‘ಗ್ರಾಮ ಆಡಳಿತಾಧಿಕಾರಿ’ ಹುದ್ದೆಗೆ ಅರ್ಜಿ ಹಾಕಿರುವವರಿಗೆ ಇಲ್ಲಿದೆ ಮಹತ್ವದ ಮಾಹಿತಿ

ಬೆಂಗಳೂರು : 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಡಿದೆ.

ಅಭ್ಯರ್ಥಿಗಳು ಗಮನಿಸು ವಿಚಾರ ಅಂದರೆ 1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಸುಮಾರು 5,70,982 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿ ಹಾಕಿದವರ ಸಂಖ್ಯೆ 9 ಲಕ್ಷಕ್ಕೂ ಹೆಚ್ಚು, ಆದರೆ ಮೂರು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸದ ಕಾರಣ, ಇನ್ನು ಕೆಲವು ಸಮಸ್ಯೆ ಹಿನ್ನೆಲೆ ಅರ್ಜಿ ರಿಜೆಕ್ಟ್ ಸಹ ಆಗಿವೆ ಎನ್ನಲಾಗಿದೆ.

1000 ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಸೆಪ್ಟೆಂಬರ್ 29, ಅಕ್ಟೋಬರ್ 27 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಸೆಪ್ಟೆಂಬರ್ 29 ಕ್ಕೆ ಮತ್ತು ಎರಡನೇ ಹಂತದಲ್ಲಿ ಅಕ್ಟೋಬರ್ 27 ರಂದು ಪರೀಕ್ಷೆ ನಡೆಸಲಾಗುತ್ತಿದೆ. ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದ್ದು, ಮೊದಲ ಹಂತದ ಪರೀಕ್ಷೆ ಸೆಪ್ಟೆಂಬರ್ 29 ಹಾಗೂ ದ್ವಿತೀಯ ಹಂತದ ಪರೀಕ್ಷೆ ಅಕ್ಟೋಬರ್ 27ರಂದು ಎಲ್ಲಾ ಜಿಲ್ಲೆಗಳಲ್ಲೂ ನಡೆಯಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

Leave a Reply

Your email address will not be published. Required fields are marked *