ಹೊಸ ಸಮವಸ್ತ್ರದಲ್ಲಿ ಮಿಂಚಲಿದ್ದಾರೆ ಭಾರತೀಯ ಯೋಧರು

ನವದೆಹಲಿ: ಭಾರತೀಯ ಸೇನೆಯ ಯೋಧರಿಗೆ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದ್ದು, ಜನವರಿ 15ರ ಆರ್ಮಿ ಡೇ ಪರೇಡ್‍ನಲ್ಲಿ ಯೋಧರು ಹೊಸ ಯೂನಿಫಾರ್ಮ್‍ನಲ್ಲಿ ಕಂಗೊಳಿಸಲಿದ್ದಾರೆ ಎಂದು ವರದಿಯಾಗಿದೆ.

ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಭಾರತೀಯ ಸೇನೆ ಮತ್ತು ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ (NIFT) ಜಂಟಿಯಾಗಿ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಿದೆ. ಯೋಧರ ಕಾರ್ಯವೈಖರಿ, ಹವಾಮಾನಕ್ಕೆ ಅನುಗುಣವಾಗಿ ಹೊಸ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗಿದೆ ಎಂದು ಮೂಲಗಳಿಂದ ವರದಿಯಾಗಿದೆ

ಯೋಧರ ಹೊಸ ಸಮವಸ್ತ್ರ ಯಾವುದೇ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ. ಬದಲಾಗಿ ವಿವಿಧ ಸೇನೆಯ ಆಯಾ ಬ್ಯಾಚ್‍ಗೆ ಉನ್ನತ ಅಧಿಕಾರಿಗಳು ಈ ಸಮವಸ್ತ್ರವನ್ನು ಯೋಧರಿಗೆ ವಿತರಿಸಲಿದ್ದಾರೆ. 13 ಲಕ್ಷಕ್ಕೂ ಹೆಚ್ಚಿನ ಯುದ್ಧಕ್ಕೆ ಪೂರಕವಾದ (ಬಿಡಿಎಸ್) ಸಮವಸ್ತ್ರವನ್ನು ತಯಾರಿಕೆಗಾಗಿ ಟೆಂಡರ್ ನೀಡಲಾಗಿದೆ

ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವ ಪ್ರಕಾರ, ಭದ್ರತೆಯ ದೃಷ್ಟಿಯಿಂದ ಹೊಸ ಸಮವಸ್ತ್ರ ಮಾರುಕಟ್ಟೆಯಲ್ಲಿ ಸಿಗಲ್ಲ. ಹಾಗಾಗಿ ಒಂದು ಕಂಪೆನಿಗೆ ಟೆಂಡರ್ ಕೊಡಲಾಗಿದೆ. ಅವರು ವಿವಿಧ ಗಾತ್ರದ ಸಮವಸ್ತ್ರವನ್ನು ತಯಾರಿಕೆಯಲ್ಲಿ ತೊಡಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತೀಯ ಗೃಹ ಸಚಿವಾಲಯದ ಪ್ರಕಾರ, ಯೋಧರು ವಿವಿಧ ಪ್ರದೇಶ, ಹವಾಮಾನ ಪರಿಸ್ಥಿತಿಯನ್ನು ಗಮನಿಸಿಕೊಂಡು ಆಯಾ ವಾತಾವರಣಕ್ಕೆ ಅನುಗುಣವಾಗಿ ಸಮವಸ್ತ್ರವನ್ನು ವಿನ್ಯಾಸಗೊಳಿಸಲಾಗುತ್ತಿದೆ. ಈಗಿರುವ ಟೆರ್ರಿಕಾಟ್ ಸಮವಸ್ತ್ರ ಯೋಧರಿಗೆ ಅಷ್ಟು ಆರಾಮದಾಯಕವಾಗಿ ಇಲ್ಲದೆ ಇರುವುದರಿಂದಾಗಿ ಹೊಸ ಸಮವಸ್ತ್ರ ವಿನ್ಯಾಸಗೊಳಿಸಲಾಗಿದೆ

ಈ ಹಿಂದೆ ಮೂರು ಬಾರಿ ಭಾರತೀಯ ಯೋಧರ ಸಮವಸ್ತ್ರದಲ್ಲಿ ಬದಲಾವಣೆ ಆಗಿತ್ತು. ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ಬೇರೆ, ಬೇರೆ ಆದಾಗ ಸಮವಸ್ತ್ರದಲ್ಲೂ ಬದಲಾವಣೆ ತರಲಾಯಿತು. ಆ ಬಳಿಕ 1980ರಲ್ಲಿ ಬದಲಾವಣೆ ಮಾಡಲಾಯಿತು. ನಂತರ 2005ರಲ್ಲಿ ಸಿಆರ್‍ಪಿಎಫ್ ಮತ್ತು ಬಿಎಸ್‍ಎಫ್ ಸೈನ್ಯದ ಸಮವಸ್ತ್ರದಲ್ಲಿ ಬದಲಾವಣೆ ಆಗಿತ್ತು

Pragati TV Social Connect for more latest u

Leave a Reply

Your email address will not be published. Required fields are marked *