿತ ವಿಶ್ವ ಅಲಿಯಾಸ್ ಗಿರೀಶ್, ಮುಂಜಾನೆ ಮನೆಯ ಬಾಗಿಲು ಬಡಿದಿದ್ದ. ಸ್ವತಃ ಅಂಜಲಿಯೇ ಬಂದು ಬಾಗಿಲು ತೆಗೆದಿದ್ದಳು. ಪರ್ಸನಲ್ ಆಗಿ ಮಾತನಾಬೇಕು ಬಾ ಅಂತ ಕರೆದೋನೇ ಏಕಾಏಕಿ ಚಾಕುವಿನಿಂದ ಇರಿದಿದ್ದ.
For More Updates Join our WhatsApp Group :




