Indian Railway || ಟಿಕೆಟ್ ರದ್ದತಿಯಿಂದ ಭರ್ಜರಿ ಆದಾಯ : ಟಿಕೆಟ್​ ರದ್ದತಿ ಬಗ್ಗೆ ನಿಮಗೆ ಗೊತ್ತು..?

ನೀವು ರೈಲು ಟಿಕೆಟ್ ಅನ್ನು ಬುಕ್ ಮಾಡುತ್ತಿದ್ದರೆ, ಟಿಕೆಟ್ ರದ್ದುಗೊಳಿಸುವ ನಿಯಮಗಳನ್ನು ಖಂಡಿತವಾಗಿ ಅರ್ಥಮಾಡಿಕೊಳ್ಳಿ. ಸಂಪೂರ್ಣ ಮಾಹಿತಿ ಲಭ್ಯ ಇಲ್ಲದೇ ಇದ್ದರೆ ಟಿಕೆಟ್ ರದ್ದತಿ ಸಮಯದಲ್ಲಿ ನೀವು ಹೆಚ್ಚಿನ ಹಣವನ್ನು ಪಾವತಿಸಬೇಕಾಗಬಹುದು.

ಟಿಕೆಟ್ ರದ್ದತಿಯಲ್ಲಿ ರೈಲು ಸಮಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಟಿಕೆಟ್‌ಗಳನ್ನು ಯಾವಾಗ ರದ್ದುಗೊಳಿಸಲಾಗುತ್ತದೆ?, ಇದರ ಬಗ್ಗೆ ನಿಮಗೆ ಅರಿವಿಲ್ಲದಿದ್ರೆ ನಿಮ್ಮ ಹೆಚ್ಚಿನ ಹಣವು ವ್ಯರ್ಥವಾಗಬಹುದು. ಕಳೆದ ಕೆಲವು ವರ್ಷಗಳಲ್ಲಿ ರೈಲ್ವೆ ಇಲಾಖೆ ಟಿಕೆಟ್ ರದ್ದತಿಯಿಂದ ಬರೋಬ್ಬರಿ 1200 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದೆ.

ಟಿಕೆಟ್ ರದ್ದತಿಯಿಂದ 1229 ಕೋಟಿ ರೂಪಾಯಿ ಆದಾಯ: ರೈಲಿನಲ್ಲಿ ವೇಟಿಂಗ್​ ಸಮಸ್ಯೆ ಇರುವ ಕಾರಣ ಹೆಚ್ಚಿನವರು ಮುಂಗಡವಾಗಿ ರೈಲು ಟಿಕೆಟ್ ಬುಕ್​ ಮಾಡುತ್ತಾರೆ. 2021 ಮತ್ತು 2024 ರ ನಡುವೆ ರೈಲ್ವೆ ವೇಟಿಂಗ್ ಟಿಕೆಟ್ ರದ್ದುಗೊಳಿಸುವಿಕೆಯಿಂದ 1229 ಕೋಟಿ ರೂಪಾಯಿಗಳ ಆದಾಯವನ್ನು ರೈಲ್ವೆ ಇಲಾಖೆ ಗಳಿಸಿದೆ. ಆರ್‌ಟಿಐ ಅರ್ಜಿಯ ನಂತರ ರೈಲ್ವೆಯು ಆರ್‌ಟಿಐ ಕಾರ್ಯಕರ್ತ ವಿವೇಕ್ ಪಾಂಡೆ ಅವರಿಗೆ ಈ ಮಾಹಿತಿಯನ್ನು ನೀಡಿದೆ. ನೀವು ರೈಲ್ವೆ ಟಿಕೆಟ್‌ಗಳನ್ನು ಬುಕ್ ಮಾಡುತ್ತಿದ್ದರೆ, ಕೆಲವು ನಿಯಮಗಳನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕವಾಗಿದೆ.

ಟಿಕೆಟ್ ರದ್ದತಿ ಬಳಿಕ ವಾಪಸ್​ ಬರುವ ಹಣವೆಷ್ಟು?: ನೀವು 48 ಗಂಟೆಗಳ ಮುಂಚಿತವಾಗಿ ರೈಲ್ವೆ ಟಿಕೆಟ್ ತೆಗೆದುಕೊಂಡಿದ್ದರೆ ಮತ್ತು ನಿಮ್ಮ ಬರ್ತ್ ಅನ್ನು ಟಿಕೆಟ್‌ನಲ್ಲಿ ದೃಢೀಕರಿಸಿದರೆ, ನೀವು ಪ್ರಯಾಣದ 48 ಗಂಟೆಗಳ ಮೊದಲು ಅದನ್ನು ರದ್ದುಗೊಳಿಸಲು ಬಯಸಿದರೆ.. ನೀವು ಫಸ್ಟ್ ಎಸಿಯಲ್ಲಿ ರೂ.250, ಸೆಕೆಂಡ್ ಎಸಿಯಲ್ಲಿ ರೂ.200, ಥರ್ಡ್ ಎಸಿಯಲ್ಲಿ ರೂ.180, ಸೆಕೆಂಡ್ ಕ್ಲಾಸ್ ಸ್ಲೀಪರ್‌ನಲ್ಲಿ ರೂ.120 ಮತ್ತು ಸಾಮಾನ್ಯ ಟಿಕೆಟ್‌ನಲ್ಲಿ ರೂ.60 ಕಡಿಮೆ ಪಡೆಯುತ್ತೀರಿ

ಟಿಕೆಟ್ರದ್ದತಿ ಬಗ್ಗೆ ನಿಮಗೆ ಗೊತ್ತು?

ಟಿಕೆಟ್ ಆರ್​ಎಸಿ ಅಥವಾ ವೇಟಿಂಗ್​ ಲಿಸ್ಟ್​ನಲ್ಲಿದ್ದರೆ ರೈಲು ನಿರ್ಗಮಿಸುವ ಸಮಯಕ್ಕಿಂತ 3 ಗಂಟೆಗಳ ಮೊದಲು ನಿಮ್ಮ ಟಿಕೆಟ್ ಅನ್ನು ರದ್ದುಗೊಳಿಸುವ ಹಕ್ಕನ್ನು ನೀವು ಹೊಂದಿರುತ್ತೀರಿ. ಇದರಲ್ಲಿಯೂ ಸಹ ರೈಲ್ವೆ ಖಂಡಿತವಾಗಿಯೂ ನಿಮ್ಮಿಂದ ಟಿಕೆಟ್ ಮೊತ್ತವನ್ನು ಕಡಿತಗೊಳಿಸುತ್ತದೆ. ಇದಾದ ನಂತರವೂ ನಿಮಗೆ ಟಿಕೆಟ್ ರದ್ದು ಮಾಡಲು ಸಾಧ್ಯವಾಗದಿದ್ದರೆ, ನಿಮಗೆ ಯಾವುದೇ ಹಣವನ್ನು ಪಾವತಿಸಲಾಗುವುದಿಲ್ಲ.

Leave a Reply

Your email address will not be published. Required fields are marked *