ರೇವ್ ಪಾರ್ಟಿ ಡ್ರಗ್ ಪ್ರಕರಣ: ನಟಿ ಹೇಮಾ ವಿರುದ್ಧದ ಕೇಸ್ ರದ್ದು.
ಬೆಂಗಳೂರು: ಕಳೆದ ವರ್ಷ ಬೆಂಗಳೂರಿನ ಹೊರವಲಯದಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ನಟಿ ಹೇಮಾ ಹೆಸರು ಕೂಡ ಕೇಳಿ ಬಂದಿತ್ತು. ಈಗ ನಟಿಗೆ ಪ್ರಕರಣದಲ್ಲಿ ದೊಡ್ಡ ರಿಲೀಫ್ ಸಿಕ್ಕಿದೆ. ನಟಿ ವಿರುದ್ಧದ ಡ್ರಗ್ಸ್ ಸೇವನೆ ಪ್ರಕರಣವನ್ನು ರದ್ದು ಮಾಡಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಕೇಸ್ ರದ್ದು ಕೋರಿ ನಟಿ ಹೇಮಾ ಹೈಕೋರ್ಟ್ ಮೊರೆ ಹೋಗಿದ್ದರು. ಹೇಮಾ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ.
ರಿಲೀಫ್ ಸಿಗಲು ಕಾರಣ ಏನು ?
ಖಾಸಗಿ ಆಸ್ಪತ್ರೆಯಲ್ಲಿ ನಟಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಡ್ರಗ್ಸ್ ಸೇವಿಸಿದ ವ್ಯಕ್ತಿಯ ಪರೀಕ್ಷೆಯನ್ನು ಖಾಸಗಿ ಆಸ್ಪತ್ರೆಯಲ್ಲಿ ಮಾಡಲಾಗುತ್ತದೆ. ಡ್ರಗ್ಸ್ ಸೇವನೆ ದೃಢ ಪಡಿಸುವ ಪರೀಕ್ಷೆಗಳ ಮಾನದಂಡಗಳು ಇನ್ನೂ ಲಭ್ಯವಿಲ್ಲ. ಮಾನದಂಡವಿಲ್ಲದ ಪರೀಕ್ಷೆಗಳು ನ್ಯಾಯಾಲಯದಲ್ಲಿ ವಿಶ್ವಾಸಾರ್ಹವಲ್ಲ. ಹೀಗಾಗಿ ಆರೋಪಿ ವಿರುದ್ಧ ಎನ್ ಡಿಪಿಎಸ್ ಕೇಸ್ ಮುಂದುವರಿಸಲು ಕಾನೂನು ಬದ್ಧ ಆಧಾರವಿಲ್ಲವೆಂದು ಕೋರ್ಟ್ ನಿರ್ಧಾರ ಮಾಡಿದೆ. ಹೀಗಾಗಿ, ನಟಿ ಹೇಮಾ ವಿರುದ್ಧದ ಪ್ರಕರಣ ರದ್ದುಗೊಳಿಸಿದೆ.
ನಟಿ ಹೇಮಾ ಕಣ್ಣೀರು
ಹೈಕೋರ್ಟ್ ನಲ್ಲಿ ಕೇಸ್ ರದ್ದುಗೊಂಡ ಹಿನ್ನೆಲೆ ವಿಡಿಯೋ ಮೂಲಕ ನಟಿ ಹೇಮಾಕಣ್ಣೀರು ಹಾಕಿದ್ದಾರೆ. ‘ಘಟನೆಯಿಂದ ಕುಗ್ಗಿ ತಾಯಿ ಸಾವನ್ನಪ್ಪಿದರು. ಆ ನೋವನ್ನ ಮನಸ್ಸಿನಲ್ಲಿ ಇಟ್ಟುಕೊಂಡು, ಒಳ್ಳೆ ವಿಚಾರವನ್ನ ಹಂಚಿಕೊಳ್ಳುತ್ತಿದ್ದೇನೆ. ಬೆಂಗಳೂರು ಹೈಕೋರ್ಟ್ ಕೇಸ್ ವಜಾ ಮಾಡಿದೆ.
ಪ್ರಕರಣದ ಹಿನ್ನೆಲೆ:
2024ರಲ್ಲಿ ಹೆಬ್ಬಗೋಡಿಯ ಜಿಆರ್ ಫಾರ್ಮ್ಸ್ ಅಲ್ಲಿ ವಾಸು ಎಂಬಾತ ಬರ್ತ್ಡೇ ಪಾರ್ಟಿ ಆಯೋಜಿಸಿದ್ದ. ರೇವ್ ಪಾರ್ಟಿಯಲ್ಲಿ ಹೇಮಾ ಕೂಡ ಭಾಗಿ ಆಗಿದ್ದರು.ಈ ವೇಳೆ ಪಾರ್ಟಿ ಮೇಲೆ ದಾಳಿ ನಡೆದಿತ್ತು. ಮಾದಕವಸ್ತು ಸೇವನೆ ಮತ್ತು ಶಾಂತಿಭಂಗ ಉಂಟು ಮಾಡಿದ ಆರೋಪದ ಮೇಲೆ ಕೇಸ್ ದಾಖಲಾಗಿತ್ತು. ನಟಿ ಹೇಮಾ ಸೇರಿ 88 ಮಂದಿ ಬಂಧನವಾಗಿತ್ತು.
For More Updates Join our WhatsApp Group :




