ಒಂದೇ ಕಡೆ 2 ಡೆಂಗ್ಯೂ ಕೇಸ್​ ದಾಖಲಾದರೆ ಆ ಪ್ರದೇಶ ಹಾಟ್​ ಸ್ಪಾಟ್ ಆಗಿ ಘೋಷಣೆ

ಬೆಂಗಳೂರು : ರಾಜ್ಯಾದ್ಯಂತ ಈ ಬಾರಿ ಮಳೆ ಹೆಚ್ಚಾಗುತ್ತಿದೆ. ಹೀಗಾಗಿ ಅಲ್ಲಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳು ಹೆಚ್ಚಾಗಿವೆ. ಇದರಿಂದ ಡೆಂಗ್ಯೂ ಪ್ರಕರಣ ದಿನೇ ದಿನೆ ರಾಜ್ಯದಲ್ಲಿ ಡೆಂಗ್ಯೂ ಜ್ವರ ಪ್ರಕರಣ ಹೆಚ್ಚಾಗುತ್ತಿವೆ. ಈ ಕುರಿತು ವಿಧಾನ ಪರಿಷತ್​ನಲ್ಲಿ ಇಂದು ಪ್ರತಿಪಕ್ಷದ ಸದಸ್ಯರು ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ. ಇದಕ್ಕೆ ಆರೋಗ್ಯ ಸಚಿವರು ಉತ್ತರ ನೀಡಿದ್ದಾರೆ.

ರೋಗ ಉಲ್ಬಣವಾಗದಂತೆ ಸೂಕ್ತ ಮುಂಜಾಗ್ರತ ಕ್ರಮ ಕೈಗೊಳ್ಳಲಾಗುತ್ತಿದೆ. ಒಂದೇ ಪ್ರದೇಶದಲ್ಲಿ ಎರಡು ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾದರೆ ಆ ಪ್ರದೇಶವನ್ನ‌ ಹಾಟ್ ​ಸ್ಪಾಟ್ ಎಂದು ಘೋಷಿಸಿ ಫಿವರ್ ಕ್ಲಿನಿಕ್ ತೆರೆಯಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸದನಕ್ಕೆ ಮಾಹಿತಿ ನೀಡಿದರು.

ರಾಜ್ಯದೆಲ್ಲೆಡೆ ಡೆಂಗ್ಯೂ ಕಾಯಿಲೆ ವ್ಯಾಪಕವಾಗಿ ಹರಡುತ್ತಿದ್ದು, ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿಯಮ 330ರ ಮೇರೆಗೆ ಬಿಜೆಪಿ ಸದಸ್ಯರಾದ ಡಾ. ಧನಂಜಯ ಸರ್ಜಿ, ಎಸ್. ವಿ‌‌ ಸಂಕನೂರು, ಕೆ. ಎ ತಿಪ್ಪೇಸ್ವಾಮಿ, ಶಶೀಲ್ ಜಿ. ನಮೋಶಿ, ಗೋವಿಂದರಾಜು ಹಾಗೂ ತಳವಾರ್ ಸಾಬಣ್ಣ ಅವರು ಕೇಳಿದ‌ ಪ್ರಶ್ನೆಗಳಿಗೆ ಉತ್ತರಿಸಿದರು.

ಕರ್ನಾಟಕ, ತಮಿಳುನಾಡು ಹಾಗೂ‌ ಕೇರಳದಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ರಾಜ್ಯದಲ್ಲಿ ಇದುವರೆಗೆ 16,632 ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ 3400 ಪ್ರಕರಣಗಳು ಸಕ್ರಿಯವಾಗಿವೆ. ಆಸ್ಪತ್ರೆಗಳಲ್ಲಿ 5 ಸಾವಿರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, 13 ಮಂದಿ ಐಸಿಯುನಲ್ಲಿದ್ದಾರೆ‌. 10 ಮಂದಿ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *