ಈ ದಿನಾಂಕದೊಳಗೆ ಆಧಾರ್ ಅಪ್ಡೇಟ್ ಮಾಡದಿದ್ದರೆ ಬೀಳುತ್ತೆ ದಂಡ..!!

ಈ ಮೊದಲು ಆಧಾರ್​ಗೆ ಸಂಬಂಧಿತ ಮಾಹಿತಿ ಅಪ್​ಲೋಡ್​ ಮಾಡಿಕೊಳ್ಳಲು ಜೂನ್ 14 ರವರೆಗೆ ಆನ್​ಲೈನ್​ನಲ್ಲಿ ಉಚಿತವಾಗಿ ಅವಕಾಶ ಕಲ್ಪಿಸಲಾಗಿತ್ತು, ಈಗ ಮತ್ತೆ ದಿನಾಂಕವನ್ನು ಮುಂದುಡಲಾಗಿದ್ದು,ಸೆಪ್ಟೆಂಬರ್ 14 ಕೊನೆಯ ದಿನಾಂಕ. ಅರ್ಥಾತ್, ಆನ್​ಲೈನ್​ನಲ್ಲಿ ಉಚಿತವಾಗಿ ಆಧಾರ್​ ಅಪ್​ಡೇಟ್​ ಮಾಡಿಕೊಳ್ಳಲು ಕೊನೆಯ ಅವಕಾಶ.

ಆಧಾರ್

ನೀವು ಆಧಾರ್​ ಸಂಖ್ಯೆ ಪಡೆದು ಹತ್ತು ವರ್ಷಗಳಾಗಿದ್ದಲ್ಲಿ ಹಾಗೂ ಇದುವರೆಗೂ ಯಾವುದೇ ಮಾಹಿತಿ ಅಪ್​ಡೇಟ್ ಮಾಡಿಕೊಂಡಿರದಿದ್ದಲ್ಲಿ ಈ ಅವಕಾಶವನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಅಂದಹಾಗೆ ಇದು ಡೆಮೊಗ್ರಫಿಕ್​ ಡೇಟಾಗಷ್ಟೇ ಸೀಮಿತವಾಗಿರಲಿದೆ ಎಂದು ಯುಐಡಿಎಐ ತಿಳಿಸಿದೆ.

ಈ ಅಪ್​ಡೇಟ್​ಗೆ ಆಧಾರ್​ ಗ್ರಾಹಕ ಸೇವಾ ಕೇಂದ್ರದಲ್ಲಿ 50 ರೂ. ಶುಲ್ಕ ವಿಧಿಸಲಾಗುತ್ತಿದೆ. ಆದರೆ ಆನ್​ಲೈನ್​ನಲ್ಲಿ ಉಚಿತವಾಗಿ ಮಾಡಿಕೊಳ್ಳಲು ಅವಕಾಶವಿದ್ದು,ಹತ್ತು ವರ್ಷಗಳ ಹಿಂದೆ ಆಧಾರ್​ ಪಡೆದವರು ತಮ್ಮ ಇತ್ತೀಚಿಗಿನ ಗುರುತು, ವಾಸದ ವಿಳಾಸ ಇತ್ಯಾದಿ ಮಾಹಿತಿಗಳನ್ನು ಸೆಪ್ಟೆಂಬರ್ 14ರ ಒಳಗೆ ಉಚಿತವಾಗಿ ಅಪ್​​ಡೇಟ್ ಮಾಡಿಕೊಳ್ಳಬಹುದು.

ಅಲ್ಲದೆ ಡೆಮೊಗ್ರಫಿಕ್ ಡೇಟಾ ಅಂದರೆ, ಹೆಸರು, ವಿಳಾಸ, ಜನ್ಮದಿನಾಂಕ, ಲಿಂಗ, ಮೊಬೈಲ್​ಫೋನ್​ ನಂಬರ್, ಇ-ಮೇಲ್ ಐಡಿ ವಿವರಗಳನ್ನು ಅಪ್​ಡೇಟ್ ಮಾಡಿಕೊಳ್ಳಬಹುದು. Free Aadhaar update-ಉಚಿತವಾಗಿ ಆಧಾರ್ ಅಪ್ಡೇಟ್ ಮಾಡುವ ಡೈರೆಕ್ಟ್ ಲಿಂಕ್: https://myaadhaar.uidai.gov.in/.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *