ಬೆಂಗಳೂರು: 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಹಾದಿ ಬೀದಿಯಲ್ಲಿ ಸಿಕ್ಕ ಪೆನ್‌ಡ್ರೈವ್‌ಗಳಲ್ಲಿ ಪ್ರಜ್ವಲ್‌ರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ಭಾರೀ ಸದ್ದು ಮಾಡಿದ್ದು.
ಆದ್ರೆ ಯಾವುದೇ ಒಂದು ವಿಡಿಯೋದಲ್ಲೂ ಪ್ರಜ್ವಲ್ ರೇವಣ್ಣನ ಮುಖ ಕಾಣಿಸಿರಿಲಿಲ್ಲ. ಆದರೀಗ ಅದೇ ವಿಡಿಯೋ ಮತ್ತು ಅಶ್ಲೀಲ ಫೋಟೋಗಳನ್ನಾಧರಿಸಿ ಕೋರ್ಟ್ ಜೀವಾವಧಿ ಶಿಕ್ಷೆಗೆ ವಿಧಿಸಿರೋದು ಕುತೂಹಲ.
ಮನೆಗೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣ ಸಂಬಂಧ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಭಾರೀ ದಂಡವನ್ನೂ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಆದ್ರೆ ವಿಡಿಯೋದಲ್ಲಿ ಎಲ್ಲಿಯೂ ಪ್ರಜ್ವಲ್ ಅವರ ಮುಖವೇ ಕಾಣಿಸಿರಿಲ್ಲ ಹೀಗಿದ್ರೂ ಪ್ರಕರಣ ಭೇದಿಸಿದ್ದು ಹೇಗೆ ಅನ್ನೋ ಕೌತುಕಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ವಿಡಿಯೋ ಬೆನ್ನತ್ತಿ ಹೊರಟಾಗ ಸಿಕ್ಕ ಮಾಹಿತಿ ತುಂಬಾ ರೋಚಕವಾಗಿದೆ.
ಆರೋಪಿ ಪತ್ತೆ ಸಾಧ್ಯವಾಗಿದ್ದು ‘ಅನಾಟೋಮಿಕಲ್ ಕಾಂಪಾರಿಷನ್ ಆಫ್ ಜನೆಟಲ್ ಫೀಚರ್ಸ್’ (Anatomical Comparison of Genital Features) ಎನ್ನುವ ಹೊಸ ತಂತ್ರಜ್ಞಾನ. ಈ ತಂತ್ರಜ್ಞಾನ ಟರ್ಕಿ ಹಾಗೂ ಜಪಾನ್‌ನಲ್ಲಿದ್ದು ಇದೇ ಮೊದಲ ಬಾರಿಗೆ ಭಾರತದಲ್ಲಿ ಬಳಸಲಾಗಿದೆ. ಜನನೇಂದ್ರಿಯದ ಫಿಸಿಕಲ್ ಅಪೆಯರೆನ್ಸ್ ಮೂಲಕ ಪತ್ತೆ ಹಚ್ಚುವ ತಂತ್ರಜ್ಞಾನ ಇದಾಗಿದೆ. ಈ ತಂತ್ರಜ್ಞಾನದಿಂದ ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಮನುಷ್ಯರ ಜನನೇಂದ್ರಿಯಗಳಲ್ಲಿ ಆಗುವ ಮಾರ್ಪಾಡುಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.
ವ್ಯಕ್ತಿಯಿಂದ ವ್ಯಕ್ತಿಗೆ ಜನನೇಂದ್ರಿಯದ ಬದಲಾವಣೆ ಇರೋದ್ರಿಂದ ಈ ತಂತ್ರಜ್ಞಾನ ಬಳಕೆ ಮಾಡಲಾಗಿದೆ. ಫಿಂಗರ್ ಫ್ರಿಂಟ್ ಮಾದರಿಯಲ್ಲಿಯೇ ಖಾಸಗಿ ಅಂಗದ ಗುರುತು ಪತ್ತೆಯನ್ನು ಇದರಲ್ಲಿ ಮಾಡಲಾಗುತ್ತದೆ. ವಿಡಿಯೋದಲ್ಲಿ ಸ್ಕ್ರೀನ್ ಶಾಟ್ ತೆಗೆದು ಹೈ ರೆಸ್ಯೂಲೆಷನ್‌ಗೆ ಕನ್ವರ್ಟ್ ಮಾಡಲಾಗುತ್ತೆ. ನಂತರ ನಂತರ ವ್ಯಕ್ತಿಯ ಖಾಸಗಿ ಅಂಗ, ಸೊಂಟ ಹಾಗೂ ಆತನ ಕೈ ಫೋಟೋ ತೆಗೆದುಕೊಳ್ಳಲಾಗುತ್ತೆ.
ಇದಕ್ಕೆ ಅದರದ್ದೇ ಆದ ಮೆಡಿಕಲ್ ಪ್ರೊಸಿಜರ್ ಪ್ರಕಾರವೇ ಫೋಟೋ ತೆಗೆದುಕೊಳ್ಳಬೇಕಾಗುತ್ತದೆ. ನಂತರ ಚರ್ಮ ವೈದ್ಯರು, ಮೂತ್ರಶಾಸ್ತ್ರ ತಜ್ಞರು ಪರಿಶೀಲನೆ ಮಾಡ್ತಾರೆ. ಎರಡು ಫೋಟೋದಲ್ಲಿ ಹೋಲಿಕೆ ಆದರೆ ವಿಡಿಯೋದಲ್ಲಿ ಇರೋದು ಅದೇ ವ್ಯಕ್ತಿ ಅಂತ ಖಚಿತಪಡಿಸುತ್ತಾರೆ. ಯಾವುದರೂ ಒಂದು ಭಾಗ ಹೋಲಿಕೆ ಆದರು ಆರೋಪಿ ಪತ್ತೆಗೆ ಸಹಾಕರಿಯಾಗುತ್ತೆ.
ಹಾಗೆಯೇ ಪ್ರಜ್ವಲ್ ರೇವಣ್ಣ ಕೇಸ್‌ನಲ್ಲೂ ಇದೇ ರೀತಿ ಪ್ರಕ್ರಿಯೆ ನಡೆದಿದೆ. ಇದು ದೇಶದಲ್ಲೇ ಮೊದಲ ಪ್ರಯೋಗ ಎಂದು ಹೇಳಲಾಗುತ್ತಿದೆ