ಇಬ್ಬರೂ ಪೈಲಟ್ಗಳು ಸುರಕ್ಷಿತ; ರಕ್ಷಣಾ ಕಾರ್ಯಾಚರಣೆ ಜರುಗುತ್ತಿದೆ
ಪ್ರಯಾಗ್ರಾಜ್: ಭಾರತೀಯ ವಾಯುಪಡೆಯ (ಐಎಎಫ್) ಮೈಕ್ರೋಲೈಟ್ ವಿಮಾನವು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಪತನಗೊಂಡಿದೆ. ಇಬ್ಬರೂ ಪೈಲಟ್ಗಳು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ. ಪ್ರಯಾಗ್ರಾಜ್ನಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಕೆ.ಪಿ. ಕಾಲೇಜು ಬಳಿ ವಿಮಾನವು ಕೆರೆಗೆ ಅಪ್ಪಳಿಸಿದೆ. ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.. ವಿಮಾನ ಪತನಗೊಳ್ಳುತ್ತಿದ್ದಂತೆ ಸ್ಥಳೀಯರಿಗೆ ದೊಡ್ಡ ಶಬ್ದ ಕೇಳಿಬಂದಿದೆ. ಈ ಘಟನೆಯಿಂದ ಆ ಪ್ರದೇಶದಲ್ಲಿ ಭಯಧ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ತಕ್ಷಣ ಸ್ಥಳಕ್ಕೆ ಹೋಗಿ ಇಬ್ಬರೂ ಪೈಲಟ್ಗಳನ್ನು ನೀರಿನಿಂದ ಹೊರಬರಲು ಸಹಾಯ ಮಾಡಿದರು.
For More Updates Join our WhatsApp Group :



