ಬೆಂಗಳೂರು: ನವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಇಂದು ನಡೆಯುತ್ತಿರುವ ಆಯುಧ ಪೂಜೆಯ ಸಂಭ್ರಮ ನಗರದಲ್ಲಿ ಎಲ್ಲೆಡೆ ಕಳೆ ಕಣ್ಮನ ಸೆಳೆಯುತ್ತಿದೆ. ಬೆಳಗ್ಗೆಯಿಂದಲೇ ಬೆಂಗಳೂರು ನಗರದ ಪ್ರಸಿದ್ಧ ಕೆ.ಆರ್. ಮಾರುಕಟ್ಟೆ ಜನಸಾಗರದ ಪಡೆದಿದ್ದು, ಹೂವು, ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳ ಖರೀದಿಗೆ ಜನತೆ ದೌಡಾಯಿಸಿದ್ದಾರೆ.
ಹಬ್ಬದ ಖರೀದಿಗೆ ಬೆಲೆ ಏರಿಕೆಯ ಹೊರೆಯಿದ್ದರೂ ಜನರು ಸಂಭ್ರಮದಲ್ಲಿ ಭಾಗಿಯಾಗಿ ಅಗತ್ಯ ವಸ್ತುಗಳನ್ನು ಖರೀದಿಸುತ್ತಿರುವುದು ಕಂಡುಬಂದಿತು. ಮಾರಾಟದ ಜತೆಗೆ ಟ್ರಾಫಿಕ್ ಜಾಮ್‌ನ ತೀವ್ರತೆ ಕೂಡ ಹೆಚ್ಚಾಗಿದೆ. ಟೌನ್ ಹಾಲ್‌ನಿಂದ ಕೆ.ಆರ್. ಮಾರುಕಟ್ಟೆವರೆಗೆ ರಸ್ತೆ ತುಂಬಿ ಹೋಗಿದ್ದು, ಫ್ಲೈಓವರ್ ಮೇಲೂ ವಾಹನಗಳನ್ನು ಪಾರ್ಕ್ ಮಾಡುವ ಪರಿಸ್ಥಿತಿ ಎದುರಾಗಿದೆ.
ಬಿಗಿ ಭದ್ರತೆ ಮತ್ತು ಜನಸಂದಣಿಯಿಂದ ಮಾರುಕಟ್ಟೆ ಭಾಗದಲ್ಲಿ ಕಣ್ಣಿಗೆ ಮಿಂಚುವ ಹಬ್ಬದ ಹರ್ಷ ಮನೆಮಾಡಿದೆ. ನಗರ ಪೊಲೀಸ್ ಇಲಾಖೆಯು ವಾಹನ ಸವಾರರಿಗೆ ಪರ್ಯಾಯ ಮಾರ್ಗ ಬಳಸುವಂತೆ ಸೂಚನೆ ನೀಡಿದೆ.
For More Updates Join our WhatsApp Group :
