ಗುಲ್ಷನ್ ದೇವಯ್ಯ ಅವಕಾಶ ಆದರೆ ಏಕೆ ನಿರಾಕರಿಸಿದರು?

ಗುಲ್ಷನ್ ದೇವಯ್ಯ ಅವಕಾಶ ಆದರೆ ಏಕೆ ನಿರಾಕರಿಸಿದರು?

ಈ ಕನ್ನಡದ ನಟನಿಗೆ ಸಿಕ್ಕಿತ್ತು ‘ಟಾಕ್ಸಿಕ್’ನಲ್ಲಿ ನಟಿಸುವ ಅವಕಾಶ:

ಯಶ್ ನಟಿಸಿರುವ ‘ಟಾಕ್ಸಿಕ್’ ಸಿನಿಮಾ ಭಾರತದ ಅತಿ ಹೆಚ್ಚು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾವನ್ನು ಹಾಲಿವುಡ್​ ಗುಣಮಟ್ಟದಲ್ಲಿ ನಿರ್ಮಾಣ ಮಾಡಲಾಗಿದ್ದು, ಇಂದು (ಜನವರಿ 08) ಬಿಡುಗಡೆ ಆಗಿರುವ ಟೀಸರ್​​ನಿಂದ ಇದು ಖಾತ್ರಿ ಆಗುತ್ತಿದೆ. ‘ಟಾಕ್ಸಿಕ್’ ಸಿನಿಮಾನಲ್ಲಿ ಖ್ಯಾತ ನಟ-ನಟಿಯರ ದಂಡೇ ಇದೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಅವರುಗಳು ಜೊತೆಗೆ ಕೆಲವು ಹಾಲಿವುಡ್, ಬಾಲಿವುಡ್​​ನ ಜನಪ್ರಿಯ ನಟ-ನಟಿಯರು ಸಹ ಇದ್ದಾರೆ. ಈ ಸಿನಿಮಾನಲ್ಲಿ ನಟಿಸುವ ಅವಕಾಶ ಕರ್ನಾಟಕ ಮೂಲದ ನಟರೊಬ್ಬರಿಗೆ ಸಿಕ್ಕಿತ್ತು ಆದರೆ ಅವಕಾಶ ನಿರಾಕರಿಸಿದ್ದಾರೆ ಆ ನಟ. ಕಾರಣವೇನು?

ಗುಲ್ಷನ್ ದೇವಯ್ಯ, ಮೂಲತಃ ಬೆಂಗಳೂರಿನವರು. ಆದರೆ ಅವರು ಹೆಚ್ಚಾಗಿ ಮಿಂಚುತ್ತಿರುವುದು ಬಾಲಿವುಡ್ ಸಿನಿಮಾಗಳಲ್ಲಿ. ಇತ್ತೀಚೆಗೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆದ ‘ಕಾಂತಾರ: ಚಾಪ್ಟರ್ 1’ ಸಿನಿಮಾನಲ್ಲಿ ಕುಲಶೇಖರ ಪಾತ್ರದಲ್ಲಿ ನಟಿಸಿರುವ ಗುಲ್ಷನ್ ದೇವಯ್ಯ, ಹೆಚ್ಚು ನಟಿಸಿರುವುದು ಹಿಂದಿ ಸಿನಿಮಾ ಮತ್ತು ವೆಬ್ ಸರಣಿಗಳಲ್ಲಿ. ಇವರಿಗೆ ‘ಟಾಕ್ಸಿಕ್’ ಸಿನಿಮಾನಲ್ಲಿ ಅವಕಾಶ ಅರಸಿ ಬಂದಿತ್ತು. ಆದರೆ ಅವರು ನಿರಾಕರಿಸಿದರು. ಅದಕ್ಕೆ ಕಾರಣವನ್ನೂ ಸಹ ಗುಲ್ಷನ್ ತಿಳಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಗುಲ್ಷನ್ ದೇವಯ್ಯ, ‘ಬಹಳ ಹಿಂದೆಯೇ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸುವಂತೆ ಆಫರ್ ಬಂದಿತ್ತು. ಸಿನಿಮಾದ ನಿರ್ದೇಶಕಿ ಗೀತು ಮೋಹನ್​​ದಾಸ್ ಅವರು ಬಹಳ ಸಮಯ ನನ್ನೊಂದಿಗೆ ಮಾತುಕತೆ ನಡೆಸಿದರು. ನಿರ್ದಿಷ್ಟ ಪಾತ್ರದಲ್ಲಿ ನಾನೇ ನಟಿಸಲಿ ಎಂಬುದು ಅವರ ಇಚ್ಛೆ ಆಗಿತ್ತು. ಆದರೆ ಹಲವು ಕಾರಣಗಳಿಂದಾಗಿ ಆ ಸಿನಿಮಾನಲ್ಲಿ ನಾನು ನಟಿಸಲಿಲ್ಲ’ ಎಂದಿದ್ದಾರೆ ಗುಲ್ಷನ್.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *