ಹೋಟೆಲ್ ಮಾಲೀಕನಿಂದ ಕಾರ್ಮಿಕನ ಹ*.!

ಹೋಟೆಲ್ ಮಾಲೀಕನಿಂದ ಕಾರ್ಮಿಕನ ಹ*.!

ಹಣಕಾಸಿನ ವಿವಾದ, ರೂಫ್ ಟಾಪ್ ಕೆಫೆಯಲ್ಲಿ ನಡಿದ ದೌರ್ಜನ್ಯ.

ಶಿವಮೊಗ್ಗ: ಹಣಕಾಸಿನ ವಿಚಾರಕ್ಕೆ ಹೋಟೆಲ್​ ಮಾಲೀಕನಿಂದಲೇ ಕಾರ್ಮಿಕನ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆಯಲ್ಲಿ ನಡೆದಿದೆ. ಮಾಲೀಕ ಇಮ್ರಾನ್​​ನಿಂದ ಟಿಂಕು ಶರ್ಮಾ(30)ನ ಕೊಲೆ ಮಾಡಲಾಗಿದೆ. ಸದ್ಯ ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಇಮ್ರಾನ್​ನನ್ನು ವಶಕ್ಕೆ ಪಡೆದಿದ್ದಾರೆ.

ನಡೆದಿದ್ದೇನು?

ಸಾಗರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ರೂಫ್ ಟಾಪ್ ಕೆಫೆಯಲ್ಲಿ ಬಿಹಾರ ಮೂಲದ ಟಿಂಕು ಶರ್ಮಾ ಕೆಲಸ ಮಾಡುತ್ತಿದ್ದ. ಹಣಕಾಸಿನ ವಿಚಾರಕ್ಕೆ ಮಾಲೀಕ ಇಮ್ರಾನ್ ಮತ್ತು ಟಿಂಕು ನಡುವೆ ಗಲಾಟೆ ಉಂಟಾಗಿದೆ.

ಗುರುವಾರ ಬೆಳಗ್ಗೆ ಕೂಡ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಹಲ್ಲೆ ನಡೆಸಿ ಟಿಂಕು ಶರ್ಮಾನನ್ನು ಇಮ್ರಾನ್ ಕೊಲೆಗೈದಿದ್ದಾರೆ. ಹೋಂಡಾ ಸಿಟಿ ಕಾರಿನಲ್ಲಿ ಶವ ಪತ್ತೆಯಾಗಿದೆ. ಇಮ್ರಾನ್ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಶಿವಮೊಗ್ಗ ಎಸ್​​ಪಿ ನಿಖಿಲ್ ಪ್ರಾಥಮಿಕ ಮಾಹಿತಿ ನೀಡಿದ್ದಾರೆ.

ತಡರಾತ್ರಿ ಮಲಗಿದ್ದ ವೇಳೆ ಕಾಲಿಗೆ ಹಾವು ಕಡಿದು ಮಹಿಳೆ ಸಾವು

ತಡರಾತ್ರಿ ಮಲಗಿದ್ದ ವೇಳೆ ಕಾಲಿಗೆ ಹಾವು ಕಡಿದು ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ 9ನೇ ಮೈಲಿಕಲ್ ಗ್ರಾಮದಲ್ಲಿ ನಡೆದಿದೆ. ಛತ್ತೀಷ್​ಘಡ ಮೂಲದ ಜಾಲ್​ ಬಾಯಿ ಸಿಧಾರ್(42) ಮೃತ ಕಾರ್ಮಿಕ ಮಹಿಳೆ.

ಕಳೆದ ಕೆಲ ದಿನಗಳಿಂದ ಎಕೆಸಿ ಸಿಮೆಂಟ್​ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜಾಲ್​ ಬಾಯಿ ಕುಟುಂಬ ಕೆಲಸಕ್ಕಿತ್ತು. ಮಲಗಿದ್ದ ವೇಳೆ ತಡರಾತ್ರಿ ಜಾಲ್​ ಬಾಯಿಗೆ ಹಾವು ಕಡಿದಿದೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *