ಸೌರಾಷ್ಟ್ರ: ಲಿವ್-ಇನ್ ಸಂಗಾತಿಯ ಕೊಂದು ಜೈಲು ಸೇರಿದ್ದ ವ್ಯಕ್ತಿ ಪೊಲೀಸ್ ಕಸ್ಟಡಿಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಗುಜರಾತ್ನ ಸೌರಾಷ್ಟ್ರದಲ್ಲಿ ನಡೆದಿದೆ. ನರೇಂದ್ರ ಸಿಂಗ್ ಧ್ರುವೇಲ್ ಮಧ್ಯಪ್ರದೇಶ ಮೂಲದವನಾಗಿದ್ದು, ಪ್ರೇಯಸಿಯನ್ನು ಕೊಂದು ಜೈಲುಪಾಲಾಗಿದ್ದ, ಜೈಲಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಸೌರಾಷ್ಟ್ರದ ಸೆರಾಮಿಕ್ ಕಾರ್ಖಾನೆಯ ಕಾರ್ಮಿಕ ವಸತಿಗೃಹದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಇಬ್ಬರು ಮೂರು ತಿಂಗಳಿನಿಂದ ವಾಸವಾಗಿದ್ದರು. ಒಂದು ದಿನ, ಇಬ್ಬರ ನಡುವೆ ಜಗಳವಾಗಿತ್ತು. ಆ ವ್ಯಕ್ತಿ ತನ್ನ ಗೆಳತಿ ಪುಷ್ಪಾದೇವಿ ಮರಾವಿಯನ್ನು ಮರದ ಕೋಲು ಮತ್ತು ಬೆಲ್ಟ್‌ನಿಂದ ಹೊಡೆಯಲು ಪ್ರಾರಂಭಿಸಿದ್ದ. ಮರಾವಿಯ ದೇಹದ ಮೇಲೆ ಗಂಭೀರ ಗಾಯಗಳಾಗಿದ್ದವು. ಇದಲ್ಲದೆ, ಆ ವ್ಯಕ್ತಿ ಮಹಿಳೆಯ ಮುಖವನ್ನು ಕಚ್ಚಿದ್ದ ಎಂದು ಆರೋಪಿಸಲಾಗಿದೆ. ಸ್ವಲ್ಪ ಸಮಯದಲ್ಲೇ ಮಹಿಳೆ ಸಾವನ್ನಪ್ಪಿದ್ದಳು.
ಘಟನೆಯ ಬಗ್ಗೆ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತರ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಮರಣೋತ್ತರ ಪರೀಕ್ಷೆಯ ವರದಿಯು ಮಹಿಳೆ ತೀವ್ರ ಗಾಯಗಳು ಮತ್ತು ದೈಹಿಕ ನೋವಿನಿಂದ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ. ಪೊಲೀಸರು ಧ್ರುವೇಲ್‌ನನ್ನು ಬಂಧಿಸಿದಾಗ, ಅವನು ತಾನು ಮಾಡಿದ ಅಪರಾಧವನ್ನು ಆತ ಒಪ್ಪಿಕೊಂಡಿದ್ದ. ಹೆಚ್ಚಿನ ವಿಚಾರಣೆಗಾಗಿ ಆತನನ್ನು ವಶಕ್ಕೆ ಪಡೆಯಲಾಯಿತು.
For More Updates Join our WhatsApp Group :




