ಸಿದ್ದರಾಮಯ್ಯ ವಿರುದ್ಧ HDK ಗಂಭೀರ ಆರೋಪ

ಬೆಂಗಳೂರು : ರಾಜ್ಯದಲ್ಲಿ ಸಂಚಲನ ಮೂಡಿಸುತ್ತಿರುವ ಮುಡಾ ಹಗರಣದ ಹಿಂದೆಯೇ ಕೇಂದ್ರ ಸಚಿವ ಹೆಚ್.​ಡಿ. ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯ ವಿರುದ್ದ ಮತ್ತೊಂದು ಗಂಭೀರ ಆರೋಪ‌ ಮಾಡಿದ್ದಾರೆ. ಡಿಸಿಎಂ ಆಗಿದ್ದಾಗ ಸಿದ್ದರಾಮಯ್ಯ ಒಂದು ಮನೆ ಕಟ್ಟಿದ್ದರು. ಯಾರ ಜಾಗದಲ್ಲಿ ನೀವು ಮನೆ ಕಟ್ಟಿದ್ದೀರಾ, ಆ ದಾಖಲೆ ಬೇಕಾ ಎಂದು ಪ್ರಶ್ನಿಸಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾದಲ್ಲಿ ಅಲರ್ಟ್ ಆಗಿದ್ದ ದಲಿತ ಸಿಎ ನಿವೇಶನದಲ್ಲಿ ಅಕ್ರಮವಾಗಿ ಮನೆ ಕಟ್ಟಿದವರು ಯಾರು?. 15 ನಿವೇಶನ ತೆಗೆದುಕೊಂಡಿರುವುದಲ್ಲದೇ ವಿಕಲಚೇತನ ದಲಿತ ವ್ಯಕ್ತಿಗೆ 24 ಸಾವಿರ ರೂ. ನೀಡಿ ಸೈಟ್​ ಪಡೆಯುತ್ತಾರೆ.

ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ 10 ಸಾವಿರ ರೂ. ಸ್ಕೈಯರ್ ಫೀಟ್ ಜಾಗ ಅಕ್ರಮವಾಗಿ ಪಡೆಯುತ್ತಾರೆ. ಆಮೇಲೆ ನಿವೇಶನ ತೆಗೆದುಕೊಂಡ ವ್ಯಕ್ತಿ ಬಂದು ನೋಡಿದಾಗ ಮನೆ ಕಟ್ಟಿರುವುದು ಗಮನಕ್ಕೆ ಬರುತ್ತದೆ. ಈ ಬಗ್ಗೆ ನನ್ನ ಬಳಿ ಈಗಲೂ ದಾಖಲೆ ಇದೆ ಎಂದು ಹೇಳಿದರು.

ನನ್ನದು ತೆರದ ಪುಸ್ತಕ ಅಂತಾ ಸಿದ್ದರಾಮಯ್ಯ ಯಾವಾಗಲೂ ಹೇಳುತ್ತಾರೆ. ಅದನ್ನ ತೆಗೆಯಿರಿ ಯಾರಿಗೆ ನೀವು ಸೇಲ್ ಮಾಡಿದ್ದೀರಿ?. ಇನ್ನೂ ಯಾರ ಕೈಯಲ್ಲಿದೆ ಸೈಟ್, ಹೆಸರಿಗೆ ಮಾರಾಟ ತೋರಿಸಿಕೊಂಡಿದ್ದಾರೆ. ಅದನ್ನು ತೆಗೆದರೆ ಮತ್ತೊಂದು ರಾಮಾಯಣ ಶುರುವಾಗುತ್ತೆ ಎಂದು ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕೈಜೋಡಿಸಿ ಮನವಿ ಮಾಡ್ತಿನಿ, ಎಲ್ಲ ಅಣ್ಣತಮ್ಮಂದಿರು ನೆಮ್ಮದಿಯಿಂದ ಇರಬೇಕು. ಎಲ್ಲಾ ಅಣ್ಣತಮ್ಮಂದಿರ ತರ ಬದುಕಬೇಕು ಅಂತಾ ನಿನ್ನೆ ನಾಗಮಂಗಲದಲ್ಲಿ ಹೇಳಿದ್ದೇನೆ. ನಿನ್ನೆ ನಾನು ಬೆಂಕಿ ಹಚ್ಚೋದಕ್ಕೆ ಹೋಗಿದ್ನಾ?. ನಮಗೆ ಅಭಿವೃದ್ಧಿ ಅಂದ್ರೆ ಗೊತ್ತಿಲ್ಲಾವಂತಲ್ಲಾ. ಮಾಗಡಿಯಲ್ಲಿ 2012/13 ರಲ್ಲಿ ಸುಮಾರು 600 ಕೋಟಿ ರೂ. ಕೆಲಸ ಮಾಡದೆ, ಕಳ್ಳಬಿಲ್ ಮಾಡಿ ದುಡ್ಡು ಲೂಟಿಯಾಗಿದೆ ಅಂತ ವಿಧಾನಸೌದದಲ್ಲಿ ಹೇಳಿದ್ದು ಯಾರು?. ನಿನ್ನೆ ಕರೆದುಕೊಂಡು ಹೋಗಿ ಸಿಎಂ ಹತ್ತಿರ ಭಾಷಣ ಮಾಡಿಸಿದ್ದಾರಲ್ಲಾ ಮಾಗಡಿಯಲ್ಲಿ ನಡೆದ ಅಕ್ರಮವನ್ನ ಯಾರು ಮುಚ್ಚಿ ಹಾಕಿದ್ರು?. ಇವರಿಂದ ನಾನು ಪಾಠ ಕಲಿಬೇಕಾ? ಎಂದು ಪರೋಕ್ಷವಾಗಿ ಶಾಸಕ ಬಾಲಕೃಷ್ಣ ವಿರುದ್ಧ ಹರಿಹಾಯ್ದರು.

Leave a Reply

Your email address will not be published. Required fields are marked *