IPL 2026 ಹರಾಜು ಅಪ್ಡೇಟ್ – ಕೊನೆಯ ಕ್ಷಣದ ಬಂಪರ್ ಬದಲಾವಣೆ!

IPL 2026 ಹರಾಜು ಅಪ್ಡೇಟ್ – ಕೊನೆಯ ಕ್ಷಣದ ಬಂಪರ್ ಬದಲಾವಣೆ!

RCB ಮಾಜಿ ಆಟಗಾರ ಸ್ವಸ್ತಿಕ್ ಚಿಕಾರಿಗೆ ಅದೃಷ್ಟದ ಬಾಗಿಲು ತೆರೆಯಿತು.

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಆಕ್ಷನ್ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಪ್ರಕಟಿಸಿದ್ದ 350 ಆಟಗಾರರ ಪಟ್ಟಿಗೆ 9 ಮಂದಿಯನ್ನು ಮತ್ತೆ ಸೇರ್ಪಡೆಗೊಳಿಸಲಾಗಿದೆ. ಹೀಗೆ ಸೇರ್ಪಡೆಗೊಂಡ ಆಟಗಾರರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಆಟಗಾರ ಕೂಡ ಇರುವುದು ವಿಶೇಷ.

ಐಪಿಎಲ್ 2025 ರಲ್ಲಿ ಆರ್​ಸಿಬಿ ತಂಡದಲ್ಲಿ ಕಾಣಿಸಿಕೊಂಡಿದ್ದ ಸ್ವಸ್ತಿಕ್ ಚಿಕಾರಗೆ 350 ಆಟಗಾರರ ಶಾರ್ಟ್​ ಲಿಸ್ಟ್​ನಲ್ಲಿ ಸ್ಥಾನ ಲಭಿಸಿರಲಿಲ್ಲ. ಇದೀಗ ಪರಿಷ್ಕೃತ ಪಟ್ಟಿಯಲ್ಲಿ ಸ್ವಸ್ತಿಕ್ ಅವರನ್ನು ಸೇರ್ಪಡೆಗೊಳಿಸಿದ್ದಾರೆ. ಹಾಗೆಯೇ ಇನ್ನು 8 ಆಟಗಾರರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇವರಲ್ಲಿ ಆಸ್ಟ್ರೇಲಿಯಾ ಆಟಗಾರ ಕ್ರಿಸ್ ಗ್ರೀನ್ ಕೂಡ ಇರುವುದು ವಿಶೇಷ.

ಹರಾಜು ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ 9 ಆಟಗಾರರು:

  • ಮಣಿಶಂಕರ್ ಮುರಾಸಿಂಗ್ – ಮೂಲ ಬೆಲೆ: ರೂ. 30 ಲಕ್ಷ ರೂ.
  • ಸ್ವಸ್ತಿಕ್ ಚಿಕಾರ – ಮೂಲ ಬೆಲೆ: ರೂ. 30 ಲಕ್ಷ ರೂ.
  • ವೀರಂದೀಪ್ ಸಿಂಗ್ – ಮೂಲ ಬೆಲೆ: 30 ಲಕ್ಷ ರೂ.
  • ಎಥಾನ್ ಬಾಷ್ – ಮೂಲ ಬೆಲೆ: 75 ಲಕ್ಷ ರೂ.
  • ಕ್ರಿಸ್ ಗ್ರೀನ್ – ಮೂಲ ಬೆಲೆ: 75 ಲಕ್ಷ ರೂ.
  •  ಕೆಎಲ್ ಶ್ರೀಜಿತ್ – ಮೂಲ ಬೆಲೆ: ರೂ. 30 ಲಕ್ಷ
  • ವಿರಾಟ್ ಸಿಂಗ್ – ಮೂಲ ಬೆಲೆ: 30 ಲಕ್ಷ ರೂ.
  • ರಾಹುಲ್ ರಾಜ್ ನಾಮಲ – ಮೂಲ ಬೆಲೆ: ರೂ. 30 ಲಕ್ಷ
  • ಚಾಮ ಮಿಲಿಂದ್ – ಮೂಲ ಬೆಲೆ: ರೂ. 30 ಲಕ್ಷ

359 ಆಟಗಾರರು:

ಈ ಬಾರಿಯ ಹರಾಜಿನಲ್ಲಿ ಒಟ್ಟು 359 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ 350 ಆಟಗಾರರಲ್ಲಿ 246 ಭಾರತೀಯರು ಮತ್ತು 113 ವಿದೇಶಿ ಆಟಗಾರರು ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾ ಪರ ಆಡಿದ 16 ಆಟಗಾರರಿದ್ದಾರೆ. ಇನ್ನುಳಿದ 231 ಆಟಗಾರರು ದೇಶೀಯ ಟೂರ್ನಿ ಆಡಿದ ಕ್ರಿಕೆಟಿಗರು.

ಹಾಗೆಯೇ 113 ವಿದೇಶೀ ಆಟಗಾರರಲ್ಲಿ ರಾಷ್ಟ್ರೀಯ ತಂಡದ ಪರ ಆಡಿದ ಆಟಗಾರರ ಸಂಖ್ಯೆ 97. ಇನ್ನು ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯದ 16 ವಿದೇಶಿ ಆಟಗಾರರು ಕೂಡ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಟಗಾರರ ಮೂಲ ಬೆಲೆ ಎಷ್ಟು?

ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 359 ಆಟಗಾರರಲ್ಲಿ 40 ಮಂದಿ ತಮ್ಮ ಮೂಲ ಬೆಲೆ 2 ಕೋಟಿ ರೂ. ಎಂದು ಘೋಷಿಸಿದ್ದಾರೆ. ಇನ್ನು 9 ಆಟಗಾರರ ಬೇಸ್ ಪ್ರೈಸ್ 1.50 ಕೋಟಿ ರೂ. ಹಾಗೆಯೇ 4 ಆಟಗಾರರು 1.25 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ.

17 ಆಟಗಾರರು 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡರೆ, 43 ಆಟಗಾರರು ತಮ್ಮ ಆರಂಭಿಕ ಬೆಲೆ 75 ಲಕ್ಷ ರೂ. ಎಂದು ತಿಳಿಸಿದ್ದಾರೆ. ಹಾಗೆಯೇ 50 ಲಕ್ಷ ರೂ. ಮೂಲ ಬೆಲೆ ಹೊಂದಿರುವ 4 ಆಟಗಾರರು, 40 ಲಕ್ಷ ರೂ. ಮೂಲ ಬೆಲೆ ಘೋಷಿಸಿರುವ 7 ಆಟಗಾರರು ಈ ಪಟ್ಟಿಯಲ್ಲಿದ್ದಾರೆ. ಇದಲ್ಲದೆ 30 ಲಕ್ಷ ರೂ. ಮೂಲ ಬೆಲೆಯೊಂದು 235 ಆಟಗಾರರ ಹೆಸರು ಕಾಣಿಸಿಕೊಂಡಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *