ಇಂದಿನಿಂದ ಜೂನ್ 12 ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯ ಎಚ್ಚರಿಕೆ

ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯಾದ್ಯಂತ ಮುಂಗಾರು ಚುರುಕು ಪಡೆಯುತ್ತಿದ್ದು, ಇಂದಿನಿಂದ ಜೂನ್ 12ರ ವರೆಗೆ ರಾಜ್ಯದಲ್ಲಿ ಭಾರೀ ಮಳೆಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಕಳೆದೊಂದು ವಾರದಿಂದ ರಾಜ್ಯದ ಎಲ್ಲಾ ಭಾಗದಲ್ಲೂ ಅಬ್ಬರದ ಮಳೆಯಾಗುತ್ತಿದೆ. ಇದೀಗ ಇಲಾಖೆ ನೀಡಿರುವ ಎಚ್ಚರಿಕೆಯ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಜಿಲ್ಲೆಗಳಿಗೆ ಅಲರ್ಟ್‍ಗಳನ್ನು ಘೋಷಣೆ ಮಾಡಲಾಗಿದೆ. ರಾಜ್ಯದ 7 ಜಿಲ್ಲೆಗಳಿಗೆ ಹವಾಮಾನ ಇಲಾಖೆ ಇಂದು ಆರೆಂಜ್ ಅಲರ್ಟ್ ಘೋಷಿಸಿದೆ. ಒಟ್ಟು 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.

ಆರೆಂಜ್ ಅಲರ್ಟ್: ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ವಿಜಯಪುರ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಉಡುಪಿ, ಉತ್ತರಕನ್ನಡ ಜಿಲ್ಲೆಗಳಿಗೆ ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ಕೊಟ್ಟಿದೆ. ಮುಂದಿನ 3 ಗಂಟೆಗಳ ಕಾಲ 30-40 ಕಿಮೀ ವೇಗದಲ್ಲಿ ಗಾಳಿ, ಮಳೆಯಾಗುವ ಸಾಧ್ಯತೆಗಳಿವೆ

ಯೆಲ್ಲೋ ಅಲರ್ಟ್: ದಕ್ಷಿಣ ಕನ್ನಡ, ಗದಗ, ಕಲಬುರಗಿ, ರಾಯಚೂರು, ಯಾದಗಿರಿ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ

ಬೆಂಗಳೂರಿನಲ್ಲಿ ಮಳೆಯ ಹಿನ್ನೆಲೆ 447 ಮರಗಳು ಧರೆಗೆ ಉರುಳಿವೆ. ಕೇವಲ ಆರು ದಿನದಲ್ಲಿ 447 ಮರಗಳು ಮತ್ತು 800 ಕ್ಕೂ ಮರದ ಕೊಂಬೆಗಳು ಧರಶಾಹಿಯಾಗಿವೆ. 447 ರಲ್ಲಿ 376 ಮರಗಳನ್ನ ತೆರವು ಮಾಡಲಾಗಿದ್ದು, 71 ಮರಗಳನ್ನ ತೆರವು ಮಾಡಬೇಕಾಗಿದೆ. https://googleads.g.doubleclick.net/pagead/ads?gdpr=0&client=ca-pub-9639279280222695&output=html&h=280&adk=882495962&adf=2103428249&w=686&abgtt=6&fwrn=4&fwrnh=100&lmt=1717827540&num_ads=1&rafmt=1&armr=3&sem=mc&pwprc=5948514364&ad_type=text_image&format=686×280&url=https%3A%2F%2Fpublictv.in%2Fheavy-rain-warning-in-the-state-from-today-till-june-12%2F&fwr=0&pra=3&rh=172&rw=685&rpe=1&resp_fmts=3&wgl=1&fa=27&uach=WyJXaW5kb3dzIiwiMTAuMC4wIiwieDg2IiwiIiwiMTI1LjAuNjQyMi4xNDIiLG51bGwsMCxudWxsLCI2NCIsW1siR29vZ2xlIENocm9tZSIsIjEyNS4wLjY0MjIuMTQyIl0sWyJDaHJvbWl1bSIsIjEyNS4wLjY0MjIuMTQyIl0sWyJOb3QuQS9CcmFuZCIsIjI0LjAuMC4wIl1dLDBd&dt=1717827927002&bpp=4&bdt=2194&idt=4&shv=r20240605&mjsv=m202406030101&ptt=9&saldr=aa&abxe=1&cookie=ID%3D7db1eb5d0ddc2aab%3AT%3D1702569743%3ART%3D1717828600%3AS%3DALNI_MZtZME7nF88OPJiyI17HJ4Wzilhcg&gpic=UID%3D00000caea0626095%3AT%3D1702569743%3ART%3D1717828600%3AS%3DALNI_MYjzwSLZikckjEBifsXGB1BCQ8N9g&eo_id_str=ID%3Df7d804da3b9eb7d9%3AT%3D1711617140%3ART%3D1717828600%3AS%3DAA-AfjZ7yhAHRHmNudTQp4UmIRKh&prev_fmts=0x0%2C728x90%2C1195x90&nras=2&correlator=8572293909495&frm=20&pv=1&ga_vid=1875432168.1702569739&ga_sid=1717827927&ga_hid=1481555900&ga_fc=1&ga_cid=72384575.1717737169&u_tz=330&u_his=1&u_h=864&u_w=1536&u_ah=824&u_aw=1536&u_cd=24&u_sd=1.563&dmc=8&adx=98&ady=4270&biw=1215&bih=562&scr_x=0&scr_y=2035&eid=44759876%2C44759927%2C44759842%2C31084347%2C31084349%2C44798934%2C95334510%2C95334529%2C95334570%2C95334054%2C95334156%2C31078663%2C31078665%2C31078668%2C31078670&oid=2&pvsid=920171287577264&tmod=1486943341&uas=3&nvt=1&ref=https%3A%2F%2Fpublictv.in%2F&fc=1408&brdim=0%2C0%2C0%2C0%2C1536%2C0%2C1536%2C824%2C1229%2C562&vis=1&rsz=%7C%7Cs%7C&abl=NS&fu=128&bc=31&bz=1.25&td=1&psd=W251bGwsbnVsbCxudWxsLDNd&nt=1&ifi=5&uci=a!5&btvi=1&fsb=1&dtd=M

Leave a Reply

Your email address will not be published. Required fields are marked *