ಡಿಹೈಡ್ರೇಷನ್, ಮೈಗ್ರೇನ್, ಉಷ್ಣತೆ ಏರಿಕೆ – ತಲೆನೋವಿನ ಹಿಂದೆ ಹಲವು ಕಾರಣಗಳು
ಬಿಸಿಲಿನಲ್ಲಿ ಹೊರಗೆ ಹೋದ ತಕ್ಷಣ ಅನೇಕರಿಗೆ ತಲೆನೋವು ಬರುತ್ತದೆ. ಇದನ್ನು ಸಾಮಾನ್ಯವೆಂದು ಪರಿಗಣಿಸಿ ನಿರ್ಲಕ್ಷಿಸುವುದು ಸೂಕ್ತವಲ್ಲ, ಏಕೆಂದರೆ ಇದು ದೇಹದಲ್ಲಿನ ಕೆಲವು ಅಸಮತೋಲನದ ಸಂಕೇತವಾಗಿರಬಹುದು. ತಲೆ ಭಾರ, ಕಣ್ಣುಗಳಲ್ಲಿ ಉರಿ, ತಲೆತಿರುಗುವಿಕೆ, ದೌರ್ಬಲ್ಯ, ಅತಿಯಾದ ಬೆವರು ಅಥವಾ ಚಡಪಡಿಕೆ ಮುಂತಾದ ಲಕ್ಷಣಗಳು ಸೂರ್ಯನ ಬೆಳಕಿಗೆ ಒಡ್ಡಿಕೊಂಡ ತಕ್ಷಣ ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ, ವೇಗದ ಹೃದಯ ಬಡಿತ, ಆಯಾಸ ಕಂಡುಬರಬಹುದು. ಹಾಗಾದರೆ ಈ ರೀತಿಯಾಗುವುದಕ್ಕೆ ಕಾರಣವೇನು, ಈ ಸಮಸ್ಯೆ ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ತಡೆಗಟ್ಟಲು ಏನು ಮಾಡಬೇಕು?
ಬಿಸಿಲಿಗೆ ಹೋಗುವ ಮೊದಲು ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ತಲೆ ಮುಚ್ಚಲು ಟೋಪಿ, ದುಪ್ಪಟ್ಟಾ ಅಥವಾ ಛತ್ರಿ ಬಳಸುವುದು ಉತ್ತಮ. ಕಣ್ಣನ್ನು ರಕ್ಷಿಸಲು ಸನ್ಗ್ಲಾಸ್ ಧರಿಸಬಹುದು. ಸಾಧ್ಯವಾದಷ್ಟು ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಹೋಗಲೇ ಬೇಕಾದಾಗ ಹೊರಗೆ ಹೋಗುವ ಮೊದಲು ಸ್ವಲ್ಪ ಏನಾದರೂ ದೇಹ ತಂಪಾಗಿಸುವ ಆಹಾರ ಸೇವಿಸುವುದು ಮುಖ್ಯ. ಹಗುರ ಮತ್ತು ಸಡಿಲವಾಗಿರುವ ಉಡುಪನ್ನು ಧರಿಸುವುದರಿಂದ ದೇಹ ತಂಪಾಗಿರುತ್ತದೆ. ಈ ಸರಳ ಕ್ರಮಗಳು ತಲೆನೋವು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಬಿಸಿಲಿಗೆ ಹೋದ ತಕ್ಷಣ ತಲೆನೋವು ಕಾಣಿಸಿಕೊಳ್ಳುವುದು ದೇಹದ ಎಚ್ಚರಿಕೆಯ ಸೂಚನೆ ಆಗಿರಬಹುದು. ಆದ್ದರಿಂದ ದೇಹದ ಸಂಕೇತಗಳನ್ನು ಗಮನಿಸಿ, ಸರಿಯಾದ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಮತ್ತು ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ.
For More Updates Join our WhatsApp Group :



