ಕ್ಯಾನ್ಸರ್ನಿಂದ ಬಳಲುತ್ತಿದ್ದ ಹರೀಶ್ ರಾಯ್ ಅವರು ಇಂದು (ನ.6) ನಿಧನರಾಗಿದ್ದಾರೆ. ಅವರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಇಡೀ ಚಿತ್ರರಂಗಕ್ಕೆ ನೋವಾಗಿದೆ. ಅವರ ಕುಟುಂಬದವರು ಶೋಕದಲ್ಲಿ ಮುಳುಗುತ್ತಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿ ಗೆಲ್ಲಲು ಹರೀಶ್ ರಾಯ್ ಅವರಿಗೆ ಸಾಧ್ಯವಾಗಲಿಲ್ಲ.
ನಿಧನಕ್ಕೂ ಮುನ್ನ ಅವರ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಕುಟುಂಬದವರು ವಿವರಿಸಿದ್ದಾರೆ. ‘ನಿನ್ನೆ ಅವರ ಪರಿಸ್ಥಿತಿ ಗಂಭೀರ ಆಗಿತ್ತು. ಏನೂ ತಿನ್ನುತ್ತ ಇರಲಿಲ್ಲ. ಡಾಕ್ಟರ್ ಇಸಿಜಿ ಮಾಡಿದ್ದರು. ಹೃದಯಬಡಿತ ಕಡಿಮೆ ಆಗಿತ್ತು. ಬಳಿಕ ಅವರು ನಿಧನರಾದರು ಅಂತ ಡಾಕ್ಟರ್ ನಮಗೆ ಹೇಳಿದರು. ಎಲ್ಲರನ್ನೂ ಕರೆದೆವು. ಹರೀಶ್ ನಮ್ಮನ್ನು ಬಿಟ್ಟು ಹೋದರು. ಈಗ ಏನು ಮಾಡಬೇಕು ಎಂಬುದು ತಿಳಿಯುತ್ತಿಲ್ಲ’ ಎಂದು ಕುಟುಂಬದವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
For More Updates Join our WhatsApp Group :

