ಪಾತ್ರೆ ಸ್ಪಾಂಜ್ ಎಷ್ಟು ದಿನ ಬಳಸಬೇಕು ಗೊತ್ತಾ..?

ಪಾತ್ರೆ ಸ್ಪಾಂಜ್ ಎಷ್ಟು ದಿನ ಬಳಸಬೇಕು ಗೊತ್ತಾ..?

ಹಳೆಯ ಸ್ಪಾಂಜ್ ಆರೋಗ್ಯಕ್ಕೆ ಅಪಾಯ!

ಪ್ರತಿಯೊಬ್ಬರೂ ಅಡುಗೆ ಮನೆಯ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಾರೆ. ಪಾತ್ರೆ ತೊಳೆಯುವುದರಿಂದ ಹಿಡಿದು ಗ್ಯಾಸ್‌ ಸ್ಟೌವ್‌ ಕ್ಲೀನ್‌ ಮಾಡುವುದರವರೆಗೆ ಪ್ರತಿಯೊಂದರ ಸ್ವಚ್ಛತೆಯ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಆದ್ರೆ ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್‌ಗಳ ಬಗ್ಗೆ ಯಾರೂ ಸಹ ಗಮನಹರಿಸುವುದಿಲ್ಲ. ಒಂದೇ ಸ್ಪಾಂಜ್‌ ಅನ್ನು ತಿಂಗಳಾನುಗಟ್ಟಲೆ ಬಳಸುತ್ತಿರುತ್ತಾರೆ. ಈ ಒಂದು ಸಣ್ಣ ತಪ್ಪು ಸಹ ಕಾಯಿಲೆ ಹರಡಲು ಕಾರಣವಾಗಬಹುದು. ಹಾಗಿದ್ರೆ ಪಾತ್ರೆ ತೊಳೆಯಲು ಹೆಚ್ಚು ಸಮಯ ಒಂದೇ ಸ್ಪಾಂಜ್‌ ಅನ್ನು ಬಳಸುವುದರಿಂದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತದೆ, ಸ್ಪಾಂಜ್‌, ಸ್ಕ್ರಬ್ಬರ್‌ಗಳನ್ನು ಎಷ್ಟು ದಿನಗಳಿಗೊಮ್ಮೆ ಬದಲಾಯಿಸಬೇಕು ಎಂಬುದನ್ನು ತಿಳಿಯಿರಿ.

ಪಾತ್ರೆ ತೊಳೆಯುವ ಸ್ಪಾಂಜ್ಗಳನ್ನು ಸ್ವಚ್ಛವಾಗಿಡಲು ಸುಲಭ ಮಾರ್ಗಗಳು:

  • ಪ್ರತಿ 2-3 ದಿನಗಳಿಗೊಮ್ಮೆ ಸ್ಪಾಂಜ್ ಅನ್ನು ಬೆಚ್ಚಗಿನ ನೀರು ಮತ್ತು ವಿನೆಗರ್‌ನಲ್ಲಿ 5-10 ನಿಮಿಷಗಳ ಕಾಲ ನೆನೆಸಿಡಿ.
  • ಪ್ರತಿ ಬಾರಿ ಪಾತ್ರೆ ತೊಳೆದ ನಂತರ ಬಿಸಿ ನೀರು ಮತ್ತು ಸೋಪಿನಿಂದ ಸ್ಕ್ರಬ್ಬರ್ ಅನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ನಂತರ ಅದನ್ನು ಚೆನ್ನಾಗಿ ಹಿಸುಕಿ ಒಣಗಲು ಬಿಡಿ.
  • ಸ್ಪಾಂಜ್ ಅನ್ನು ಚೆನ್ನಾಗಿ ತೊಳೆದು ಒಣ ಸ್ಥಳದಲ್ಲಿ ಸಂಗ್ರಹಿಸಿ. ಸಿಲಿಕೋನ್ ಬ್ರಷ್‌ಗಳು ಮತ್ತು ಸ್ಟೀಲ್ ಸ್ಕ್ರಬ್ಬರ್‌ಗಳು ಸ್ಪಾಂಜ್‌ಗಳಿಗಿಂತ ಉತ್ತಮ ಆಯ್ಕೆಗಳಾಗಿವೆ. ಇವು ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ಸ್ವಚ್ಛಗೊಳಿಸಲು ಸುಲಭ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *