ಗೃಹಿಣಿಯರು ಅಡುಗೆ ಮನೆಯಲ್ಲಿ ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಅಡುಗೆ ಮನೆಯಲ್ಲಿ ಎಲ್ಲಾ ವಸ್ತುಗಳು ಸರಿ ಇದ್ದರೆ ಮಾತ್ರ ಅವರ ಕೆಲಸ ಮುಗಿಯೋದು. ಹಾಗೆ ಎಲ್ಲಾ ವಸ್ತುಗಳನ್ನು ಸಹ ಅವರು ಅತ್ಯಂತ ಜೋಪಾನವಾಗಿಡುತ್ತಾರೆ. ಎಲ್ಲಾ ವಸ್ತುಗಳನ್ನು ಅವರು ಅತ್ಯಂತ ನಾಜೂಕಾಗಿ ಬಳಸಿಡುತ್ತಾರೆ.
ಅದು ಗ್ಯಾಸ್, ಮಿಕ್ಸಿ, ಪಾತ್ರೆ ಯಾವುದೇ ಆಗಿರಲಿ ಅವು ಬಾಳಿಕೆ ಬರುವಂತೆ ಇಡುವುದು ಅವರ ಕೆಲಸವಾಗಿರುತ್ತೆ.
ಇನ್ನು ಅಡುಗೆ ಮನೆಯಲ್ಲಿ ಕೆಲವೊಂದು ವಸ್ತುಗಳು ಬಹಳ ಮುಖ್ಯವಾಗುತ್ತೆ, ಈ ವಸ್ತುಗಳು ಇಲ್ಲದಿದ್ದರೆ ಆ ದಿನ ಗೃಹಿಣಿಯರಿಗೆ ತಲೆನೋವು ಎದುರಾಗುತ್ತೆ. ಏಕಾಏಕಿ ಗ್ಯಾಸ್ ಖಾಲಿಯಾದರೆ, ಮಿಕ್ಸಿ ಹಾಳಾದರೆ ಹೀಗೆ ಕೆಲವೊಂದು ವಿಚಾರ ಗೃಹಿಣಿಯರಿಗೆ ಮುಖ್ಯವಾಗುತ್ತೆ. ಇದರ ಜೊತೆ ಕೆಲವೊಮ್ಮೆ ಗ್ಯಾಸ್ ಹಚ್ಚಲು ಬಳಸುವ ಲೈಟರ್ ಸಹ ಕೈ ಕೊಡುತ್ತೆ, ಆವಾಗಲು ಗೃಹಿಣಿಯರಿಗೆ ಸಮಸ್ಯೆಯಾಗುತ್ತೆ.
ಈ ಲೈಟರ್ಗಳು ಹೊಸದಾಗಿದ್ದಾಗಲೂ ಸರಿಯಾಗಿ ಹೊತ್ತಿಕೊಳ್ಳುವುದಿಲ್ಲ. ಕೆಲವೊಮ್ಮೆ ಹತ್ತು ಹಲವು ಬಾರಿ ಟ್ರೈ ಮಾಡಿದ ಬಳಿಕ ಒಮ್ಮೆ ಕಿಡಿ ಹೊತ್ತಿಕೊಳ್ಳುತ್ತದೆ. ಇದೊಂದು ಸಮಸ್ಯೆಯಾಗಿ ಕಾಡುತ್ತದೆ. ಆದ್ರೆ ಪ್ರತಿ ಬಾರಿ ನಿಮಗಿದು ಸಮಸ್ಯೆ ನೀಡುತ್ತಿದ್ದರೆ ಅದನ್ನು ಬದಲಿಸುವ ಅಗತ್ಯವಿಲ್ಲ. ಬದಲಿಗೆ ಈ ಟ್ರಿಕ್ಸ್ ಮಾಡಿದರೆ ಲೈಟರ್ ಸರಿಯಾಗುತ್ತೆ.
ಲೈಟರ್ ಹೊತ್ತಿಕೊಳ್ಳುತ್ತಿಲ್ಲ ಎಂದರೆ ನಾವು ಹೊಸದನ್ನು ಖರೀದಿಸುಲು ಮುಂದಾಗುತ್ತೇವೆ. ಈಗ ಕೆಲವು ಅಡುಗೆ ಮನೆಯ ವಸ್ತುಗಳ ಖರೀದಿಸಿದರೆ ಲೈಟರ್ ಉಚಿತವಾಗಿ ಸಿಗುತ್ತೆ. ಆದ್ರೆ ನಾವಿಂದು ಲೈಟರ್ ಹಾಳಾಗದಂತೆ ಹೇಗೆ ಇಟ್ಟುಕೊಳ್ಳಬೇಕು ಎನ್ನುವುದನ್ನು ಹೇಳುತ್ತೇವೆ ನೋಡಿ.
