ಭಾರತವು 3.6 ಲಕ್ಷ ಕೋಟಿ ರೂ. ಮೌಲ್ಯದ ಯುದ್ಧ ಸಾಧನ ಖರೀದಿ.

ಭಾರತವು 3.6 ಲಕ್ಷ ಕೋಟಿ ರೂ. ಮೌಲ್ಯದ ಯುದ್ಧ ಸಾಧನ ಖರೀದಿ.

ರಷ್ಯಾದಿಂದ 288 ಎಸ್-400 ಕ್ಷಿಪಣಿಗಳ ಖರೀದಿ ಅನುಮೋದನೆ.

ನವದೆಹಲಿ : ರಷ್ಯಾದಿಂದ ಸುಮಾರು 10,000 ಕೋಟಿ ರೂ ಮೌಲ್ಯದ 288 ಎಸ್-400 ಕ್ಷಿಪಣಿಗಳನ್ನು ಖರೀದಿಸಲು ರಕ್ಷಣಾ ಖರೀದಿ ಮಂಡಳಿ (ಡಿಎಸಿ) ಅನುಮೋದನೆ ನೀಡಿದೆ. ಮೊನ್ನೆಯಷ್ಟೇ ಸರ್ಕಾರವು 114 ರಫೇಲ್ ಯುದ್ಧವಿಮಾನಗಳನ್ನು ಖರೀದಿಸುತ್ತಿರುವುದಾಗಿ ಘೋಷಿಸಿತ್ತು. ಇದರ ಬೆನ್ನಲ್ಲೇ ಇದೀಗ 3.6 ಲಕ್ಷ ಕೋಟಿ ರೂ ಮೌಲ್ಯದ ವಿವಿಧ ಯುದ್ಧ ಸಾಮಗ್ರಿಗಳನ್ನು ಭಾರತ ಖರೀದಿಸಲು ಹೊರಟಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಡಿಎಸಿ ನಿನ್ನೆ ಗುರುವಾರ (ಫೆ. 12) ವಿವಿಧ ಖರೀದಿಗಳಿಗೆ ಎಒಎನ್ (ಅವಶ್ಯಕವೆಂದು ಮಾನ್ಯತೆ) ನೀಡಿದೆ.

ರಷ್ಯಾದಿಂದ 288 ಎಸ್-400 ಕ್ಷಿಪಣಿಗಳನ್ನು ಖರೀದಿಸಲಾಗುತ್ತಿದೆ. ಇದರಲ್ಲಿ 120 ಕಿರು ಶ್ರೇಣಿಯ ಕ್ಷಿಪಣಿಗಳು, 168 ದೂರ ಶ್ರೇಣಿಯ ಕ್ಷಿಪಣಿಗಳು ಸೇರಿವೆ. ಇವನ್ನು ವೇಗದ ಪ್ರಕ್ರಿಯೆಯಲ್ಲಿ (ಎಫ್​ಟಿಪಿ) ತ್ವರಿತವಾಗಿ ಖರೀದಿಸಲಾಗುತ್ತದೆ.

ಆ್ಯಂಟಿ ಟ್ಯಾಂಕ್ ಮೈನ್​ಗಳು (ವಿಭವ್, ಟಿ-72 ಟ್ಯಾಂಕ್​ಗಳು, ಇನ್ಫ್ಯಾಂಟ್ರಿ ಕಾಂಬ್ಯಾಟ್ ವೆಹಿಕಲ್​ಗಳು ಮೊದಲಾದವು ಈ ಪಟ್ಟಿಯಲ್ಲಿ ಇವೆ. ನೌಕಾಸೇನೆಗೆ 4 ಎಂಡಬ್ಲ್ಯು ಮರೈನ್ ಗ್ಯಾಸ್ ಟರ್ಬೈನ್ ಆಧಾರಿತ ಎಲೆಕ್ಟ್ರಿಕ್ ಪವರ್ ಜನರೇಟರ್, ಪಿ-8ಐ ಲಾಂಗ್ ರೇಂಜ್ ರೀಕಾನೈಸಾನ್ಸ್ ಏರ್​ಕ್ರಾಫ್ಟ್ ಖರೀದಿ ಮಾಡಲಾಗುತ್ತದೆ.

ಕರಾವಳಿ ಕಾವಲು ಪಡೆಗೆ ಅದರ ಡಾರ್ನಿಯರ್ ವಿಮಾನಕ್ಕಾಗಿ ಎಲೆಕ್ಟ್ರೋ ಆಪ್ತಿಕಲ್ ಸಿಸ್ಟಂ, ಇನ್​ಫ್ರಾ ರೆಡ್ ಸಿಸ್ಟಂಗಳನ್ನು ಖರೀದಿಸಲು ಒಪ್ಪಲಾಗಿದೆ. ಇದರಿಂದ ಸಾಗರ ರಕ್ಷಣೆಯ ಕಾರ್ಯಕ್ಕೆ ಹೊಸ ಬಲ ಸಿಗುತ್ತದೆ.

ರಫೇಲ್ ಯುದ್ಧವಿಮಾನಗಳು

ಭಾರತೀಯ ವಾಯುಪಡೆಗೆ ಎಸ್-400 ಕ್ಷಿಪಣಿಗಳ ಜೊತೆಗೆ 114 ರಫೇಲ್ ಯುದ್ಧ ವಿಮಾನಗಳ ಖರೀದಿಗೂ ಅನುಮೋದನೆ ಸಿಕ್ಕಿದೆ. ಈ ಪೈಕಿ 90 ಕ್ಷಿಪಣಿಗಳನ್ನು ಭಾರತದಲ್ಲೇ ತಯಾರಿಸಲಾಗುವುದು. ಈ ರಫೇಲ್ ಜೆಟ್​ಗಳು ಭಾರತದ ವಾಯು ರಕ್ಷಣೆಯನ್ನು ಇನ್ನಷ್ಟು ಬಲಗೊಳಿಸಲಿವೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *