3 ವಸ್ತುಗಳಿಂದ ಕಾಲು ನೋವು ನಿವಾರಣೆಗೆ ಮನೆಮದ್ದು ರೆಡಿ; ತಯಾರಿಸುವ ವಿಧಾನವು ಸಿಂಪಲ್

ಇತ್ತೀಚೆಗೆ ಪೇನ್ ಕಿಲ್ಲರ್ ಮಾತ್ರೆಗಳನ್ನು ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅಡಿಕ್ಷನ್ ಆಗುವಷ್ಟರ ಮಟ್ಟಿಗೆ ನೋವು ನಿವಾರಕಗಳನ್ನು ಬಳಸುತ್ತಿದ್ದೇವೆ. ಪದೇಪದೆ ಬಳಸುತ್ತಿದ್ದಂತೆ ಡೋಸ್ ಅನ್ನು ಹೆಚ್ಚಿಸಬೇಕಾಗುತ್ತದೆ. ಇದು ದೇಹದಲ್ಲಿನ ಅಂಗಗಳಿಗೆ ಹಾನಿಯುಂಟು ಮಾಡುವ ಸಾಧ್ಯತೆ ಇರುತ್ತದೆ. ಆದ್ದರಿಂದ ನೋವನ್ನು ನಿವಾರಿಸಲು ಕೆಲವು ಮನೆಮದ್ದುಗಳನ್ನು ಅಳವಡಿಸಿಕೊಳ್ಳುವುದು ಉತ್ತಮವಾಗಿದೆ.

ಮನೆಮದ್ದಿನಿಂದ ಯಾವುದ ಸೈಡ್ ಎಫೆಕ್ಟ್ ಆಗುವುದಿಲ್ಲ. ಆದರೆ ಮನೆಮದ್ದು ಸಮಸ್ಯೆಯ ಮೂಲದಲ್ಲಿ ಕೆಲಸ ಮಾಡುತ್ತವೆ. ಕಾಲಿನಲ್ಲಿ ಹಿಮ್ಮಡಿ ಮೇಲಿನಿಂದ ಉಂಟಾಗುವ ನೋವಿಗೆ ಹಲವರಿಗೆ ದಿನನಿತ್ಯ ನರಕ ದರ್ಶನವಾದಂತೆ ಅನುಭವವಾಗುತ್ತದೆ. ಇದಕ್ಕೆ ಹಲವು ಪರಿಹಾರದ ಮಾರ್ಗವನ್ನು ಹುಡುಕುತ್ತಿರುತ್ತಾರೆ. ಅವರಿಗಾಗಿಯೇ ಈ ಸಿಂಪಲ್ ಟಿಪ್ಸ್. ಮಾಡುವ ವಿಧಾನವೂ ಸುಲಭ, ಹಾಗೂ ಉಪಯೋಗಿಸಿದ ಬಳಿಕ ಫಲಿತಾಂಶವನ್ನು ಬಹುಬೇಗನೆ ನೀವೆ ತಿಳಿದುಕೊಳ್ಳುತ್ತೀರಿ. ಮನೆಯಲ್ಲೇ ತಯಾರಿಸಬಹುದಾದ ಮದ್ದಿನ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ಅಡುಗೆಮನೆಯಲ್ಲೇ ಸಿಗುವ ಮೂರು ವಸ್ತುಗಳಿಂದ ಮನೆಮದ್ದು ತಯಾರಿಸಬಹುದು. ಅಜ್ವಾನ್, ಜೀರಿಗೆ, ಸೋಂಪನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಅವುಗಳನ್ನು ಫ್ರೈ ಮಾಡಬೇಕು. ಮತ್ತು ಅದಕ್ಕೆ ಸ್ವಲ್ಪ ಹಸಿರು ಏಲಕ್ಕಿ ಸೇರಿಸಿಬೇಕು. ಬಳಿಕ ಎಲ್ಲಾ ಪದಾರ್ಥಗಳನ್ನು ಪುಡಿ ಮಾಡಬೇಕು. ರಾತ್ರಿ ಮಲಗುವ ಮುನ್ನ ಒಂದು ಚಮಚ ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಸೇವಿಸಬೇಕು. ಇದರಿಂದ ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ. ದೇಹದಲ್ಲಿ ಉಂಟಾಗುವ ನೋವನ್ನು ಕಡಿಮೆ ಮಾಡಿಕೊಳ್ಳಲು ಮಾಡಬಹುದಾದ ಮತ್ತುಷ್ಟು ಮನೆಮದು ಈ ರೀತಿ ಇದೆ. ಶುಂಠಿ ಮತ್ತು ಅರಿಶಿನದಂತಹ ಉರಿಯೂತ ನಿವಾರಕವನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಿ. ಸ್ನಾಯು ಎಳೆತ ಉಂಟಾದರೆ ಆ ಜಾಗಕ್ಕೆ ಉಪ್ಪು ನೀರಿನಿಂದ ತೊಳೆಯಿರಿ. ನೋವಿನಿಂದ ಕ್ರಮೇಣ ರಿಲೀಫ್ ಸಿಗುತ್ತದೆ.

Leave a Reply

Your email address will not be published. Required fields are marked *