ರಾಮ್ ಪೋತಿನೇನಿ, ಉಪೇಂದ್ರ, ಭಾಗ್ಯಶ್ರೀ ಬೋರ್ಸೆ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕ’ ಇಂದು ಬಿಡುಗಡೆ ಆಗಿದೆ. ಕನ್ನಡದ ಸ್ಟಾರ್ ಹೀರೋ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಾರಣಕ್ಕೆ ಕರ್ನಾಟಕದ ಸಿನಿಮಾ ಪ್ರೇಮಿಗಳಲ್ಲಿಯೂ ಈ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಅದ್ಧೂರಿ ಫೈಟುಗಳು, ಕಿವಿಗಡಚಿಕ್ಕುವ ಹಿನ್ನೆಲೆ ಸಂಗೀತ, ಐಶಾರಾಮಿ ಸೆಟ್ಟುಗಳು, ಐಟಂ ಹಾಡುಗಳೇ ತುಂಬಿರುವ ಈಗಿನ ಸ್ಟಾರ್ ಹೀರೋ, ಪ್ಯಾನ್ ಇಂಡಿಯಾ, ಮಾಸ್ ಮಸಾಲ ಸಿನಿಮಾಗಳ ಕಾಲದಲ್ಲಿ ಕತೆ ಆಧರಿಸಿದ ಕಮರ್ಶಿಯಲ್ ಸಿನಿಮಾ ಆಗಿ ‘ಆಂಧ್ರ ಕಿಂಗ್ ತಾಲೂಕ’ ಗಮನ ಸೆಳೆಯುತ್ತದೆ. ಹಾಗೆ ನೋಡಿದರೆ ರಾಮ್ ಪೋತಿನೇನಿಯ ಈ ಹಿಂದಿನ ಕೆಲ ಸಿನಿಮಾಗಳು ‘ಮಾಸ್ ಮಸಾಲ’ ಸೂತ್ರದಲ್ಲಿಯೇ ಇದ್ದವು, ಆದರೆ ಅವು ಫ್ಲಾಪ್ ಆಗಿದ್ದವು. ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಮೂಲಕ ಸ್ವತಃ ರಾಮ್ ‘ಹೀರೋಗಿರಿ’ ಪ್ರಭಾವಳಿಯಿಂದ ಹೊರಬಂದು ಒಂದು ಅಪ್ಪಟ ಸಿನಿಮಾನಲ್ಲಿ ನಟಿಸಿದ್ದಾರೆ.
For More Updates Join our WhatsApp Group :




