ಹಾಸನ: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನದ ಹಾಸನಾಂಬ ದರ್ಶನೋತ್ಸವ ಅಂತ್ಯವಾಗಿದ್ದು, ಈಗಾಗಲೇ ಗರ್ಭಗುಡಿಯನ್ನು ಬಂದ್ ಮಾಡಲಾಗಿದೆ. ಇನ್ನು ಕಳೆದ ಇಂದು (ಅಕ್ಟೊಬರ್ 24) ನಡೆದ ಹುಂಡಿ ಎಣಿಕೆ ಕಾರ್ಯ ಅಂತ್ಯವಾಗಿದ್ದು. ಹುಂಡಿಯಲ್ಲೇ ಬರೋಬ್ಬರಿ 3 ಕೋಟಿ 68 ಲಕ್ಷದ 12 ಸಾವಿರದ 275 ರೂ. ಸಂಗ್ರಹವಾಗಿದೆ. ಇದರೊಂದಿಗೆ 1000 ರೂ. ಟಿಕೆಟ್, 300 ರೂ. ಟಿಕೆಟ್, ಲಾಡು ಪ್ರಸಾದದಿಂದ ದೇವಸ್ಥಾನಕ್ಕೆ ಒಟ್ಟು 25,59,87,327 (25 ಕೋಟಿ) ಆದಾಯ ಹರಿದುಬಂದಿದೆ ಎಂದು ಎಸಿ ಹಾಗೂ ಹಾಸನಾಂಬೆ ದೇಗುಲದ ಆಡಳಿತಾಧಿಕಾರಿ ಮಾರುತಿ ಮಾಹಿತಿ ನೀಡಿದ್ದಾರೆ.
ಟಿಕೆಟ್, ಪ್ರಸಾದ ಮಾರಾಟದಿಂದ 21,91,75,052 ರೂಪಾಯಿ ಬಂದಿದ್ದರೆ, ಹಾಸನಾಂಬೆ ದೇವಸ್ಥಾನದ ಹುಂಡಿ ಹಣ ಸೇರಿ 25,59,87,327 ಸಂಗ್ರಹವಾಗಿದೆ. ಇನ್ನು ಹಾಸನಾಂಬೆಗೆ ಕಾಣಿಕೆ ರೂಪದಲ್ಲಿ ಚಿನ್ನ, ಬೆಳ್ಳಿ ಸಹ ಬಂದಿದೆ.ಹಾಗೇ ವಿವಿಧ ದೇಶಗಳ ಕರೆನ್ಸಿ ಜೊತೆಗೆ ಅಮಾನ್ಯೀಕರಣಗೊಂಡಿರುವ ನೋಟುಗಳನ್ನು ಸಹ ಹುಂಡಿಗೆ ಹಾಕಿದ್ದಾರೆ.
For More Updates Join our WhatsApp Group :
