IPL 2026: ರಘುವಂಶಿ ಸ್ಫೋಟಕ ಶತಕ.

IPL 2026: ರಘುವಂಶಿ ಸ್ಫೋಟಕ ಶತಕ.

55 ಎಸೆತಗಳಲ್ಲಿ ಶತಕ ಬಾರಿಸಿ ಕೆಕೆಆರ್‌ಗೆ ಬಲ ತುಂಬಿದ ಯುವ ಬ್ಯಾಟ್ಸ್‌ಮನ್.

ಮೂರು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ 2026 ರ ಐಪಿಎಲ್​ನಲ್ಲಿಮಾರ್ಚ್​ 29 ರಿಂದ ತನ್ನ ಅಭಿಯಾನವನ್ನು ಶುರುಮಾಡಿದೆ. ಕೆಕೆಆರ್ ತಂಡ ತನ್ನ ಮೊದಲ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಹೀಗಾಗಿ ಈ ಪಂದ್ಯಕ್ಕೆ ಬಲಿಷ್ಠ ಪ್ಲೇಯಿಂಗ್ 11 ಕಟ್ಟುವ ಸಲುವಾಗಿ ಕೆಕೆಆರ್ ಫ್ರಾಂಚೈಸಿ ತಮ್ಮ ತಂಡದೊಳಗೆ ಎರಡೆರಡು ತಂಡಗಳನ್ನು ನಿರ್ಮಿಸಿ ಅಭ್ಯಾಸ ಪಂದ್ಯವನ್ನು ಆಡಿತು. ಅದರಲ್ಲಿ ತಂಡದಲ್ಲಿರುವ 21 ವರ್ಷದ ಯುವ ಬ್ಯಾಟ್ಸ್‌ಮನ್ ಅಂಗ್‌ಕ್ರಿಶ್ ರಘುವಂಶಿ ಕೇವಲ 55 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿ ತಂಡದಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಮಾರ್ಚ್ 20 ರ ಶುಕ್ರವಾರದಂದು ತಮ್ಮ ತವರು ಮೈದಾನವಾದ ಈಡನ್ ಗಾರ್ಡನ್ಸ್‌ನಲ್ಲಿ ತನ್ನ ಮೊದಲ ಅಭ್ಯಾಸ ಪಂದ್ಯವನ್ನು ಆಡಿತು. ಇಡೀ ತಂಡವನ್ನು ಗೋಲ್ಡ್ ನೈಟ್ಸ್ ಮತ್ತು ಪರ್ಪಲ್ ನೈಟ್ಸ್ ಎಂಬ ಎರಡು ಪ್ರತ್ಯೇಕ ತಂಡಗಳಾಗಿ ವಿಂಗಡಿಸಲಾಗಿತ್ತು. ಈ ಪಂದ್ಯದಲ್ಲಿ ಗೋಲ್ಡ್ ನೈಟ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ 199 ರನ್ ಕಲೆಹಾಕಿತು. ತಂಡದ ಪರ ರಿಂಕು ಸಿಂಗ್ 40 ರನ್ ಗಳಿಸಿದರೆ, ಹೊಸ ಆರಂಭಿಕ ಆಟಗಾರ ಟಿಮ್ ಸೀಫರ್ಟ್ 30 ರನ್ ಗಳಿಸಿದರು. ಯುವ ಬ್ಯಾಟ್ಸ್‌ಮನ್ ಸಾರ್ಥಕ್ ರಂಜನ್ ಕೂಡ 37 ರನ್​ಗಳ ಕಾಣಿಕೆ ನೀಡಿದರು. ಇತ್ತ ಪರ್ಪಲ್ ನೈಟ್ಸ್ ತಂಡದ ಪರ ವೇಗಿ ಕಾರ್ತಿಕ್ ತ್ಯಾಗಿ 3 ವಿಕೆಟ್ ಪಡೆದರು.

ಏಕೆಂದರೆ ಶ್ರೇಯಸ್ ಅಯ್ಯರ್ ನಿರ್ಗಮನದ ಬಳಿಕ ತಂಡದ ಬ್ಯಾಟಿಂಗ್‌ ವಿಭಾಗ ಬಲಹೀನವಾಗಿ ಕಾಣುತ್ತಿತ್ತು. ಆದರೆ ಈ ಬಾರಿ ಕೆಲವರ ಆಗಮನದ ಬಳಿಕ ಅದು ಬಲಿಷ್ಠವಾಗಿ ಕಾಣುತ್ತಿದೆ. ಅಭ್ಯಾಸ ಪಂದ್ಯದಲ್ಲಿ ಶತಕ ಬಾರಿಸಿರುವ ರಘುವಂಶಿ, ಲೀಗ್​ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *