ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಟ್ರೇಲರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಟ್ರೇಲರ್ ಲಾಂಚ್ ಈವೆಂಟ್‌ಗೆ ನಟ ಶಿವರಾಜ್ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಬಾಲಯ್ಯ ದ್ವಿಪಾತ್ರದಲ್ಲಿ ಮ್ಯಾಸ್ ರೋರ್
ಮಾಸ್ ಡೈರೆಕ್ಟರ್ ಬೋಯಪತಿ ಶ್ರೀನು ನಿರ್ದೇಶನದ ಈ ಹೈ-ವೋಲ್ಟೇಜ್ ಸೀಕ್ವೆಲ್‌ನಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ಅಬ್ಬರಿಸಿದ್ದಾರೆ.
ಟ್ರೇಲರ್ “ಕಷ್ಟ ಬಂದ್ರೆ ದೇವರು ಬರ್ತಾನೆ ಅಂತ ನಂಬಿರೋ ಜನಕ್ಕೆ, ಕಷ್ಟ ಬಂದ್ರೂ ದೇವರು ಬರಲ್ಲ ಅಂರ ನಂಬಿಸ್ಬೇಕು” ಎನ್ನುವ ಡೈಲಾಗ್‌ನೊಂದಿಗೆ ಪ್ರಾರಂಭವಾಗಿ ಮ್ಯಾಸ್ ವೈಬ್ಸ್‌ನ್ನು ರಚಿಸಿದೆ.ಸಿನಿಮಾ ಡಿಸೆಂಬರ್ 5ರಂದು ವಿಶ್ವವ್ಯಾಪಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಮ್ಯಾಸ್ ಡೈಲಾಗ್‌ಗಳಿಗೆ ಜೋಷ್ ರೆಸ್ಪಾನ್ಸ್
ಬಾಲಯ್ಯರ ಗಂಭೀರ ನೋಟ, ಆಕ್ಷನ್ ಮತ್ತು ವಿನಾಶಕಾರಿ ಆಘಾತ ತುಂಬಿದ ಡೈಲಾಗ್‌ಗಳು ಟ್ರೇಲರ್‌ನ ಮುಖ್ಯ ಆಕರ್ಷಣೆ. ವಿಶೇಷವಾಗಿ —
“ದೇಶದ ತಂಟೆಗೆ ಬಂದ್ರೆ ನೀವು ಶಿಕ್ಷಿಸ್ತೀರಾ… ದೈವದ ತಂಟೆಗೆ ಬಂದ್ರೆ ನಾವು ಕತ್ತರಿಸ್ತೀವಿ… ನಿಮ್ಮ ಭಾಷೆಯಲ್ಲಿ ಹೇಳ್ಬೇಕು ಅಂದ್ರೆ ಸರ್ಜಿಕಲ್ ಸ್ಟ್ರೈಕ್!”ಎನ್ನುವ ಡೈಲಾಗ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ.
ನಟ–ತಂತ್ರಜ್ಞರ ತಂಡ
- ಬಾಲಕೃಷ್ಣ – ದ್ವಿಪಾತ್ರ
- ಆದಿ ಪಿನಿಸೆಟ್ಟಿ – ಪವರ್ ಪಾತ್ರ
- ಸಂಯುಕ್ತಾ ಮೆನನ್ – ನಾಯಕಿ
- ಹರ್ಷಾಲಿ ಮಲ್ಹೋತ್ರಾ (ಬಜರಂಗಿ ಭೈಜಾನ್) – ಪ್ರಮುಖ ಪಾತ್ರ
- ನಿರ್ಮಾಣ: ರಾಮ್ ಅಚಂತ, ಗೋಪಿ ಅಚಂತ ಮತ್ತು ತೇಜಸ್ವಿನಿ ಬಾಲಕೃಷ್ಣ
ಚಿತ್ರವನ್ನು ‘Akhanda 2 Surgical Strike’ ಮತ್ತು ‘Akhanda 2 Thandavam’ ಟ್ಯಾಗ್ಲೈನ್‌ಗಳೊಂದಿಗೆ ಪ್ರಚಾರ ಮಾಡಲಾಗುತ್ತಿದೆ.
3Dಯಲ್ಲೂ ಬಿಡುಗಡೆಯಾಗುವ ಅಖಂಡ 2
ಚಿತ್ರವು 2D ಮಾತ್ರವಲ್ಲದೆ 3Dಯಲ್ಲಿಯೂ ಪ್ರೇಕ್ಷಕರ ಮುಂದೆ ಬರಲಿದೆ. ಕನ್ನಡದಲ್ಲಿ ಡಬ್ ಆಗಿ ಬಿಡುಗಡೆಯಾಗಲಿರುವುದರಿಂದ ಕನ್ನಡ ಟ್ರೇಲರ್ ಕೂಡ ಈಗಾಗಲೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಹಾಡುಗಳೂ ಈಗಾಗಲೇ ವೈರಲ್ ಆಗುತ್ತಿವೆ.
‘ಅಖಂಡ’ ಇಂಡಸ್ಟ್ರಿ ಹಿಟ್ ನಂತರ, ಈ ಸೀಕ್ವೆಲ್ ಬಾಕ್ಸ್ ಆಫೀಸ್ನಲ್ಲಿ ಎಷ್ಟು ದೊಡ್ಡ ಸ್ಫೋಟ ಮಾಡುತ್ತದೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
For More Updates Join our WhatsApp Group :




