ಡ್ರ್ಯಾಗನ್ ಫ್ರೂಟ್ ಎಷ್ಟು ತಿನ್ನಬೇಕು?: ಎಷ್ಟು ತಿಂದರೆ ನಿಮ್ಮ ದೇಹಕ್ಕೆ ಒಳ್ಳೆಯದು, ಏನಿದರ ಚಮತ್ಕಾರ?

ಹೈದರಾಬಾದ್​ : ದೇಹವನ್ನು ಆರೋಗ್ಯವಾಗಿಡುವಲ್ಲಿ ಹಣ್ಣುಗಳ ಪಾತ್ರ ಬಹಳ ವಿಶೇಷವಾಗಿದೆ. ನಿಸರ್ಗ ಒದಗಿಸಿದ ಈ ಹಣ್ಣುಗಳನ್ನು ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನೀವು ಪ್ರತಿದಿನ ಕನಿಷ್ಠ 400 ಗ್ರಾಂ ಹಣ್ಣುಗಳನ್ನು ತಿನ್ನಬೇಕು. ಇವುಗಳಲ್ಲಿರುವ ಹೆಚ್ಚಿನ ಪೋಷಕಾಂಶಗಳು ರೋಗಗಳಿಂದ ನಮ್ಮನ್ನು ರಕ್ಷಿಸುತ್ತವೆ. ಸ್ವತಂತ್ರ ರಾಡಿಕಲ್​ಗಳೊಂದಿಗೆ ಹೋರಾಡಿ, ಅವುಗಳು ರೋಗದಿಂದ ತಪ್ಪಿಸುತ್ತವೆ.

ಅದೇನೇ ಇರಲಿ, ಯಾವ ರೀತಿಯ ಹಣ್ಣುಗಳನ್ನು ತಿನ್ನಬೇಕು ಎಂಬ ಬಗ್ಗೆ ಎಲ್ಲರಿಗೂ ಒಂದಿಷ್ಟು ತಿಳಿವಳಿಕೆ ಇರುತ್ತದೆ. ಆದರೆ, ಡ್ರ್ಯಾಗನ್ ಫ್ರೂಟ್ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ. ಈ ಹಣ್ಣು ನಿಜವಾಗಿಯೂ ಒಳ್ಳೆಯದು? ಇದನ್ನು ತಿಂದರೆ ದೇಹದಲ್ಲಿ ಏನಾಗುತ್ತದೆ? ಎಂಬುದರ ಕುರಿತು ವಿವರವಾಗಿ ತಿಳಿಯೋಣ.

ಕೆಲವು ದಿನಗಳಿಂದ ಡ್ರ್ಯಾಗನ್ ಫ್ರೂಟ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಹಿಂದೆ ಆಮದು ಮಾಡಿಕೊಳ್ಳುತ್ತಿದ್ದ ಈ ವಿದೇಶಿ ಹಣ್ಣುಗಳು ಈಗ ನಮ್ಮ ದೇಶದಲ್ಲಿ ಹೆಚ್ಚು ಬೆಳೆಯುತ್ತಿವೆ. ಇದರೊಂದಿಗೆ ಈ ಹಣ್ಣುಗಳು ಇಂದು ಎಲ್ಲ ಪ್ರದೇಶಗಳ ಜನರಿಗೆ ಲಭ್ಯವಿದೆ. ಊರು – ನಗರಗಳಲ್ಲಿ ಗಾಡಿಗಳಲ್ಲಿ ತಂದು ಮಾರುತ್ತಾರೆ. ಹಾಗಾದರೆ ಈ ಹಣ್ಣು ತಿನ್ನಲು ಉತ್ತಮವೇ? ಇದು ನಮ್ಮ ಆರೋಗ್ಯಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತದೆ? ದೇಹದಲ್ಲಿ ಯಾವ ಬದಲಾವಣೆಗಳು ತರುತ್ತದೆ ಎಂಬುದರ ಕುರಿತು ಅರಿಯೋಣ.

ತಜ್ಞರು ಹೇಳುವಂತೆ ಡ್ರ್ಯಾಗನ್ ಫ್ರೂಟ್​ನಲ್ಲಿ ಹಲವು ಅದ್ಭುತ ಪೋಷಕಾಂಶಗಳಿವೆ. ಮಾನವನ ಜೀರ್ಣಾಂಗ ವ್ಯವಸ್ಥೆಯ ಸರಿಯಾದ ಕಾರ್ಯನಿರ್ವಹಣೆಗೆ ಫೈಬರ್ ಅತ್ಯಗತ್ಯ. ಇದು ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ತಲುಪದಿದ್ದರೆ ಮಲಬದ್ಧತೆಯಂತಹ ಗಂಭೀರ ಸಮಸ್ಯೆ ಉಂಟಾಗುತ್ತದೆ.

ಇದು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಈ ಫೈಬರ್ ಡ್ರ್ಯಾಗನ್ ಹಣ್ಣಿನಲ್ಲಿ ಹೇರಳವಾಗಿದೆ. ಇದಲ್ಲದೇ ಕಬ್ಬಿಣ, ಸತು, ಪ್ರೋಟೀನ್, ರಂಜಕ, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಈ ಹಣ್ಣಿನಲ್ಲಿ ಹೇರಳವಾಗಿವೆ. ಆಲಸ್ಯ ಇರುವವರು, ತಕ್ಷಣವೇ ಆ ಪರಿಸ್ಥಿತಿಯಿಂದ ಮುಕ್ತಿ ಹೊಂದಲು ಡ್ರ್ಯಾಗನ್ ಫ್ರೂಟ್​ನ ಕೆಲವು ತುಂಡುಗಳನ್ನು ಸೇವಿಸಿ ಎನ್ನುತ್ತಾರೆ ತಜ್ಞರು.

ಡ್ರ್ಯಾಗನ್ ಹಣ್ಣು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ಅಧ್ಯಯನವೊಂದು ಹೇಳಿದೆ. ಈ ಅಧ್ಯಯನವನ್ನು “ಫುಡ್ & ಫಂಕ್ಷನಲ್ ಫುಡ್ಸ್” ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಈ ಸಂಶೋಧನೆಯಲ್ಲಿ ವೈದ್ಯರಾದ ಡಬ್ಲ್ಯೂ. ಝೌ, Z. Y. ಲಿನ್ ಭಾಗವಹಿಸಿದ್ದರು.

ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ : ಈ ಡ್ರ್ಯಾಗನ್ ಹಣ್ಣಿನಲ್ಲಿ “ಪಿಟಯಾ” ಎಂಬ ಪೋಷಕಾಂಶವಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಹಳಷ್ಟು ಹೆಚ್ಚಿಸುತ್ತದೆ. ಮತ್ತು ಇದರಲ್ಲಿರುವ ಆಂಟಿ- ಆಕ್ಸಿಡೆಂಟ್‌ಗಳು ದೇಹಕ್ಕೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್‌ಗಳೊಂದಿಗೆ ತೀವ್ರವಾಗಿ ಹೋರಾಡುತ್ತವೆ. ಅವುಗಳನ್ನು ನಾಶಪಡಿಸುವ ಮೂಲಕ ಕ್ಯಾನ್ಸರ್ ಅಪಾಯವನ್ನು ತಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಅಲ್ಲದೇ, ಈ ಹಣ್ಣಿನಲ್ಲಿರುವ ಫ್ಲೇವನಾಯ್ಡ್‌ಗಳು, ಆಸ್ಕೋರ್ಬಿಕ್ ಆಮ್ಲ, ಫೀನಾಲಿಕ್ ಆಮ್ಲಗಳು ಸಕ್ಕರೆಯನ್ನು ನಿಯಂತ್ರಿಸುತ್ತವೆ.

ಈ ಡ್ರ್ಯಾಗನ್ ಹಣ್ಣಿನ ಬೀಜಗಳಲ್ಲಿ ಒಮೆಗಾ – 3 ಕೊಬ್ಬಿನಾಮ್ಲ ಸಮೃದ್ಧವಾಗಿವೆ. ಅವು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತವೆ. ಇದರಲ್ಲಿರುವ ಮೆಗ್ನೀಸಿಯಮ್ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಇದರಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ನಾರಿನಂಶ ಇರುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸರಾಗವಾಗಿ ಕೆಲಸ ಮಾಡುತ್ತದೆ ಮತ್ತು ಇದು ತೂಕ ನಷ್ಟಕ್ಕೂ ಕಾರಣವಾಗುತ್ತದೆ. ಮೇಲಾಗಿ ರಕ್ತ ಹೀನತೆಯಿಂದ ಬಳಲುತ್ತಿರುವವರಿಗೆ ಆ ಸ್ಥಿತಿಯನ್ನು ಹೋಗಲಾಡಿಸಲು ಇದು ತುಂಬಾ ಉಪಯುಕ್ತ ಎನ್ನುತ್ತಾರೆ ತಜ್ಞರು.

Leave a Reply

Your email address will not be published. Required fields are marked *