ನವದೆಹಲಿ: ದೆಹಲಿಯಲ್ಲಿ ಕಾರು ಸ್ಫೋಟಿಸುವ ಮುನ್ನ ಹಮಾಸ್ ಮಾದರಿಯಲ್ಲಿ ಡ್ರೋನ್ ದಾಳಿ ನಡೆಸುವುದು ಉಗ್ರರ ಪ್ಲ್ಯಾನ್ ಆಗಿತ್ತು ಎಂಬುದು ಎನ್ಐಎ ತನಿಖೆಯಲ್ಲಿ ತಿಳಿದುಬಂದಿದೆ. ದೆಹಲಿಯ ಕೆಂಪು ಕೋಟೆ ಬಳಿ ನಡೆದ ಮಾರಕ ಸ್ಫೋಟಕ್ಕೆ ಸಂಬಂಧಿಸಿದಂತೆ ಎನ್ಐಎ ಮತ್ತೊಬ್ಬ ಸಂಚುಕೋರ ಜಸೀರ್ ಬಿಲಾಲ್ ವಾನಿ ಅಲಿಯಾಸ್ ಡ್ಯಾನಿಶ್ನನ್ನು ಬಂಧಿಸಿದೆ.
ದೆಹಲಿ ಸ್ಫೋಟದ ಬಾಂಬರ್ ಡಾ. ಉಮರ್ ಉನ್ ನಬಿ ಜೊತೆ ಡ್ಯಾನಿಶ್ ಕೆಲಸ ಮಾಡಿದ್ದ. ನವೆಂಬರ್ 10 ರ ಭಯೋತ್ಪಾದಕ ದಾಳಿಯ ಮೊದಲು ಡ್ಯಾನಿಶ್ ಡ್ರೋನ್ಗಳನ್ನು ಮಾರ್ಪಡಿಸಿ ರಾಕೆಟ್ಗಳನ್ನು ನಿರ್ಮಿಸಲು ಪ್ರಯತ್ನಿಸಿದ್ದ. ಹಮಾಸ್ ಶೈಲಿಯ ಮಾರಕ ಭಯೋತ್ಪಾದಕ ದಾಳಿಗಳನ್ನು ನಡೆಸುವುದು ಯೋಜನೆಯಾಗಿತ್ತು.
2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯಂತೆಯೇ ಭಯೋತ್ಪಾದಕರು ದಾಳಿ ನಡೆಸಲು ಯತ್ನಿಸಿದ್ದರು. ಇಸ್ರೇಲ್ ಮೇಲೆ ದಾಳಿ ಮಾಡಲು ಹಮಾಸ್ ಅತ್ಯಂತ ಶಕ್ತಿಶಾಲಿ ಡ್ರೋನ್ಗಳನ್ನು ಕೂಡ ಬಳಸಿತ್ತು.
ಅನಂತ್ನಾಗ್ನ ಖಾಜಿಗುಂಡ್ ನಿವಾಸಿ ಡ್ಯಾನಿಶ್, ಕ್ಯಾಮೆರಾಗಳು ಮತ್ತು ಭಾರವಾದ ಬಾಂಬ್ಗಳನ್ನು ತುಂಬಲು ಸಾಧ್ಯವಾಗುವಂತೆ ದೊಡ್ಡ ಬ್ಯಾಟರಿಗಳಿಂದ ಡ್ರೋನ್ ಅನ್ನು ಸಜ್ಜುಗೊಳಿಸಿದ್ದ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್ಡಿಟಿವಿ ಇಂಡಿಯಾ ವರದಿ ಮಾಡಿದೆ.
For More Updates Join our WhatsApp Group :
