ಭಾರತ-ಇಸ್ರೇಲ್: ಹಲವು ಒಪ್ಪಂದಗಳಿಗೆ ಸಹಿ, ಶೀಘ್ರದಲ್ಲೇ FTA ?

ಭಾರತ-ಇಸ್ರೇಲ್: ಹಲವು ಒಪ್ಪಂದಗಳಿಗೆ ಸಹಿ, ಶೀಘ್ರದಲ್ಲೇ FTA ?

ನರೇಂದ್ರ ಮೋದಿ ಇಸ್ರೇಲ್ ಭೇಟಿಯಿಂದ ಬಹುಮುಖ ಫಲಗಳು

ಜೆರುಸಲೆಂ : ನರೇಂದ್ರ ಮೋದಿ ಅವರ ಎರಡು ದಿನಗಳ ಇಸ್ರೇಲ್ ಭೇಟಿ ಹಲವು ಫಲಗಳನ್ನು ನೀಡುತ್ತಿದೆ. ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯೂರಿಟಿ, ಶಿಕ್ಷಣ, ಕೃಷಿ ಹಾಗೂ ಇನ್ನೂ ಹಲವು ಸೆಕ್ಟರ್​ಗಳಲ್ಲಿ ಭಾರತ ಹಾಗೂ ಇಸ್ರೇಲ್ ದೇಶಗಳ ನಡುವೆ ಬಹು ಒಪ್ಪಂದಗಳು ಹಾಗೂ ಎಂಒಯುಗಳಾಗಿವೆ. ಈಗಾಗಲೇ ಪ್ರಬಲವಾಗಿರುವ ಎರಡೂ ದೇಶಗಳ ಸಂಬಂಧ ಇದೀಗ ಮತ್ತಷ್ಟು ಗಟ್ಟಿಗೊಂಡಿದೆ.

ಇಸ್ರೇಲ್ ಕೆಲ ತಂತ್ರಜ್ಞಾನಗಳಲ್ಲಿ ಕ್ಷಮತೆ ಹೊಂದಿದೆ. ಡಿಫೆನ್ಸ್ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಇನ್ನೋವೇಶನ್​ಗಳನ್ನು ಮಾಡಿದೆ. ಕೃಷಿ ಮಾತ್ರವಲ್ಲ, ಹಲವು ಕ್ಷೇತ್ರಗಳಲ್ಲಿ ಇಸ್ರೇಲೀ ಸಂಸ್ಥೆಗಳು ನಾವೀನ್ಯತೆ ಹೊಂದಿವೆ. ಇಸ್ರೇಲ್ ಜೊತೆಗಿನ ಈ ಸಂಬಂಧದಿಂದ ಭಾರತಕ್ಕೆ ವಿವಿಧ ಸ್ತರಗಳಲ್ಲಿ ಲಾಭವಾಗುವ ನಿರೀಕ್ಷೆ ಇದೆ. ಎರಡೂ ದೇಶಗಳ ನಡುವೆ ಡಿಫೆನ್ಸ್ ಸಹಕಾರ ಹೆಚ್ಚಬಹುದು.

ಭಾರತೀಯರ ಕೌಶಲ್ಯಗಳೂ ಕೂಡ ಇಸ್ರೇಲ್​ಗೆ ವರದಾನವಾಗಿವೆ. ಇಸ್ರೇಲ್​ನ ಕಟ್ಟಡ ನಿರ್ಮಾಣ ಮತ್ತು ಕೇರ್​ಗಿವಿಂಗ್ ಸೆಕ್ಟರ್​ಗಳಲ್ಲಿ ಭಾರತೀಯರ ಕೊಡುಗೆ ಗಮನಾರ್ಹವಾಗಿದೆ. ಇಸ್ರೇಲ್ ಭೇಟಿ ವೇಳೆ ನರೇಂದ್ರ ಮೋದಿ ಅವರು ಈ ವಿಚಾರ ಪ್ರಸ್ತಾಪಿಸಿ 2023ರ ಮ್ಯಾನ್​ಪವರ್ ಮೊಬಿಲಿಟಿ ಅಗ್ರೀಮೆಂಟ್​ಗೆ ಕ್ರೆಡಿಟ್ ಕೊಟ್ಟಿದ್ದಾರೆ.

ಎರಡೂ ದೇಶಗಳಿಗೂ ಲಾಭ ತರುವಂತಹ ಟ್ರೇಡ್ ಡೀಲ್ ಸದ್ಯದಲ್ಲೇ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತ್ಯಾನಹು ಅವರನ್ನು ಭೇಟಿ ಮಾಡಿದ ನರೇಂದ್ರ ಮೋದಿ ಹಲವು ವಿಚಾರಗಳ ವಿನಿಮಯ ಮಾಡಿದ್ದಾರೆ. ಬಹಳ ಮಹತ್ವದ ಮುಕ್ತ ವ್ಯಾಪಾರ ಒಪ್ಪಂದದ ವಿಚಾರವನ್ನೂ ಚರ್ಚಿಸಿದ್ದಾರೆ. ಈ ಭೇಟಿ ಬಳಿಕ ಇಬ್ಬರೂ ಕೂಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿ, ‘ಪರಸ್ಪರ ಲಾಭವಾಗುವಂತಹ ಮುಕ್ತ ವ್ಯಾಪಾರ ಒಪ್ಪಂದ ಏರ್ಪಡಲು ಕಾರ್ಯವಹಿಸುತ್ತೇವೆ’ ಎಂದಿದ್ದಾರೆ.

ಇವರ ಹೇಳಿಕೆ ಬಹಳ ಮಹತ್ವದ್ದೆನಿಸಿದೆ. ಭಾರತ ಮತ್ತು ಇಸ್ರೇಲ್ ನಡುವೆ ಎಫ್​ಟಿಎಗಾಗಿ ನಡೆದಿರುವ ಮಾತುಕತೆ ಮತ್ತು ಸಂಧಾನಗಳು ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲೇ ಅಂತಿಮಗೊಳ್ಳುವ ನಿರೀಕ್ಷೆ ಇದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *