ಬ್ಲೂಬರ್ಡ್ ಬ್ಲಾಕ್-2 ಉಪಗ್ರಹ ಯಶಸ್ವಿ ಉಡಾವಣೆ.
ಶ್ರೀಹರಿಕೋಟ : ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ(ISRO) ಬ್ಲೂಬರ್ಡ್ ಬ್ಲಾಕ್-2 ಬಾಹುಬಲಿ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಭಾರತದ ಮೊದಲ ವಾಣಿಜ್ಯ ಉಪಗ್ರಹ ಉಡಾವಣೆ ಇದಾಗಿದೆ. ಇದು ಮೂರು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕಕ್ಷೆಗೆ ಸೇರಿಸಲಾಯಿತು. ಈ ಯಶಸ್ಸಿಗೆ ಇಸ್ರೋ ವಿಜ್ಞಾನಿಗಳು ಪರಸ್ಪರ ಅಭಿನಂದಿಸಿದರು. ಬ್ಲೂಬರ್ಡ್ ಬ್ಲಾಕ್-2 ಸುಮಾರು 6100 ಕಿಲೋಗ್ರಾಂಗಳಷ್ಟು ತೂಗುತ್ತದೆ.
ಇದು ಇಸ್ರೋ LVM3 ಬಳಸಿ ಲೋ ಅರ್ಥ್ ಆರ್ಬಿಟ್ (LEO) ಗೆ ಕಳುಹಿಸಿದ ಅತಿ ಭಾರವಾದ ಪೇಲೋಡ್ ಆಗಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ಸುಗಮಗೊಳಿಸಿದ ವಾಣಿಜ್ಯ ಒಪ್ಪಂದದ ಅಡಿಯಲ್ಲಿ ಉಡಾವಣೆಯನ್ನು ಕೈಗೊಳ್ಳಲಾಗುತ್ತಿದೆ. ಈ ಮೊದಲು ಶ್ರೀಹರಿಕೋಟಾದಿಂದ ಬೆಳಿಗ್ಗೆ 8.54 ಕ್ಕೆ ಉಡಾವಣೆ ಮಾಡಲು ನಿರ್ಧರಿಸಲಾಗಿತ್ತು ಬಳಿಕ 8 ಗಂಟೆ 55 ನಿಮಿಷ 30 ಸೆಕೆಂಡ್‌ಗೆ ಉಡಾವಣೆ ಮಾಡಲಾಗಿದೆ.
ಬ್ಲೂಬರ್ಡ್ -2 ಯಶಸ್ವಿ ಉಡಾವಣೆಯ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಇದು ಭಾರತದ ಬಾಹ್ಯಾಕಾಶ ಕ್ಷೇತ್ರದ ಒಂದು ಪ್ರಮುಖ ಸಾಧನೆಯಾಗಿದೆ ಎಂದು ಹೇಳಿದರು. ಭಾರತದ ನೆಲದಿಂದ ಇದುವರೆಗೆ ಉಡಾಯಿಸಲಾದ ಅತ್ಯಂತ ಭಾರವಾದ ಉಪಗ್ರಹವಾದ ಅಮೆರಿಕದ ಬಾಹ್ಯಾಕಾಶ ನೌಕೆ ಬ್ಲೂಬರ್ಡ್ ಬ್ಲಾಕ್ -2 ಅನ್ನು ಅದರ ಉದ್ದೇಶಿತ ಕಕ್ಷೆಗೆ ತಲುಪಿಸಿದ ಶ್ರೇಯಸ್ಸಿದೆ ಎಂದರು. ಇಸ್ರೋ ಅಭಿವೃದ್ಧಿಪಡಿಸಿರುವ ಎಲ್ವಿಎಂ3 ಮೂರು-ಹಂತದ ವಿನ್ಯಾಸವನ್ನು ಹೊಂದಿದೆ.
ಇದರಲ್ಲಿ ಎರಡು ಘನ ಸ್ಟ್ರಾಪ್-ಆನ್ ಮೋಟಾರ್‌ಗಳು (ಎಸ್200), ಒಂದು ದ್ರವ ಕೋರ್ ಹಂತ (ಎಲ್110) ಮತ್ತು ಕ್ರಯೋಜೆನಿಕ್ ಮೇಲಿನ ಹಂತ (ಸಿ25) ಅನ್ನು ಒಳಗೊಂಡಿದೆ. ಎಲ್ವಿಎಂ3ಯು ಚಂದ್ರಯಾನ-2, ಚಂದ್ರಯಾನ-3 ಮತ್ತು ಎರಡು ಒನ್‌ವೆಬ್ ಕಾರ್ಯಾಚರಣೆಗಳನ್ನು ಉಡಾವಣೆ ಮಾಡುವ ಮೂಲಕ ಒಟ್ಟು 72 ಉಪಗ್ರಹಗಳನ್ನು ಹೊತ್ತೊಯ್ದಿದೆ.
For More Updates Join our WhatsApp Group :



