Gubbi: ಕಾಡುಗೊಲ್ಲರ ಹಟ್ಟಿಗಳಿಗೆ ಭೇಟಿ ನೀಡಿ ಅರಿವು ಮೂಡಿಸಿದ ತಹಶೀಲ್ದಾರ್ ಬಿ.ಆರತಿ..!!

ಗುಬ್ಬಿ: ಕಂಪ್ಯೂಟರ್ ಕಾಲದಲ್ಲಿಯೂ ಕಾಡುಗೊಲ್ಲ ಸಮುದಾಯದವರು ಬಾಣಂತಿಯರನ್ನು ಕೃಷ್ಣ ಕುಟೀರದಲ್ಲಿ ಪ್ರತ್ಯೇಕ ಇರಿಸಿ ಜೀವನ ನಡೆಸುವಂತಹ ಹಿಂಡಿಸ್ಕೆರೆ ಗೊಲ್ಲರಹಟ್ಟಿ, ನರಸಿಂಹದೇವರಹಟ್ಟಿ ಸ್ಥಳಗಳಿಗೆ ತಹಶೀಲ್ದಾರ್ ಬಿ. ಆರತಿ ಅವರು ಭೇಟಿ ನೀಡಿ ಅರಿವು ಮೂಡಿಸಿ ಗುಡಿಸಲನ್ನು ಸ್ಥಳದಲ್ಲೇ ಖುದ್ದಾಗಿ ತೆರವುಗೊಳಿಸಿದರು.

ಕಾಡುಗೊಲ್ಲ

ಗುಬ್ಬಿ ತಾಲೂಕಿನಲ್ಲಿ ಕಾಡುಗೊಲ್ಲ ಸಮುದಾಯದವರು ಇಂದಿಗೂ ಸಹ ಈ ಹಳೆಯ ಆಚಾರ ಪದ್ಧತಿಗಳನ್ನು ಆಚರಿಸುತ್ತಾ ಬಾಣಂತಿ ಸ್ತ್ರೀಯರನ್ನು ಹೊರಗೆ ಪ್ರತ್ಯೇಕ ಗುಡಿಸಲು ನಿರ್ಮಿಸಿ ಅದರಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿದ್ದು, ಇದರಿಂದ ಸಾಕಷ್ಟು ಅನಾಹುತಗಳು ಸಂಭವಿಸಲಿದೆ. ಕಾಡು ಪ್ರಾಣಿಗಳ ಹಾವಳಿ, ಕ್ರಿಮಿ ಕೀಟಗಳ ಹಾವಳಿಯಲ್ಲಿ  ತನ್ನ ಮಗುವಿನೊಂದಿಗೆ ಜೀವನ ನಡೆಸುವಂತಹ ನೋಡಲು ಆಗುತ್ತಿಲ್ಲ ಸ್ವಾತಂತ್ಯ ಬಂದು 77 ವರ್ಷ ಕಳೆದರೂ ಈ ಹಿಂದಿನ ಆಚಾರ ಪದ್ಧತಿಯನ್ನು ಆಚರಿಸುತ್ತಾ ಇರುವುದನ್ನು ನೋಡಿದರೆ, ಮಹಿಳೆಗೆ ಸ್ವಾತಂತ್ರ್ಯ ಸಿಕ್ಕಂತೆ ಕಾಣಿಸುತ್ತಿಲ್ಲ.

ಏಕೆಂದರೆ ತನ್ನ ಇಷ್ಟದಂತೆ ಮಗುವಿನ ಪೋಷಣೆಯು ಸಿಗದೆ ಸಂಕಟದಲ್ಲಿ ಜೀವನ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಹಿಂದಿನ ಆಚಾರ ಪದ್ಧತಿಯನ್ನು  ಹೊರಹಾಕುವ ನಿಟ್ಟಿನಲ್ಲಿ ಎಲ್ಲಾ ಹಟ್ಟಿಗಳಿಗೆ ತೆರಳಿ ಮನೆಯ ಮುಖ್ಯಸ್ಥರಿಗೆ ಮನದಟ್ಟು ಮಾಡಿಕೊಟ್ಟು ಎಲ್ಲರಂತೆ ಜೀವನ ನಡೆಸುವಂತೆ ಆಗಬೇಕೆಂದರೆ ಸಮುದಾಯದ ಮುಖ್ಯಸ್ಥರು ಹಾಗೂ ಯಜಮಾನರು ಮನಸು ಮಾಡಬೇಕಿದೆ. ಮಗು ಹಾಗೂ ಬಾಣಂತಿ ಇರುವ ಗುಡಿಸಲು ಈಗಲೂ ಜೀವಂತವಾಗಿರುವುದು ಪ್ರತ್ಯಕ್ಷವಾಗಿ ಕಾಣುತ್ತಾ ಇದ್ದು ಅದನ್ನು ಸರಿಗಟ್ಟುವ ನಿಟ್ಟಿನಲ್ಲಿ ಪ್ರಯತ್ನ ಪಟ್ಟು ಮಗು ಹಾಗೂ ಬಾಣಂತಿ ಯನ್ನೂ ಮನೆಯ ಒಳಗೆ ಕರೆದುಕೊಂಡು ಹೋಗಿ ಬಿಟ್ಟಿದ್ದು ಇದರಿಂದ ಮನ ಸಂತೋಷ ಉಂಟಾಗಿದ್ದು ಇದೇ ರೀತಿಯಲ್ಲಿ ವಾತಾವರಣ ಬದಲಾಗ ಬೇಕಿದೆ .

ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಸಹ ಕಾಡುಗೊಲ್ಲ ಸಮುದಾಯದವರು ಬಾಣಂತಿ ಹಾಗೂ ಮಗುವನ್ನು ಮನೆಯಿಂದ ಪ್ರತ್ಯೇಕ ಮಾಡಿ ಗುಡಿಸಲು ನಿರ್ಮಿಸಿ ಜೀವನ ನಡೆಸಲು ಬಿಟ್ಟಿರುವುದು ದುರಂತ, ಪಟ್ಟಣ ವ್ಯಾಪ್ತಿಯಲ್ಲಿ ತಮ್ಮ ಸಮುದಾಯದವರು ಮನೆಯೊಳಗೆ ಇದ್ದು ಮಗುವಿನ ಪೋಷಣೆ ಮಾಡುತ್ತಾರೆ. ಹೀಗಿರುವಾಗ ಅವರಿಗೆ ಇಲ್ಲದ ಈ ಪದ್ಧತಿ ತಮಗೆ ಏಕೆ ಅವರಿಗೆ ಅದರಿಂದ ಏನಾದರೂ ಸಮಸ್ಯೆ ಆಗಿದೆಯೇ, ಸರ್ಕಾರವು ಕಂದಾಯ ಗ್ರಾಮ ಮಾಡುವ ಮುಖೇನ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು, ಈ ರೀತಿಯಲ್ಲಿ ಹಿಂದಿನ ಪದ್ಧತಿಯನ್ನು ರೂಢಿಸುತ್ತಾ ಬರುವುದು ಸರಿಯಲ್ಲ ಇನ್ನೂ ಮುಂದೆ ಆದರೂ ಈ ಎಲ್ಲಾ ಪದ್ಧತಿಯಿಂದ ಹೊರಗೆ ಬಂದು ಸಾಮಾನ್ಯರಂತೆ ಬದುಕು ಕಂಡುಕೊಳ್ಳಲು ಬಿಡುವಂತೆ ತಹಶೀಲ್ದಾರ್ ಬಿ ಆರತಿ ಗ್ರಾಮಸ್ಥರಲ್ಲಿ ತಿಳಿಸಿದರು.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *