ಶಿಲಾಂಗ್: ಕಳೆದ ಆಗಸ್ಟ್ನಲ್ಲಿ ನಡೆದ ಸಾಗರೋತ್ತರ ನರ್ಸ್ಗಳ ಉದ್ಯೋಗ ಮೇಳದಲ್ಲಿ ಮೇಘಾಲಯ 27 ನರ್ಸ್ಗಳು ಜಪಾನ್ನಲ್ಲಿ ಉದ್ಯೋಗಾವಕಾಶವನ್ನು ಪಡೆದಿದ್ದರು. ಈ 27 ನರ್ಸ್ಗಳು ಇದೀಗ ಜಪಾನಿ ಭಾಷೆಯ ತರಬೇತಿ ಕಲಿಕೆ ಪೂರ್ಣಗೊಳಿಸಿದ್ದು, ಇದೀಗ ದೂರದ ದೇಶದಲ್ಲಿ ವೃತ್ತಿಜೀವನದ ಪ್ರಯಾಣ ಆರಂಭಿಸಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ತಮ್ಮ ಹೊಸ ಭಾಷಾ ಕೌಶಲ್ಯದೊಂದಿಗೆ ಇದೀಗ ಈ ನರ್ಸ್ಗಳ ಜಪಾನ್ ವಿವಿಧ ಆಸ್ಪತ್ರೆ ಮತ್ತು ಕೇರ್ ಹೋಮ್ಗಳಲ್ಲಿ ನೇಮಿಸಲಾಗುವುದು ಎಂದು ಮೇಘಾಲಯ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಇದರ ಜೊತೆಗೆ 14 ನರ್ಸ್ಗಳು ಸಿಂಗಾಪೂರ್ನ ಹಲವಾರು ಸಂಸ್ಥೆಗಳಿಗೆ ನೇಮಿಸಲಾಗಿದೆ.
ರಾಜ್ಯ ಸರ್ಕಾರ ಪ್ರತಿ ವರ್ಷ 50 ಸಾವಿರ ಅಭ್ಯರ್ಥಿಗಳಿಗೆ ಮೇಘಾಲಯ ರಾಜ್ಯ ಕೌಶಲ್ಯ ಅಭಿವೃದ್ಧಿ ಸೊಸೈಟಿ ಅಡಿ ಕೌಶಲ್ಯ ಮೇಘಾಲಯ ಯೋಜನೆ ಭಾಗವಾಗಿ ತರಬೇತಿ ಅವಕಾಶವನ್ನು ಒದಗಿಸುತ್ತಿದೆ. ಮುಂದಿನ ವರ್ಷದಲ್ಲಿ 300 ನರ್ಸ್ಗಳನ್ನು ಈ ಯೋಜನೆಯ ಭಾಗವಾಗಿಸುವ ಗುರಿ ಹೊಂದಲಾಗಿದೆ.
ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ, ಈ ಉಪಕ್ರಮದಲ್ಲಿ ಭಾಗಿಯಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. ಈ ವೇಳೆ ಮಾತನಾಡಿದ ಅವರು, ಸಾಗರೋತ್ತರದಲ್ಲಿ ನಮ್ಮ ರಾಜ್ಯದ ನರ್ಸ್ಗಳು ಸೇವೆ ಸಲ್ಲಿಸಲು ಮುಂದಾಗುತ್ತಿರುವುದು ನೋಡುವುದಕ್ಕೆ ಸಂತಸವಾಗಿದೆ.
ಎಲ್ಲಾ ಆಶೀರ್ವಾದ ಮತ್ತು ಅವರ ಕುರಿತು ಸಕಾರಾತ್ಮಕ ವಿಷಯ ಆಲಿಸುವ ಭರವಸೆಯೊಂದಿಗೆ ಅವರನ್ನು ನಾವು ಕಳುಹಿಸುತ್ತಿದ್ದೇವೆ. ಇದೇ ವೇಳೆ ನಾನು ಈ ರೀತಿ ಅವಕಾಶವನ್ನು ಪಡೆಯಲು ಮತ್ತಷ್ಟು ಜನರು ಮುಂಬರುವಂತೆ ಒತ್ತಾಯಿಸುತ್ತೇನೆ. ಕಾರಣ, ಇದು ಕೇವಲ ಸಾಗರೋತ್ತರ ದೇಶದಲ್ಲಿ ಜೀವನೋಪಯ ಕಂಡು ಕೊಳ್ಳುವ ಮಾರ್ಗವಲ್ಲ. ನಿಮ್ಮ ವೃತ್ತಿ ಮತ್ತು ಜ್ಞಾನವನ್ನು ವೃದ್ಧಿಸಿಕೊಳ್ಳಲು ಇದೊಂದು ಅದ್ಬುತ ಅವಕಾಶ ಎಂದರು.