ಲೈಟರ್ ಹತ್ತದಿದ್ದರೆ ಪೆಟ್ರೋಲ್ ಬಳಸಿ
ಲೈಟರ್ ಒಂದು ಟ್ರಿಗರ್ಗೆ ಹೊತ್ತಿಕೊಳ್ಳುತ್ತಿಲ್ಲ ಎಂದಾದರೆ ಒಂದು ಮುಚ್ಚಳದಲ್ಲಿ ಪೆಟ್ರೋಲ್ ಅಥವಾ ಸೀಮೆ ಎಣ್ಣೆ ತೆಗೆದುಕೊಂಡು ಅದನ್ನು ಲೈಟರ್ ಒಳಗೆ ಹಾಕಿ ಯಾವುದಾದರು ಕಡ್ಡಿ ಮೂಲಕ ಒಳಗೆ ಕ್ಲೀನ್ ಮಾಡಲು ಪ್ರಯತ್ನಿಸಿ ಬಳಿಕ ಬಟ್ಟೆಯಿಂದ ಚೆನ್ನಾಗಿ ಒರೆಸಿ ಟ್ರಿಗರ್ ಮಾಡಿ. ಇದರಿಂದ ಹೊತ್ತಿಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತದೆ.
ಲೈಟರ್ ಬಿಸಿ ಮಾಡಿ
ಲೈಟರ್ ಆಗಾಗ ಕೈಕೊಡುತ್ತಿದ್ದರೆ ಅದನ್ನು ಗ್ಯಾಸ್ ಮುಂದೆ ಹಿಡಿದು ಸ್ವಲ್ಪ ಬಿಸಿ ಮಾಡಿ. ಇದರಿಂದ ಒಳಗೆ ನೀರು, ಕಸ ಸೇರಿದ್ದರೆ ಬಿಸಿಯ ಶಾಖದಿಂದ ಅದು ನಿವಾರಣೆಯಾಗಬಹುದು. ಇಲ್ಲದಿದ್ದರೆ ಕೆಲವ ಹೊತ್ತು ಬಿಸಿಲಿನಲ್ಲಿ ಇಟ್ಟು ನೋಡಿ ಇದರು ಮತ್ತೆ ಸರಿಯಾಗಬಹುದು.
ಲೈಟರ್ ಬಿಚ್ಚಿ ಸ್ವಚ್ಛಗೊಳಿಸಿ
ಲೈಟರ್ ಹೊತ್ತಿಕೊಳ್ಳದೆ ಇರಲು ಕಾರಣ ಅದರಲ್ಲಿ ಕಸ ಸೇರುವುದು, ಅಡುಗೆ ಮನೆಯಲ್ಲಿ ಜಿಡ್ಡು ಕಸ ಇದರೊಳಗೆ ಸೇರಿದರೆ ಸರಿಯಾಗಿ ಕೆಲಸ ಮಾಡುವುದಿಲ್ಲ. ಹೀಗಾಗಿ ನಿಧಾನವಾಗಿ ಅದನ್ನು ತೆಗೆಯಲು ಪ್ರಯತ್ನಿಸಿ. ಅದರೊಳಗೆ ಒಂದು ಸ್ಪ್ರಿಂಗ್ ಇರಲಿದೆ ಅದನ್ನು ಹೇಗೆ ಹಾಕಿದ್ದಾರೆ ಎಂಬುದನ್ನು ನೋಡಿಕೊಳ್ಳಿ. ಒಳಗೆ ಕಸವಿದ್ದರೆ ಸ್ವಚ್ಛ ಮಾಡಿ. ಇಲ್ಲವೆ ಬಟ್ಟೆ ತೆಗೆದುಕೊಂಡು ಚೆನ್ನಾಗಿ ಕ್ಲೀನ್ ಮಾಡಿ ಮತ್ತೆ ಹಾಗೆಯೇ ಫಿಕ್ಸ್ ಮಾಡಿ.
ಇನ್ನು ಲೈಟರ್ ಹಾಳಾಗಲು ಪ್ರಮುಖ ಕಾರಣ ಅದರ ಟ್ರಿಗರ್ ಲೈನರ್ ಸವೆಯುವುದು. ಹೀಗಾಗಿ ಒಮ್ಮೆಯು ಅದು ಹತ್ತಿಕೊಳ್ಳದಿದ್ದರೆ ಲೈಟರ್ ಬದಲಾಯಿಸಿ. ಏಕೆಂದರೆ ಅದರ ಟ್ರಿಗರ್ ಲೈನರ್ ಸವೆದರೆ ಮತ್ತೆಂದು ಅದು ಕೆಲಸ ಮಾಡುವುದಿಲ್ಲ. ಆದರೆ ಸ್ಪ್ರಿಂಗ್ ಸಮಸ್ಯೆ ಇದ್ದರೂ ಇದು ಹಾಳಾಗುತ್ತದೆ. ಕೆಲವೊಮ್ಮೆ ಅದನ್ನು ಬಿಚ್ಚಿ ನಾವೇ ಸರಿ ಮಾಡಬಹುದು. ಆದರೆ ಬಹಳಷ್ಟು ಮಂದಿ ಲೈಟರ್ ಬಿಚ್ಚಲು ಬರುವುದಿಲ್ಲ, ಜೊತೆಗೆ ಸರಿ ಮಾಡಲು ಸಹ ಸಾಧ್ಯವಿಲ್ಲ ಎಂದುಕೊಂಡಿರುತ್ತಾರೆ. ಆದ್ರೆ ಅದರ ಮೇಲ್ಭಾಗದಿಂದ ಬಿಚ್ಚಿ ಸಣ್ಣ ಪುಟ್ಟ ಸಮಸ್ಯೆಯನ್ನ ನಾವೇ ಬಗೆಹರಿಸಬಹುದು.