ನೀವು ಮನೆಯಲ್ಲಿ ಗೀಸರ್ ಬಳಸುತ್ತಿದ್ದರೆ ಈ ಸ್ಟೋರಿ ತಪ್ಪದೇ ಓದಿ

ಗೀಸರ್ ಸುರಕ್ಷತಾ ಸಲಹೆಗಳು

ಸಾಂದರ್ಭಿಕ ಚಿತ್ರ

ಬೆಂಗಳೂರು : ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಗೀಸರ್ ಬಳಸುತ್ತಾರೆ. ಗೀಸರ್ ಬಳಸುವಾಗ ಹೆಚ್ಚು ಜಾಗೃತರಾಗಿರಬೇಕು. ಇಲ್ಲದಿದ್ದರೆ ಅಪಾಯ ಖಂಡಿತ. ಅದನ್ನು ಬಳಸುವ ಮೊದಲು ಇಲ್ಲಿದೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳು.

ಮಾರುಕಟ್ಟೆಯಲ್ಲಿ ಮುಖ್ಯವಾಗಿ ನಾಲ್ಕು ವಿಧದ ಗೀಸರ್ ಗಳು ಲಭ್ಯವಿದ್ದು, ಇದರಲ್ಲಿ ಎಲೆಕ್ಟ್ರಿಕ್ ವಾಟರ್ ಗೀಸರ್, ಇನ್ ಸ್ಟಂಟ್ ವಾಟರ್ ಗೀಸರ್, ಸ್ಟೋರೇಜ್ ಗೀಸರ್, ಗ್ಯಾಸ್ ಗೀಸರ್ ಸೇರಿವೆ. ಈ ವಿವಿಧ ರೀತಿಯ ಗೀಸರ್ಗಳಿಗೆ ಸುರಕ್ಷತೆ, ಮುನ್ನೆಚ್ಚರಿಕೆಗಳು ಮತ್ತು ನಿರ್ವಹಣೆ ವಿಭಿನ್ನವಾಗಿದೆ.

ಗೀಸರ್ ಸುರಕ್ಷತಾ ಸಲಹೆಗಳು

ಗೀಸರ್ ಅನ್ನು ಸರಿಯಾದ ತಾಪಮಾನದಲ್ಲಿ ಹೊಂದಸಬೇಕು

ಗೀಸರ್ ಅನ್ನು ಬಳಸುವಾಗ ಸರಿಯಾದ ತಾಪಮಾನವನ್ನು ಹೊಂದಿಸಬೇಕು. ಹೆಚ್ಚಿನ ತಾಪಮಾನದ ಸೆಟ್ನಿಂದಾಗಿ ನೀರು ಹೆಚ್ಚಾಗಿ ಬಿಸಿಯಾಗುತ್ತದೆ. ಇದಲ್ಲದೇ ವಿದ್ಯುತ್ ಕೂಡ ವ್ಯರ್ಥವಾಗುತ್ತಿದೆ. ಇದರ ಜೊತೆಗೆ ಗೀಸರ್ ತಾಪಮಾನವನ್ನು ಪರಿಶೀಲಿಸುವುದು ಮುಖ್ಯವಾಗಿದೆ. ಸಾಮಾನ್ಯವಾಗಿ ಗೀಸರ್ ತಾಪಮಾನವನ್ನು 45-40 ಡಿಗ್ರಿಗಳ ನಡುವೆ ಇಡಬೇಕು.

ಗೀಸರ್ ಅನ್ನು ಸುಡುವ ವಸ್ತುಗಳಿಂದ ದೂರವಿಡಿ

ಪೆಟ್ರೋಲ್, ಡೀಸೆಲ್ ಅಥವಾ ಬೆಂಕಿಕಡ್ಡಿಗಳಂತಹ ವಸ್ತುಗಳನ್ನು ಬಾತ್ರೂಮ್ನಲ್ಲಿ ಯಾರೂ ಇಡುವುದಿಲ್ಲ. ಆದರೆ ಕೆಲವೊಮ್ಮೆ ಕೆಲವು ಕಾರಣಗಳಿಂದ ನೀವು ಅವುಗಳನ್ನು ಸ್ನಾನಗೃಹ ಅಥವಾ ಗೀಸರ್ ಸ್ಥಳದಲ್ಲಿ ಬಳಸುತ್ತಿದ್ದರೆ, ನಂತರ ಅವುಗಳನ್ನು ಗೀಸರ್ನಿಂದ ದೂರವಿಡಿ. ಇದಲ್ಲದೇ ಹಲವು ವಿಧದ ಟೋನರ್, ಆಸಿಡ್ ಮುಂತಾದವುಗಳು ಉರಿಯುವ ಗುಣವನ್ನು ಹೊಂದಿದ್ದು, ಗೀಸರ್ ಬಳಿ ಇಟ್ಟರೆ ಅಪಘಾತ ಸಂಭವಿಸಬಹುದು.

ಬಳಕೆಗೆ ಮೊದಲು ಸರ್ವಿಸ್ ಮಾಡಿ

ಅನೇಕ ವರ್ಷಗಳಿಂದ ಗೀಸರ್ ಬಳಕೆ ಮಾಡುತ್ತಿದ್ದರೆ ತಪ್ಪದೇ ಆಗಾಗ ಸರ್ವೀಸ್ ಮಾಡಿಸಬೇಕು. ಈ ಮೂಲಕ ಗೀಸರ್ನಲ್ಲಿ ಯಾವುದೇ ಸಮಸ್ಯೆ ಇದ್ದರೆ ಮುಂಚಿತವಾಗಿ ಪತ್ತೆಹಚ್ಚಬಹುದು. ಈ ಮೂಲಕ ಮುಂದಾಗುವ ಅಪಾಯವನ್ನು ತಪ್ಪಿಸಲು ಸಾಧ್ಯೆವಾಗುತ್ತದೆ.

Leave a Reply

Your email address will not be published. Required fields are marked *