ಮುಖಾಮುಖಿ ಕೋರೆ ಮರ್ದಿಸಿ ಗಜಪಡೆ.
ಹಾಸನ : ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮೊಗಲಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಶೋಭಾ ಎಂಬ ಮಹಿಳೆ ಬಲಿಯಾದ ಘಟನೆಗೆ ಸಂಬಂಧಿಸಿ, ಹಂತಕ ಆನೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಇಂದಿನಿಂದ ಆರಂಭವಾಗಿದೆ.
ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ಧನಂಜಯ, ಲಕ್ಷ್ಮಣ, ಶ್ರೀರಾಮ, ಅಯ್ಯಪ್ಪ ಹಾಗೂ ಸುಗ್ರೀವ ಎಂಬ ಐದು ಸಾಕಾನೆಗಳು ಆಲೂರು ತಾಲ್ಲೂಕಿನ ಬೈರಾಪುರ ತಾತ್ಕಾಲಿಕ ಆನೆ ಶಿಬಿರಕ್ಕೆ ಆಗಮಿಸಿವೆ. ಕಾರ್ಯಾಚರಣೆ ಆರಂಭಕ್ಕೂ ಮುನ್ನ ಸಾಕಾನೆಗಳ ತುಂಟಾಟ ಎಲ್ಲರ ಗಮನ ಸೆಳೆದಿದ್ದು, ಧನಂಜಯ ಹಾಗೂ ಅಯ್ಯಪ್ಪ ಆನೆಗಳು ಪರಸ್ಪರ ಮುಖಾಮುಖಿಯಾಗಿ ಕೋರೆ ಮರ್ದಿಸಿ ಹುಡುಗಾಟ ನಡೆಸಿವೆ.
For More Updates Join our WhatsApp Group :




