ಚಿಕ್ಕಪೇಟೆ ಜವಳಿ ವ್ಯಾಪಾರಕ್ಕೆ ಸಂಕಷ್ಟ; ಏಪ್ರಿಲ್ನಿಂದ 10–15% ಬೆಲೆ ಏರಿಕೆ ಭೀತಿ.
ಬೆಂಗಳೂರು : ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಇದೀಗ ಬೆಂಗಳೂರಿನ ಚಿಕ್ಕಪೇಟೆಯ ಜವಳಿ ಉದ್ಯಮದಕ್ಕೂ ತಟ್ಟಿದೆ. ಕಡಿಮೆ ಬೆಲೆಗೆ ಮತ್ತು ವಿವಿಧ ಬಗೆಯ ಬಟ್ಟೆಗಳಿಗೆ ಹೆಸರುವಾಸಿಯಾದ ಚಿಕ್ಕಪೇಟೆಯ ರೆಡಿಮೇಡ್ ಉಡುಪುಗಳ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದ್ದು, ಟ್ರೇಡ್ ಆಕ್ಟಿವಿಸ್ಟ್ ಸಜ್ಜನ್ರಾಜ್ ಮೆಹ್ತಾ ಅವರ ಪ್ರಕಾರ ಯುದ್ಧ ಮುಂದುವರಿದರೆ ಏಪ್ರಿಲ್ನಿಂದ ಬಟ್ಟೆಗಳ ಬೆಲೆ ಶೇ. 10-15 ಹೆಚ್ಚಳವಾಗುವ ಸಾಧ್ಯತೆ ಇದೆ.
ಉತ್ಪಾದನಾ ಹಂತದಲ್ಲಿ ಈಗಾಗಲೇ ಶೆ. 30-40ರಷ್ಟು ಬೆಲೆ ಏರಿಕೆಯಾಗಿದ್ದು, ಕಚ್ಚಾ ವಸ್ತುಗಳು, ರಾಸಾಯನಿಕಗಳು ಮತ್ತು ಡೈಗಳ ಕೊರತೆ ಎದುರಾಗಿದೆ. ಇವುಗಳ ಆಮದು ಮತ್ತು ಸಾಗಣೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಸೂರತ್ನಂತಹ ಉತ್ಪಾದನಾ ಕೇಂದ್ರಗಳಲ್ಲಿ ದಾಸ್ತಾನು ಕಡಿಮೆಯಾಗುತ್ತಿದೆ. ಇದು ಚಿಕ್ಕಪೇಟೆಯ ಸಗಟು ವ್ಯಾಪಾರಕ್ಕೆ ಸಮಸ್ಯೆಯಾಗುತ್ತಿದ್ದು, ಯುಗಾದಿ ಮತ್ತು ರಂಜಾನ್ನಂತಹ ಹಬ್ಬಗಳ ಸೀಸನ್ನಲ್ಲಿ ಹೆಚ್ಚುವರಿಯಾಗಿ ಕಾರ್ಮಿಕರ ಕೊರತೆಯೂ ಉದ್ಯಮದ ಮೇಲೆ ಪರಿಣಾಮ ಬೀರಿದೆ.
For More Updates Join our WhatsApp Group :




