ಚಿನ್ನದ ನಾಡು ಕೋಲಾರದಲ್ಲಿ ಸಿದ್ಧರಾಮಯ್ಯ ಸ್ಪರ್ಧೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ..!

ಕೋಲಾರ : ವಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ದೆ ಮಾಡುವುದಾಗಿ ಘೋಷಿಸಿದ್ದಾರೆ. ಕೋಲಾರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ತಮ್ಮ ಮನದಾಳದ ಇಂಗಿತ ಸ್ಪಷ್ಟಪಡಿಸಿದರು. ಇದರಿಂದ ರಾಜ್ಯದ ಜನರಲ್ಲಿ ಹಲವಾರು ದಿನಗಳಿಂದ ಮನೆ ಮಾಡಿದ್ದ ಸಿದ್ಧು ಕ್ಷೇತ್ರದ ಸ್ಪರ್ಧೆ ಕುತೂಹಲಕ್ಕೆ ತೆರೆ ಎಳೆದಂತಾಗಿದೆ. ಆದ್ರೆ ಹೈಕಮಾಂಡ್ ಮೇಲೆ ತಮ್ಮ ಸ್ಪರ್ಧೆಯ ತೀರ್ಮಾನ ಬಿಟ್ಟು ಇನ್ನೂ ಹೈಟೆಕ್ಷನ್ ಕ್ರಿಯೇಟ್ ಮಾಡಿದ್ದಾರೆ.

ಕೋಲಾರದ ಕುರುಬರಪೇಟೆಯ ಮಿನಿ ಕ್ರೀಡಾಂಗಣದಲ್ಲಿ ಸಿದ್ದು ಕೋಲಾರ ಪ್ರವಾಸ ಹಿನ್ನಲೆಯಲ್ಲಿ ಬೃಹತ್ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಆಯೋಜನೆ ಮಾಡಲಾಗಿತ್ತು. ಸಿದ್ದು ಕೋಲಾರದಿಂದ ಸ್ಪರ್ಧೆ ಮಾಡುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಮುಖಂಡರುಗಳು ಮೊದಲೇ ಹೇಳಿದ ಹಿನ್ನಲೆಯಲ್ಲಿ ಈ ಸಮಾವೇಶ ಮಹತ್ವ ಪಡೆದುಕೊಂಡಿತ್ತು. ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಜಿಲ್ಲೆಯ ಜನಪ್ರತಿನಿಧಿಗಳು ಸಿದ್ದರಾಮಯ್ಯ ಅವರು ಈ ಬಾರಿ ಕೋಲಾರದಿಂದಲೇ ಸ್ಪರ್ಧೆ ಮಾಡಬೇಕೆಂಬ ಪಟ್ಟು ಹಿಡಿದಿದ್ದರು. ಇನ್ನು ಜನಸ್ತೋಮ ಮತ್ತು ಮುಖಂಡರ ಒತ್ತಾಯವನ್ನು ಆಲಿಸಿದ ಸಿದ್ದು ತಮ್ಮ ಭಾಷಣದಲ್ಲಿ ತಾವು ಈ ಬಾರಿ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿಯೇ ಬಿಟ್ಟರು.

ನಾನು ಕೋಲಾರದಿಂದ ಸ್ಪರ್ದೆ ಮಾಡುವೆ, ನಿಮ್ಮ ಪ್ರೀತಿ ಅಭಿಮಾನವನ್ನ ನಾನು ತಿರಸ್ಕಾರ ಮಾಡಲಿಕ್ಕೆ ಸಾಧ್ಯವಿಲ್ಲ. ನಾನು ಕೋಲಾರದಿಂದ ಸ್ಪರ್ದೆ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಆದರೆ ತೀರ್ಮಾನ ಮಾಡುವುದು ಹೈಕಮಾಂಡ್ ಗೆ ಬಿಟ್ಟಿದೆ. ಪಕ್ಷದಲ್ಲಿ ಶಿಸ್ತಿರಬೇಕು ಹಾಗಾಗಿ ಹೈಕಮಾಂಡ್ ಒಪ್ಪಿಗೆ ನೀಡಬೇಕಾಗುತ್ತದೆ ಎಂದು ಮಾರ್ಮಿಕವಾಗಿ ತಮ್ಮ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮೊದಲು ಸಿದ್ದರಾಮಯ್ಯ ಕೋಲಾರದಲ್ಲಿದ್ದ ಗುಂಪುಗಾರಿಕೆಯನ್ನು ಶಮನ ಮಾಡಲು ಬೆಂಗಳೂರಿನ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮನೆಗೆ ತೆರಳಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿ ಅಲ್ಲಿಂದಲೇ ತಮ್ಮ ಕಾರಿನಲ್ಲಿ ಕೆ.ಎಚ್.ಮುನಿಯಪ್ಪ ಅವರನ್ನು ಕರೆ ತಂದರು. ಇನ್ನು ತಮ್ಮ ಅಕ್ಕ ಪಕ್ಕ ಕೆ.ಎಚ್.ಎಂ ಮತ್ತು ರಮೇಶ್ ಕುಮಾರ್ ಅವರನ್ನು ಕೂರಿಸಿಕೊಂಡು ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ, ನಾವೆಲ್ಲಾ ಒಗ್ಗಟ್ಟಾಗಿ ಇದ್ದೇವೆ ಎಂಬ ಸಂದೇಶವನ್ನು ರವಾನಿಸಿದರು, ವೇದಿಕೆ ಮೇಲಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಕಾಂಗ್ರೇಸ್  ಪಕ್ಷದಲ್ಲಿ  ಒಂದು ಸಿಸ್ಟಂ ಇದೆ, ಕಮಿಟಿಗಳಿವೆ. ಪ್ರೊಸೆಸ್ ಮುಖಾಂತರ ಮೂಲಕವೇ ಅಭ್ಯರ್ಥಿ ಆಯ್ಕೆಯಾಗಬೇಕು. ಅಲ್ಲಿ ಆಯ್ಕೆಯಾಗಿ ತೀರ್ಮಾನ ಮಾಡಿದರೆ, ಹೃದಯಪೂರ್ವಕವಾಗಿ ನಿಮ್ಮ ಪರ ಕೆಲಸ ಮಾಡುವೆ ಎಂದು ಗೊಂದಲಕ್ಕೆ ತೆರೆ ಎಳೆದಿದರು.

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಕೊನೆ ರಾಜಕೀಯ ಭವಿಷವನ್ನು ಕೋಲಾರದಿಂದ ಕಣಕ್ಕೆ ಇಳಿಯುವ ಆಸೆಯೊಂದಿಗೆ ಘೋಷಣೆ ಮಾಡಿಕೊಂಡಿದ್ದಾರೆ. ರಾಜ್ಯದ ಜನ್ರಲ್ಲಿ ಇದ್ದಂತಹ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಆದ್ರೂ ಅಂತಿಮ ನಿರ್ಧಾರವನ್ನು ಹೈಕಮಾಂಡ್ ಗೆ ಬಿಟ್ಟಿದ್ದೇನೆ ಎಂದು ಹೇಳುವ ಮೂಲಕ ಮತ್ತೆ ಸಿದ್ದು ಸ್ಪರ್ದೆ ವಿಚಾರ ಅಡ್ಡ ಗೋಡೆ ಮೇಲೆ ದೀಪವಿಟ್ಟಂದಾಗಿದೆ..

Pragati TV Social Connect for more latest u

Leave a Reply

Your email address will not be published. Required fields are marked *