ಚಾಮರಾಜನಗರ : ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡುತ್ತಿದ್ದಂತೆ ಸಿಡಿದೆದ್ದಿರುವ ಕಾಂಗ್ರೆಸ್ ಪಡೆ ಇಂದು ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಮಾತನಾಡಿ, ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಕ್ರಮ ಆಸ್ತಿ ಬಾಂಬ್ ಸಿಡಿಸಿದರು.
ಡಿ ನೋಟಿಫೈ ವಿಚಾರವಾಗಿ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಮಾತನಾಡಿ, ನೂರಾರು ಹೆಕ್ಟೇರ್ ತೋಟಗಳನ್ನು ಡಿನೋಟಿಫೈ ಮಾಡಿ, ಕೋಟಿ.. ಕೋಟಿ ಹಣ ಮಾಡುತ್ತಿದ್ದರು. ಏನು ಸರ್ ಇವೆಲ್ಲಾ ಅಂತಾ ಕೇಳಿದ್ದಕ್ಕೆ ಏನು ಮಾಡೋದು ಪಕ್ಷಕ್ಕೆ ಹಣ ಬೇಕಲ್ಲ ಅಂತ ಹೇಳಿದ್ರು ಎಂದು ತಿಳಿಸಿದರು.
ಕೇಂದ್ರ ಸಚಿವ ಕುಮಾರಸ್ವಾಮಿ ಹಗರಣದ ದಾಖಲೆ ನನ್ನ ಬಳಿ ಇದೆ. ಡಿನೋಟಿಫೈ ಹಗರಣದ ವಿಚಾರವಾಗಿ ನನ್ನ ಬಳಿ ರೆಕಾರ್ಡ್ ಇದೆ. ಅದನ್ನು ಸಿಎಂ ಸಿದ್ದರಾಮಯ್ಯ ಇಲ್ಲವೇ ಡಿ.ಕೆ.ಶಿವಕುಮಾರ್ಗೆ ನೀಡಿ ದೂರು ದಾಖಲು ಮಾಡುವಂತೆ ಹೇಳುತ್ತೇನೆ ಎಂದರು.