ಹಲಗಲಿ ಬೇಡರ ನಾಯಕನಾಗಿ ಡಾಲಿ, ‘ಹಲಗಲಿ’ ಟೀಸರ್ ಇಲ್ಲಿದೆ. | Daali Dhananjay

ಹಲಗಲಿ ಬೇಡರ ನಾಯಕನಾಗಿ ಡಾಲಿ, ‘ಹಲಗಲಿ’ ಟೀಸರ್ ಇಲ್ಲಿದೆ.

ಹಲಗಲಿ ಬೇಡರ ಸಶಸ್ತ್ರ ಹೋರಾಟದ ಕತೆ ಸಿನಿಮಾ ಆಗುತ್ತಿರುವುದು ಹಳೆಯ ಸುದ್ದಿ, ಇದೀಗ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ. ನಟ ಡಾಲಿ ಧನಂಜಯ್ ಅವರು ಬೇಡರ ನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಹಲಗಲಿ ಬೇಡರ ಹೋರಾಟದ ಕತೆ ಬೆಳ್ಳಿ ತೆರೆಯ ಮೇಲೆ ಸಿನಿಮಾ ರೂಪದಲ್ಲಿ ಕಾಣಿಸಿಕೊಳ್ಳಲಿದೆ. ಸಿನಿಮಾದ ಟೀಸರ್ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಡಾಲಿ ಧನಂಜಯ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

ದುಹಾರಾ ಮೂವೀಸ್ ಯೂಟ್ಯೂಬ್ ಚಾನೆಲ್ನಲ್ಲಿ ‘ಹಲಗಲಿ’ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಗಿದೆ. ಬುಡಕಟ್ಟು ಸಮುದಾಯದವರು ಕೋಪೋದ್ರಿಕ್ತರಾಗಿ ಕೈಯಲ್ಲಿ ತಮ್ಮ ಆಯುಧಗಳಾದ ಭರ್ಜಿ, ಕೊಡಲಿ, ಮಚ್ಚು, ಬಿಲ್ಲು-ಬಾಣಗಳನ್ನು ಹಿಡಿದುಕೊಂಡು ಬ್ರಿಟೀಷರ ಆಡಳಿತ ಭವನದ ಕಡೆಗೆ ನುಗ್ಗುತ್ತಿರುವ ದೃಶ್ಯ ಟೀಸರ್ನಲ್ಲಿದೆ. ಆ ಗುಂಪಿನ ಮುಖ್ಯಸ್ಥ ಜಡಗಣ ಹಾರಿ ನೆಗೆದು ಎಸೆದ ಭರ್ಜಿ, ಬ್ರಿಟೀಷರ ಬಾವುಟವನ್ನು ತುಂಡು ಮಾಡಿ ಕೆಳಗೆ ಬೀಳಿಸುತ್ತದೆ. ಬಾವುಟ ಕೆಳಗೆ ಬೀಳುತ್ತಿದ್ದಂತೆ ನಾಯಕ ಡಾಲಿ ಧನಂಜಯ್ ಮುಖ ಕಾಣಿಸಿಕೊಳ್ಳುತ್ತದೆ. ಸಿನಿಮೀಯವಾದ ಈ ಟೀಸರ್ ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಹಲಗಲಿ ಬೇಡರ ಹೋರಾಟದ ಕತೆಯನ್ನು ಸಿನಿಮಾ ಮಾಡಲಾಗುತ್ತಿದೆ. 1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಬ್ರಿಟೀಷರು ನಿಶ್ಯಸ್ತ್ರೀಕರಣ ಕಾಯ್ದೆ ಜಾರಿಗೊಳಿಸಿದರು. ಅದರಂತೆ ಭಾರತೀಯರೆಲ್ಲ ತಮ್ಮ ಆಯುಧಗಳನ್ನು ಬ್ರಿಟೀಷರಿಗೆ ಒಪ್ಪಿಸಬೇಕಾಯ್ತು. ಆದರೆ ಆಯುಧಗಳನ್ನು ಜೀವನಕ್ಕಾಗಿ ಬಳಸುತ್ತಿದ್ದ, ಆಯುಧಗಳನ್ನು ದೇವರೆಂದು ನಂಬಿದ್ದ ಹಲಗಲಿಯ ಬೇಡರು ಇದಕ್ಕೆ ಒಪ್ಪಲಿಲ್ಲ. ಅದೇ ಆಯುಧಗಳನ್ನು ಬಳಸಿ ಬ್ರಿಟೀಷರ ವಿರುದ್ಧ ದಂಗೆಗೆ ಇಳಿದರು. ಅದೇ ಕತೆಯನ್ನು ಈಗ ಸಿನಿಮಾ ಮಾಡಲಾಗುತ್ತಿದೆ. ಹಲಗಲಿ ಬೇಡರ ನಾಯಕ ಜಡಗಣನ ಡಾಲಿ ಧನಂಜಯ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

‘ಹಲಗಲಿ’ ಸಿನಿಮಾವನ್ನು ಸುಕೇಶ್ ನಾಯಕ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಮಾಡುತ್ತಿರುವುದು ಕಲ್ಯಾಣ್ ಚಕ್ರವರ್ತಿ ಡಿ, ಯರಲಗಡ್ಡ ಲಕ್ಷ್ಮಿ ಶ್ರೀನಿವಾಸ್ ಸಹ ನಿರ್ಮಾಪಕ, ವಾಸುಕಿ ವೈಭವ್ ಸಂಗೀತ ನೀಡುತ್ತಿದ್ದಾರೆ. ಸಿನಿಮಾನಲ್ಲಿ ಡಾಲಿ ಧನಂಜಯ್ ಜೊತೆಗೆ ಸಪ್ತಮಿ ಗೌಡ, ಬಿ ಸುರೇಶ್, ಶರತ್ ಲೋಹಿತಾಶ್ವ, ಬಿರಾದರ್, ವೀಣಾ ಸುಂದರ್ ಇನ್ನೂ ಹಲವರು ನಟಿಸುತ್ತಿದ್ದಾರೆ. ಶಿವೇಂದರ್ ಸಾಯಿ ಶ್ರೀರಾಮ್ ಕ್ಯಾಮೆರಾ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಕಲಾ ನಿರ್ದೇಶನ ರಾಮಾಂಜನೇಯಲು ಅವರದ್ದು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *