ʻಗೃಹಲಕ್ಷ್ಮಿʼ ಹಣಕ್ಕಾಗಿ ಕಾಯುತ್ತಿರುವ ʻಯಜಮಾನಿʼಯರೇ ಗಮನಿಸಿ : ಈ ದಿನ ಒಟ್ಟಿಗೆ 4,000 ರೂ. ಜಮಾ!

ಬೆಂಗಳೂರು : ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿರುವ ಮನೆಯ ಯಜಮಾನಿಯರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡಿದ್ದು, ಈ ಆಗಸ್ಟ್ ಮೊದಲ ವಾರವೇ ಜೂನ್, ಜುಲೈ ತಿಂಗಳ ಕಂತಿನ ಹಣ ಒಟ್ಟಿಗೆ ಜಮಾ ಮಾಡಲಿದೆ ಎಂದು ತಿಳಿಸಿದೆ.

ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ. ಇದೀಗ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕೆಲಸ ಮಾಡಲಾಗುತ್ತಿದ್ದು, ಅಂತಿಮ ಹಂತಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಗಸ್ಟ್ ಮೊದಲ ವಾರವೇ ಖಾತೆಗೆ ಹಣ ಮಾಡಲಾಗುತ್ತದೆ ಎನ್ನಲಾಗಿದೆ.

ಇನ್ನೂ ಈ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿದ್ದು, ಗೃಹಲಕ್ಷ್ಮಿ ಹಣ ಮೂರ್ನಾಲ್ಕು ತಿಂಗಳಿನಿಂದ ಬರುತ್ತಿಲ್ಲ ಎನ್ನುವುದು ತಪ್ಪು, ಗೃಹಲಕ್ಷ್ಮಿ ಹಣವನ್ನು ಮೇ ತಿಂಗಳಲ್ಲಿ ಹಾಕಿದ್ದೇವೆ. ಜೂನ್, ಜುಲೈ ತಿಂಗಳ ಗೃಹಲಕ್ಷ್ಮಿ ಹಣ ಹಾಕಲು ತಾಂತ್ರಿಕ ದೋಷವಾಗಿದ್ದು, ಈಗಾಗಲೇ ಡಿಬಿಟಿ ಪುಶ್ ಮಾಡುತ್ತಿದ್ದೇವೆ.

8-10 ದಿನದೊಳಗೆ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಮಾಡಲಾಗುವುದು. ಈ ಯೋಜನೆಯನ್ನು ಮಹಿಳೆಯ ಆರ್ಥಿಕ ಸಬಲೀಕರಣಕ್ಕಾಗಿ ಕೊಡಲಾಗುತ್ತಿದೆ. ಚುನಾವಣೆ ಪೂರ್ಣದಲ್ಲೇ ರಾಜ್ಯದ ಮಹಿಳೆಯರಿಗೆ ಈ ಭರವಸೆ ನೀಡಲಾಗಿತ್ತು. ಹಾಗಾಗಿ ಯಾವುದೇ ಕಾರಣಕ್ಕೂ ಗೃಹ ಲಕ್ಷ್ಮಿ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *