ಉತ್ತರಾಖಂಡ​ದಲ್ಲಿ ಮಳೆ ಅಬ್ಬರ : ಕೇದಾರನಾಥದಲ್ಲಿ 700ಕ್ಕೂ ಹೆಚ್ಚು ಯಾತ್ರಾರ್ಥಿಗಳ ಸ್ಥಳಾಂತರ

ಉತ್ತರಾಖಂಡ): ಬುಧವಾರ ರಾತ್ರಿ ರುದ್ರಪ್ರಯಾಗ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಮಾರ್ಗವು ತೀವ್ರವಾಗಿ ಹಾನಿಯಾಗಿದ್ದು, ಇಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸಲು ರಕ್ಷಣಾ ಕಾರ್ಯ ನಡೆಯುತ್ತಿದೆ.

ಉತ್ತರಾಖಂಡ ಪೊಲೀಸ್​ ಮಾಹಿತಿ ಪ್ರಕಾರ, ಶ್ರೀ ಕೇದಾರನಾಥ ಧಾಮ ಯಾತ್ರಾ ಮಾರ್ಗದಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯ ಮುಂದುವರೆದಿದೆ. ಹೆಲಿಕಾಪ್ಟರ್ ಮೂಲಕ 737 ಜನರನ್ನು ರಕ್ಷಿಸಲಾಗಿದೆ. ಗುರುವಾರದ ವೇಳೆಗೆ ಪಡೆಗಳು ಕನಿಷ್ಠ 2,670 ಜನರನ್ನು ಸೋನ್‌ಪ್ರಯಾಗಕ್ಕೆ ಕರೆದೊಯ್ಯಲಾಯಿತು. ಎಸ್​ಡಿಆರ್​ಎಫ್​, ಎನ್‌ಡಿಆರ್‌ಎಫ್, ಡಿಡಿಆರ್‌ಎಫ್, ಜಿಲ್ಲಾ ಪೊಲೀಸ್ ಮತ್ತು ಆಡಳಿತ ತಂಡಗಳು ನಿಸ್ವಾರ್ಥವಾಗಿ ಭಕ್ತರಿಗೆ ಸಹಾಯ ಮಾಡುತ್ತಿವೆ” ಎಂದು ಉತ್ತರಾಖಂಡ್ ಪೊಲೀಸ ಇಲಾಖೆ ಸಾಮಾಜಿಕ ಜಾಲತಾಣವಾದ ಎಕ್ಸ್​ ಖಾತೆಯಲ್ಲಿ ಬರೆಯಲಾಗಿದೆ.

ಎರಡು ದಿನಗಳವರೆಗೆ ಕೇದಾರನಾಥ ಯಾತ್ರೆ ಸ್ಥಗಿತ: ಇದಕ್ಕೂ ಮುನ್ನ, ಉತ್ತರಾಖಂಡದ ಪೊಲೀಸ್ ಮಹಾನಿರ್ದೇಶಕ ಅಭಿನವ್ ಕುಮಾರ್ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಭಾರಿ ಮಳೆಯ ನಂತರ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳ ಕುರಿತು ಮಾಹಿತಿ ನೀಡಿದರು. ರಾಜ್ಯದ ಜನರು ಮತ್ತು ಪ್ರಯಾಣಿಕರು ಜಾಗರೂಕರಾಗಿರಿ ಮತ್ತು ಅಧಿಕಾರಿಗಳ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದರು.

ತೆಹ್ರಿ ಮತ್ತು ರುದ್ರಪ್ರಯಾಗ ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಕೇದಾರನಾಥ ಯಾತ್ರೆಯನ್ನು ಎರಡು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ. ಯಮುನೋತ್ರಿ ಮತ್ತು ಕೇದಾರನಾಥದ ಚಾರಣ ಮಾರ್ಗಗಳಲ್ಲಿ ಯಾತ್ರಾರ್ಥಿಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ರಾಜ್ಯ ಸರ್ಕಾರವು ಸಿಲುಕಿರುವ ಜನರನ್ನು ಸ್ಥಳಾಂತರಿಸಲು ವಾಯುಪಡೆಯ ಸಹಾಯವನ್ನು ತೆಗೆದುಕೊಳ್ಳಲಾಗಿದೆ. 12 ಎನ್‌ಡಿಆರ್‌ಎಫ್ ಮತ್ತು 60 ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದು ಉತ್ತರಾಖಂಡ ಡಿಜಿಪಿ ಅಭಿನವ್ ಕುಮಾರ್ ಮಾಹಿತಿ ನೀಡಿದ್ದಾರೆ.

”ರಾಜ್ಯದಲ್ಲಿ 48 ಗಂಟೆಗಳ ಕಾಲ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆಯಿಂದ ನಮಗೆ ಎಚ್ಚರಿಕೆ ನೀಡಲಾಗಿದೆ. ನಿನ್ನೆ ರಾತ್ರಿ ಮಳೆ ಪ್ರಾರಂಭವಾದ ನಂತರ, ನಾವು ವಿವಿಧ ಪ್ರದೇಶಗಳಿಂದ ಭೂಕುಸಿತಗಳು, ಬಂಡೆಗಳು ಬೀಳುವಿಕೆ ಸೇರಿದಂತೆ ಮಳೆಯಿಂದ ಹಾನಿಯಾಗಿರುವ ವರದಿಗಳನ್ನು ಪಡೆಯಲು ಪ್ರಾರಂಭಿಸಿದ್ದೇವೆ. ಹಲವು ಸ್ಥಳಗಳಲ್ಲಿ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಇದುವರೆಗೆ, ವಿವಿಧ ಜಿಲ್ಲೆಗಳಲ್ಲಿ 11 ಜನರು ಸಾವನ್ನಪ್ಪಿದ್ದು, ಮತ್ತು 8 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇದಾರನಾಥದ ಚಾರಣ ಮಾರ್ಗದಲ್ಲಿ ಸಿಕ್ಕಿಹಾಕಿಕೊಂಡಿದ್ದವರನ್ನು ರಕ್ಷಣೆ ಮಾಡಲಾಗಿದೆ” ಎಂದು ತಿಳಿಸಿದರು.

Leave a Reply

Your email address will not be published. Required fields are marked *