ನೆಲಮಂಗಲದಲ್ಲಿ 10 ಲಕ್ಷ ರೂ ಮೌಲ್ಯದ ಮನೆ ಕಳ್ಳತನ.

ನೆಲಮಂಗಲದಲ್ಲಿ 10 ಲಕ್ಷ ರೂ ಮೌಲ್ಯದ ಮನೆ ಕಳ್ಳತನ.

ಗಂಡ ಖುಷಿಯಿಂದ ಬಂದಾಗ ನಷ್ಟಕ್ಕೆ ಅಡುಗೆ.

ನೆಲಮಂಗಲ ಬೆಂಗಳೂರು ಉತ್ತರ ತಾಲೂಕಿನ ಮಾಚೋಹಳ್ಳಿಯಲ್ಲಿ ಮನೆ ಕಳ್ಳತನವಾಗಿದ್ದು , 5 ಲಕ್ಷ ರೂ ಬೆಲೆ ಬಾಳುವ ಗ್ರಾಂ ಚಿನ್ನ, 5 ಲಕ್ಷ ರೂ ಬೆಲೆ ಬಾಳುವ 2 ಕೆಜಿ ಬೆಳ್ಳಿ ವಸ್ತು ಹಾಗೂ ನಗದು ಸೇರಿದಂತೆ 10 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಖತರ್ನಾಕ್ ಕಳ್ಳರು ದೋಚಿದ್ದಾರೆ. ನವೀನ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಮಾಚೋಹಳ್ಳಿಯಲ್ಲಿ ನವೀನ್ ಎಂಬುವವರು ತಮ್ಮ ಪತ್ನಿ ಹಾಗೂ ತಾಯಿಯೊಂದಿಗೆ ವಾಸವಿದ್ದಾರೆ. ಪತ್ನಿ ಬಾಣಂತಿ ಆಗಿದ್ದರಿಂದ  ಕಳೆದ ಎರಡು ದಿನದ ಹಿಂದೆ ತವರು ಮನೆಗೆ ತೆರಳಿದ್ದರು. ಈ ಮಧ್ಯೆ ಮಗುವಾಗಿದೆ. ಹೀಗಾಗಿ ಹೆಂಡತಿ ಹಾಗೂ ಮಗುವನ್ನ ನೊಡಿ ಬರಲು ನವೀನ್ ತಮ್ಮ ತಾಯಿ ಜೊತೆಗೆ ತೆರಳಿದ್ದಾರೆ.

ಇನ್ನು ಮನೆ ಎದುರಿನ ನಿವಾಸಿ ಸಿಸಿಟಿವಿ ಮುರಿದು ಹೋಗಿರುವುದನ್ನ ಗಮನಿಸಿ ನವೀನ್​ಗೆ ಕರೆ ಮಾಡಿದ್ದಾರೆ. ಈ ವೇಳೆ ವಿಡಿಯೋಕಾಲ್ ಮೂಲಕ ನೋಡಿದಾಗ ಮನೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಇನ್ನು ಘಟನೆ ಸಂಬಂಧ ಅಪರಿಚಿತ ವ್ಯಕ್ತಿಗಳು ಮನೆ ಮುಂದೆ ಓಡಾಡಿರುವ ಪತ್ತೆ ಆಗಿದೆ. ಬೆಳಿಗ್ಗೆ ಮನೆ ಮುಂದೆ ಮೂವರು ಅಪರಿಚಿತ ಓಡಾಡಿದ್ದು, ರಾತ್ರಿ ಕಳ್ಳತನ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಸದ್ಯ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲಿಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *