ಮೂತ್ರವನ್ನು ಹೆಚ್ಚು ಸಮಯ ಹಿಡಿದಿಟ್ಟುಕೊಳ್ಳುತ್ತೀರಾ? ಆರೋಗ್ಯಕ್ಕೆ ದೊಡ್ಡ ಅಪಾಯ!

ಮೂತ್ರವನ್ನು ಹೆಚ್ಚು ಸಮಯ ಹಿಡಿದಿಟ್ಟುಕೊಳ್ಳುತ್ತೀರಾ? ಆರೋಗ್ಯಕ್ಕೆ ದೊಡ್ಡ ಅಪಾಯ!

ಈ ಅಭ್ಯಾಸದಿಂದ ಹಲವು ಆರೋಗ್ಯ ಸಮಸ್ಯೆಗಳು.

ಇಂದಿನ ವೇಗದ ಜೀವನಶೈಲಿಯಲ್ಲಿ ಕೆಲಸ, ಪ್ರಯಾಣ ಅಥವಾ ವ್ಯಸ್ತ ದಿನಚರಿಯ ಕಾರಣದಿಂದ ಹಲವರು ಮೂತ್ರವನ್ನು ದೀರ್ಘ ಕಾಲ ಹಿಡಿದಿಟ್ಟುಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ಕೆಲವರು ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ ತಜ್ಞರ ಪ್ರಕಾರ, ಈ ಅಭ್ಯಾಸ ದೇಹದ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. ಏಕೆಂದರೆ ಮೂತ್ರದ ಮೂಲಕ ದೇಹದಲ್ಲಿರುವ ಹೆಚ್ಚುವರಿ ನೀರು ಮತ್ತು ವಿಷಕಾರಿ ಪದಾರ್ಥಗಳು ಹೊರಹೋಗುತ್ತವೆ. ಇದು ದೇಹದ ಸಮತೋಲನವನ್ನು ಕಾಪಾಡಲು ಅಗತ್ಯವಾದ ಪ್ರಕ್ರಿಯೆ. ಆದರೆ ದೀರ್ಘ ಕಾಲ ಮೂತ್ರವನ್ನು ಹಿಡಿದುಕೊಳ್ಳುವುದರಿಂದ ಈ ಸಹಜ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ದೇಹ ನೀಡುವ ಸೂಚನೆಗಳನ್ನು ನಿರ್ಲಕ್ಷಿಸುವುದು ಆರೋಗ್ಯದ ದೃಷ್ಟಿಯಿಂದ ಸರಿಯಲ್ಲ. ನಿಮಗೂ ಕೂಡ ಈ ರೀತಿಯ ಅಭ್ಯಾಸವಿದ್ಯಾ, ಹಾಗಾದರೆ ಇದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ಮೂತ್ರಾಶಯದ ಮೇಲೆ ಒತ್ತಡ ಹೆಚ್ಚಾಗುವ ಸಾಧ್ಯತೆ;

ತಜ್ಞರ ಪ್ರಕಾರ, ಹೆಚ್ಚು ಸಮಯ ಮೂತ್ರವನ್ನು ಹಿಡಿದುಕೊಳ್ಳುವುದರಿಂದ ಮೂತ್ರಾಶಯದಲ್ಲಿ ಒತ್ತಡ ಹೆಚ್ಚಾಗಬಹುದು. ಇದರಿಂದ ಮೂತ್ರಪಿಂಡದ ಸ್ನಾಯುಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಕೆಲ ಸಂದರ್ಭಗಳಲ್ಲಿ ಇದು ಯೂರಿನರಿ ಟ್ರಾಕ್ಟ್ ಇನ್ಫೆಕ್ಷನ್ (UTI) ಎಂಬ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಮೂತ್ರ ದೀರ್ಘ ಕಾಲ ಉಳಿದರೆ ಬ್ಯಾಕ್ಟೀರಿಯಾ ಬೆಳೆಯುವ ಸಾಧ್ಯತೆಯೂ ಹೆಚ್ಚಾಗುತ್ತದೆ. ನಿರಂತರವಾಗಿ ಮೂತ್ರವನ್ನು ಹಿಡಿದುಕೊಳ್ಳುವ ಅಭ್ಯಾಸ ಕೆಲವರಿಗೆ ಹೊಟ್ಟೆಯ ಕೆಳಭಾಗದಲ್ಲಿ ನೋವು ಅಥವಾ ಅಸಹಜತೆಗೆ ಕಾರಣವಾಗಬಹುದು. ದೀರ್ಘಾವಧಿಯಲ್ಲಿ ಇದರಿಂದ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗಳ ಸಾಧ್ಯತೆಯೂ ಹೆಚ್ಚಾಗಬಹುದು.

ಅನಿವಾರ್ಯ ಪರಿಸ್ಥಿತಿಯಲ್ಲಿ ಏನು ಮಾಡಬೇಕು?

ಕೆಲವೊಮ್ಮೆ ತಕ್ಷಣ ವಾಶ್‌ರೂಮ್‌ಗೆ ಹೋಗಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಬಹುದು. ಅಂತಹ ಸಂದರ್ಭದಲ್ಲಿ ಶಾಂತವಾಗಿ ಕುಳಿತುಕೊಳ್ಳುವುದು ಉತ್ತಮ. ಹೆಚ್ಚು ಚಲನವಲನದಿಂದ ಮೂತ್ರಾಶಯದ ಮೇಲೆ ಒತ್ತಡ ಹೆಚ್ಚಾಗಬಹುದು. ಜೊತೆಗೆ ಆ ಸಮಯದಲ್ಲಿ ಹೆಚ್ಚು ನೀರು ಅಥವಾ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸುವುದು ಒಳ್ಳೆಯದು.

ವೈದ್ಯರು ಹೇಳುವುದೇನು?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಮೆಡಿಸಿನ್ ವಿಭಾಗದ ನಿರ್ದೇಶಕ ಹಾಗೂ ಎಚ್‌ಒಡಿ ಡಾ. ಎಲ್.ಹೆಚ್. ಘೋಟೇಕರ್ ಹೇಳುವ ಪ್ರಕಾರ, ಮೂತ್ರವನ್ನು ದೀರ್ಘ ಕಾಲ ಹಿಡಿದುಕೊಳ್ಳುವುದು ಆರೋಗ್ಯಕರ ಅಭ್ಯಾಸವಲ್ಲ. ದೇಹ ಮೂತ್ರದ ಸೂಚನೆ ನೀಡಿದಾಗ ಅದನ್ನು ನಿರ್ಲಕ್ಷಿಸದೇ ಸಮಯಕ್ಕೆ ಸರಿಯಾಗಿ ವಾಶ್‌ರೂಮ್‌ಗೆ ಹೋಗುವುದು ಮೂತ್ರಾಶಯ ಮತ್ತು ಕಿಡ್ನಿಯ ಆರೋಗ್ಯಕ್ಕೆ ಮುಖ್ಯವಾಗಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *