‘Dhurandhar’ ಯಶಸ್ಸಿನಿಂದ ಬೆಂಬಲಿತ ಸಂಭಾವನೆಗೆ ಕಾರಣ.
2025ರಲ್ಲಿ ಅತಿ ಹೆಚ್ಚು ಕೆಲಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿಗೆ ‘ಧುರಂಧರ್’ ಪಾತ್ರವಾಗಿದೆ. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಸಿನಿಮಾ ಕೇವಲ 20 ದಿನಕ್ಕೆ 600 ಕೋಟಿ ರೂಪಾಯಿ ಬಾಚಿಕೊಂಡಿದೆ. ಇನ್ನೂ ಈ ಸಿನಿಮಾದ ಅಬ್ಬರ ನಿಂತಿಲ್ಲ. ವಿದೇಶದಿಂದ ಬಂದ ಆದಾಯವನ್ನೂ ಸೇರಿಸಿದರೆ 20 ದಿನಕ್ಕೆ ಒಟ್ಟು ಕಲೆಕ್ಷನ್ 925 ಕೋಟಿ ರೂಪಾಯಿ ದಾಟಿದೆ. ಈ ಚಿತ್ರದಿಂದ ನಟ ಅಕ್ಷಯ್ಖನ್ನಾ ಅವರ ಖ್ಯಾತಿ ಹೆಚ್ಚಾಗಿದೆ. ಹಾಗಾಗಿ ಅವರ ಬೇಡಿಕೆ ಕೂಡ ಹೆಚ್ಚಿದೆ. ಇದರ ಪರಿಣಾಮವಾಗಿ ಅವರು ‘ದೃಶ್ಯಂ 3’ ಸಿನಿಮಾದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಆಗಿರುವುದು ದುಬಾರಿ ಸಂಭಾವನೆ!
‘ಧುರಂಧರ್’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ರೆಹಮಾನ್ ಡಕಾಯಿತ್ ಎಂಬ ಪಾತ್ರವನ್ನು ಮಾಡಿದ್ದಾರೆ. ಇದು ವಿಲನ್ ಪಾತ್ರ. ಈ ಪಾತ್ರಕ್ಕಾಗಿ ಅವರು 2.5 ಕೋಟಿಯಿಂದ 3 ಕೋಟಿ ರೂಪಾಯಿ ತನಕ ಸಂಭಾವನೆ ಪಡೆದಿದ್ದರು ಎಂಬ ಮಾಹಿತಿ ಹರಿದಾಡುತ್ತಿದೆ. ‘ಧುರಂಧರ್’ ಸೂಪರ್ ಹಿಟ್ ಆಗಿದ್ದೇ ತಡ, ಅಕ್ಷಯ್ ಖನ್ನಾ ಅವರು ಏಕಾಏಕಿ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.
‘ದೃಶ್ಯಂ 3’ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರು ಒಂದು ಪಾತ್ರ ಮಾಡಬೇಕಿತ್ತು. ಆದರೆ ಈಗ ಅವರು ದೊಡ್ಡ ಮೊತ್ತದ ಸಂಭಾವನೆ ಕೇಳುತ್ತಿರುವುದರಿಂದ ನಿರ್ಮಾಪಕರಿಗೆ ಚಿಂತೆ ಶುರುವಾಗಿದೆ. ಅಲ್ಲದೇ, ಅಕ್ಷಯ್ ಖನ್ನಾ ಅವರು ತಮ್ಮ ಪಾತ್ರದ ಲುಕ್ ಕೂಡ ಬದಲಾಗಬೇಕು ಎಂದು ಹಠ ಹಿಡಿದಿದ್ದಾರಂತೆ. ಈ ವಿಚಾರದಲ್ಲಿ ಚಿತ್ರತಂಡದ ಜೊತೆ ಮಾತುಕಥೆ ನಡೆದು, ಸಫಲವಾಗದ ಪರಿಣಾಮ ಅವರು ಚಿತ್ರತಂಡದಿಂದ ಹೊರನಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ.
For More Updates Join our WhatsApp Group :




