ಮಂಡ್ಯ: ಪಕ್ಷದ ಸಣ್ಣ ಕಾರ್ಯಕರ್ತನಿಗೂ ಅವಕಾಶ ಕೊಟ್ಟು ಎನ್ಡಿಎಯಿಂದ ಅಭ್ಯರ್ಥಿ ಮಾಡಿದರೂ ಕೂಡ ನಮ್ಮ ಸಹಕಾರ ಸದಾಕಾಲ ಪಕ್ಷದ ಪರವಾಗಿ, ಕ್ಷೇತ್ರದ ಜನತೆಯ ಅಭಿವೃದ್ಧಿಯ ಪರವಾಗಿ ಇರುತ್ತದೆ” ಎಂದು ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಿಸಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಮಂಡ್ಯದಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ ಅವರು, “ಚನ್ನಪಟ್ಟಣ ಉಪಚುನಾವಣೆ ವಿಚಾರ ಹಲವಾರು ತಿಂಗಳಿನಿಂದ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಾಳೆ (ಶನಿವಾರ) ಶಿಗ್ಗಾವಿ ಮತ್ತು ಸಂಡೂರಿಗೆ ಕೂಡ ಜನತಾದಳ ಪಕ್ಷ ಹಾಗೂ ಬಿಜೆಪಿ ಸಮನ್ವಯತೆ ಕಾಪಾಡುವ ಹಿತದೃಷ್ಟಿಯಿಂದ ಭೇಟಿ ಕೊಡುತ್ತಿದ್ದೇನೆ. ಈಗಾಗಲೇ ಪಕ್ಷದ ನಮ್ಮ ನಾಯಕರು ನಮ್ಮ ಕಾರ್ಯಕರ್ತರಿಗೆ ಒಂದು ಸಂದೇಶವನ್ನು ಕೊಡಲು ನನ್ನ ಗಮನಕ್ಕೆ ತಂದಿದ್ದಾರೆ
ಈ ವೇಳೆ ಮಾಧ್ಯಮ ಮಿತ್ರರು ‘ಅರವಿಂದ್ ಬೆಲ್ಲದ್ ಅವರು ಸಿ.ಪಿ. ಯೋಗೇಶ್ವರ್ ಮಾತ್ರ ಮೈತ್ರಿ ಪಕ್ಷದಿಂದ ಚುನಾವಣೆಗೆ ನಿಂತರೆ ಗೆಲ್ಲಲು ಸಾಧ್ಯ’ ಎಂದು ಹೇಳಿದ್ದಾರೆ ಎಂದು ತಿಳಿಸಿದಾಗ ನಿಖಿಲ್, “ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರಿಗೆ ಅಧಿಕಾರವಿದೆ. ಆದರೆ ಅಂತಿಮವಾಗಿ ತೀರ್ಮಾನಗಳು, ನಿರ್ಣಯಗಳು ಜೆಡಿಎಸ್ ಮತ್ತು ಬಿಜೆಪಿಯ ಹಿರಿಯ ನಾಯಕರ ಸಮ್ಮುಖದಲ್ಲಿ ಆಗುತ್ತದೆ” ಎಂದು ಸ್ಪಷ್ಟಪಡಿಸಿದ್ದಾರೆ.